ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಧ್ವಜಕ್ಕೆ ತಮಿಳರ ಕಿರಿಕ್

Last Updated 1 ಜನವರಿ 2020, 22:24 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಕಿಲಗೆರೆ ಗ್ರಾಮದ ಒಂಬತ್ತು ಯುವಕರು ಸಂಚರಿಸುತ್ತಿದ್ದ ವಾಹನದಲ್ಲಿ ಅಳವಡಿಸಿದ್ದ ಕನ್ನಡ ಧ್ವಜವನ್ನು ತೆರವುಗೊಳಿಸಬೇಕು ಎಂದು ಕೊಯಮತ್ತೂರಿನಲ್ಲಿ ಕೆಲವು ‌ತಮಿಳರು ಒತ್ತಡ ಹಾಕಿದ್ದಾರೆ. ಇದಕ್ಕೊಪ್ಪದ ಕನ್ನಡಿಗರು, ಅವರೊಂದಿಗೆ ಮಾತಿನ ಚಕಮಕಿ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಿಲಗೆರೆ ಗ್ರಾಮದ ಯುವಕರ ತಂಡ ಹೊಸ ವರ್ಷಾಚರಣೆ ಪ್ರಯುಕ್ತ ಕೊಯಮತ್ತೂರು ಬಳಿಯ ಸದ್ಗುರು ಅವರ ಈಶಾ ಫೌಂಡೇಷನ್‌ಗೆ ಭೇಟಿ ನೀಡಲು ಸೋಮವಾರ ಬೆಳಿಗ್ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಶಿವಕುಮಾರ್, ‘ಅಲ್ಲಿನವರು ಬಾವುಟ ತೆಗೆಯುವಂತೆ ಹೇಳಿದರು. ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಪಟ್ಟು‌ ಹಿಡಿದೆವು. ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಬಾವುಟ ತೆಗೆಸಿದ್ದರಂತೆ. ಹಾಗಾಗಿ, ನಾವೂ ತೆಗೆಯಬೇಕು ಎಂಬುದು ವಾದ. ನಾವು ಆ ರೀತಿ‌ ಮಾಡಿಲ್ಲ. ಅವರು ಮಾಡಿದ್ದಕ್ಕೆ ನಮಗೆ ಏಕೆ‌ ಮಾಡುತ್ತೀರಿ ? ಎಂದು ನಾವು ಪಟ್ಟು‌ ಸಡಿಸಲಿಲ್ಲ. ನಂತರ ಅಲ್ಲಿಂದ ಹೋದರು’ ಎಂದು‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT