ಕೊಳ್ಳೇಗಾಲ: ಬೆಂಗಳೂರು ಮೂಲದ ಪ್ರಯಾಣಿಕರು ಬಸ್ನಲ್ಲಿಯೇ ಬಿಟ್ಟುಹೋಗಿದ್ದ ಅಮೂಲ್ಯ ವಸ್ತುಗಳಿದ್ದ ಬ್ಯಾಗ್ನ್ನು ಕೆಎಸ್ಆರ್ಟಿಸಿ ಸಿಬ್ಬಂದಿ ಸುರಕ್ಷಿತವಾಗಿ ವಾರಸುದಾರರಿಗೆ ಮರಳಿಸಿದ್ದಾರೆ.

ಬೆಂಗಳೂರಿನ ಅಜಯ್ ಎಂಬುವರು ಅ.5ರಂದು ಹನೂರಿನಿಂದ ಕೊಳ್ಳೇಗಾಲಕ್ಕೆ ಮೈಸೂರು ಗ್ರಾಮಾಂತರ ವಿಭಾಗದ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಬೆಳೆಸಿದ್ದರು. ಬಸ್ನಲ್ಲಿಯೇ ಬ್ಯಾಗ್ ಬಿಟ್ಟು ಕೊಳ್ಳೇಗಾಲ ನಿಲ್ದಾಣದಲ್ಲಿ ಇಳಿದು ಹೋಗಿದ್ದರು. ಬಳಿಕ ಬ್ಯಾಗ್ ಮರೆತಿರುವುದು ಗಮನಕ್ಕೆ ಬಂದ ಕೂಡಲೇ ಡಿಪೋ ಅಧಿಕಾರಿ ಎಚ್.ಡಿ.ದಿನೇಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಕೂಡಲೇ ನಿರ್ದಿಷ್ಟ ಬಸ್ ನಿರ್ವಾಹಕರನ್ನು ಸಂಪರ್ಕಿಸಿದಾಗ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಮರಳಿ ಪ್ರಯಾಣಿಕರ ಕೈಸೇರಿದೆ.

‘ಪ್ರಯಾಣಿಕರು ಬಸ್ನಲ್ಲಿ ಪ್ರಯಾಣಿಸುವಾಗ ಮೈ ಮೇಲಿರುವ ಬಂಗಾರ, ಲಗೇಜ್ ಹಾಗೂ ಮಕ್ಕಳ ಬಗ್ಗೆ ಜಾಗರೂಕರಾಗಿರಬೇಕು. ಪ್ರಯಾಣಿಕರ ನೆರವಿಗೆ ಕೆಎಸ್ಆರ್ಟಿಸಿ ಸದಾ ಸಿದ್ಧವಿದೆ’ ಎಂದು ದಿನೇಶ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.