ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಕೋಡಿ ಬಿದ್ದ ಕೃಷ್ಣಯ್ಯನ ಕಟ್ಟೆ: 25 ವರ್ಷಗಳ ನಂತರ ಜಲ ವೈಭವ

Last Updated 29 ಆಗಸ್ಟ್ 2022, 7:09 IST
ಅಕ್ಷರ ಗಾತ್ರ

ಯಳಂದೂರು (ಚಾಮರಾಜನಗರ): ತಾಲ್ಲೂಕಿನ ಪ್ರಸಿದ್ಧ ಕೃಷ್ಣಯ್ಯನ ಕಟ್ಟೆ ಜಲಪಾತ ಸೋಮವಾರಮುಂಜಾನೆ ಕೋಡಿಬಿದ್ದು ಹಾಲ್ನೊರೆ ಚೆಲ್ಲಿತು.

ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಭಾನುವಾರ ರಾತ್ರಿಯಿಂದ ಮಳೆಯಾಗುತ್ತಿದ್ದು, ಸೋಮವಾರವೂ ಮಳೆ ಮುಂದುವರೆದಿದೆ. ಕಾಡಂಚಿನ ಜಲಾಶಯಕ್ಕೆ ನೂರಾರು ತೊರೆ, ನೀರಿನ ಬಗ್ಗೆಗಳು ಚಿಮ್ಮಿ ಹರಿಯುತ್ತಿದೆ. ಇದರಿಂದ ಕೃಷ್ಣಯ್ಯನ ಕಟ್ಟೆ ಮುಂಜಾನೆ ತುಂಬಿ ಕೋಡಿ‌ ಬಿದ್ದಿದೆ.

10 ಚದರ ಮೈಲಿ ಸುತ್ತಳತೆಯ ಜಲಾಶಯವನ್ನು, ಹಿನ್ನಿರಿನ ನಡುವೆ ಕಂಗೊಳಿಸುವ ಬನದ ವೈಭವದ ಸೊಬಗನ್ನು ಕಾಣಲು ಅಕ್ಕ ಪಕ್ಕದ ಗ್ರಾಮಗಳ ಜನರು ಮುಗಿಬಿದ್ದಿದ್ದಾರೆ.

25 ವರ್ಷಗಳ ನಂತರ ಮೊದಲ ಬಾರಿಗೆ ಕೃಷ್ಣಯ್ಯನ ಕಟ್ಟೆ ತುಂಬಿ ತುಳುಕುತ್ತಿದೆ.

ಕೋಡಿ ಬಿದ್ದ ಯಡಿಯೂರು ಕೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ‌ ನೀರು

ಸಂತೇಮರಹಳ್ಳಿ: ಹೋಬಳಿ ಕೇಂದ್ರದಿಂದ ಚಾಮರಾಜನಗರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ‌ ನಡುವೆ ಬರುವ ಯಡಿಯೂರು ಕೆರೆ ಕೋಡಿ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ಬಸ್ ಸೇರಿದಂತೆ ವಾಹನಗಳ ಸಂಚಾರ ಸ್ಥಗಿತವಾಗಿದೆ.

ಈಚೆಗೆ ಈ ಕೆರೆಗೆನೀರು ತುಂಬಿಸಲಾಗಿತ್ತು. ಮಳೆಯಿಂದಾಗಿ ಕೆರೆ ಕೋಡಿ ಹರಿದಿದೆ. ಸುತ್ತಲಿನ ಕೃಷಿ ಜಮೀನುಗಳಿಗೂ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT