ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್ಗಳ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಬಲಗೈ ವೇಗಿ ಜಸ್ಪ್ರೀತ್ ಬೂಮ್ರಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಭಾರತದ ಪರ ಅಗ್ರ 10ರ ಪಟ್ಟಿಯಲ್ಲಿರುವ ಏಕಮಾತ್ರ ಬೌಲರ್ ಬೂಮ್ರಾ ಆಗಿದ್ದಾರೆ. ಈ ನಡುವೆ ಮೂರು ಸ್ಥಾನಗಳ ಬಡ್ತಿ ಪಡೆದಿರುವ ಮೊಹಮ್ಮದ್ ಸಿರಾಜ್ ಜೀವನಶ್ರೇಷ್ಠ 12ನೇ ಸ್ಥಾನ ಅಲಂಕರಿಸಿದ್ದಾರೆ.

ಅಗ್ರಸ್ಥಾನದಲ್ಲಿರುವ ಬೂಮ್ರಾ 885 ಹಾಗೂ 12ನೇ ಸ್ಥಾನಲ್ಲಿರುವ ಸಿರಾಜ್ 718 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಏಳು ವಿಕೆಟ್ಗಳನ್ನು ಗಳಿಸಿದ್ದರು.

ಭಾರತದ ರವೀಂದ್ರ ಜಡೇಜ 17ನೇ ಸ್ಥಾನ ಕಾಯ್ದುಕೊಂಡಿದ್ದು, ಕುಲದೀಪ್ ಯಾದವ್ ಏಳು ಸ್ಥಾನಗಳ ಬಡ್ತಿ ಪಡೆದು 21ಕ್ಕೆ ತಲುಪಿದ್ದಾರೆ.

ಟೆಸ್ಟ್ ಬ್ಯಾಟರ್ಗಳ ವಿಭಾಗದಲ್ಲಿ ಇಂಗ್ಲೆಂಡ್ನ ಜೋ ರೂಟ್ 908 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಟಾಪ್ 10ರ ಪೈಕಿ ಭಾರತದ ಯಶಸ್ವಿ ಜೈಸ್ವಾಲ್ ಎರಡು ಸ್ಥಾನಗಳ ಕುಸಿತ ಕಂಡು 7ನೇ ಸ್ಥಾನಕ್ಕೆ (779) ತಲುಪಿದ್ದಾರೆ. ರಿಷಭ್ ಪಂತ್ 8ನೇ ಸ್ಥಾನ (761) ಕಾಯ್ದುಕೊಂಡಿದ್ದಾರೆ.

ನಾಯಕ ಶುಭಮನ್ ಗಿಲ್ ರ್ಯಾಂಕಿಂಗ್ನಲ್ಲೂ ಬದಲಾವಣೆಯಾಗಿಲ್ಲ. 722 ರೇಟಿಂಗ್ ಅಂಕಗಳೊಂದಿಗೆ 13ನೇ ಸ್ಥಾನದಲ್ಲಿದ್ದಾರೆ. ಕೆ.ಎಲ್ ರಾಹುಲ್ ನಾಲ್ಕು ಸ್ಥಾನ ಬಡ್ತಿ ಪಡೆದು 35ಕ್ಕೆ ತಲುಪಿದ್ದಾರೆ.

ರವೀಂದ್ರ ಜಡೇಜ ಆರು ಸ್ಥಾನಗಳ ಬಡ್ತಿ ಪಡೆದು 25ಕ್ಕೆ ತಲುಪಿದ್ದಾರೆ. ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯಲ್ಲೂ ಜಡೇಜ 430 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ರಶೀದ್ಗೆ 2ನೇ ಸ್ಥಾನ...

ಐಸಿಸಿ ಟ್ವೆಂಟಿ-20 ಬೌಲರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಫ್ಗಾನಿಸ್ತಾನದ ರಶೀದ್ ಖಾನ್ ಆರು ಸ್ಥಾನಗಳ ಜಿಗಿತ ಕಂಡು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಈ ವಿಭಾಗದಲ್ಲಿ ಭಾರತದ ವರುಣ್ ಚಕ್ರವರ್ತಿ ಅಗ್ರಸ್ಥಾನದಲ್ಲಿದ್ದಾರೆ. ಕುಲದೀಪ್ ಯಾದವ್ ಎರಡು ಸ್ಥಾನ ಬಡ್ತಿ ಪಡೆದು 11ನೇ ಸ್ಥಾನ ಅಲಂಕರಿಸಿದ್ದಾರೆ.

ಟಿ20 ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಮಿಷೆಲ್ ಮಾರ್ಷ್ 13 ಸ್ಥಾನಗಳ ಬಡ್ತಿ ಪಡೆದು ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ಭಾರತದ ಅಭಿಷೇಕ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ.
.ಮಾಜಿ ಸಹ ಆಟಗಾರನ ಮೇಲೆ ಬ್ಯಾಟ್ ಬೀಸಿದ ಪೃಥ್ವಿ ಶಾ: ಮೈದಾನದಲ್ಲಿ ನಡೆದಿದ್ದೇನು?. ICC ತಿಂಗಳ ಆಟಗಾರ ಪ್ರಶಸ್ತಿ: ಅಭಿಷೇಕ್ ಸೇರಿದಂತೆ ಮೂವರು ಭಾರತೀಯರ ನಾಮನಿರ್ದೇಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.