ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮಗಳ ಬಗ್ಗೆ ಸಚಿತ್ರ ವಿವರಗಳನ್ನು ಹೊಂದಿರುವ, ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹಾಗೂಎಚ್.ಸಿ.ಪೂರ್ಣೇಶ ಅವರು ಬರೆದಿರುವ ‘ಜೇನ್ಹಿರ್ಕಾದ ನಾಡಿನಲ್ಲಿ’ ಕೃತಿ ಶುಕ್ರವಾರ ಬಿಡುಗಡೆಯಾಗಲಿದೆ.

ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಿದ್ಧವಾಗಿರುವ ಕೃತಿಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬಿಡುಗಡೆ ಮಾಡಲಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ವಿ.ಏಡುಕುಂಡಲು, ಕಾವೇರಿ ವನ್ಯಧಾಮದ ಡಿಸಿಎಫ್ ಡಾ.ಎಸ್.ರಮೇಶ್ ಅವರು ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದ ಎರಡು ಪ್ರಮುಖ ವನ್ಯಧಾಮಗಳಾದ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿರುವ ವನ್ಯಜೀವಿಗಳು, ಗಿಡಮರಗಳು ಹಾಗೂ ಈ ಪ್ರದೇಶದಲ್ಲಿ ನೆಲೆಸಿರುವ ಮೂಲನಿವಾಸಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪುಸ್ತಕ ಒಳಗೊಂಡಿದೆ.

ಸುಂದರ ಹುಲ್ಲುಗಾವಲಿನಿಂದ ಕೂಡಿದ ಈ ಅರಣ್ಯ ಪ್ರದೇಶಕ್ಕೆ ಕಾವೇರಿ ಹಾಗೂ ಪಾಲಾರ್ ನದಿಗಳು ಜೀವಾಧಾರ. ಜೇನ್ ಹೀರ್ಕಾ ಅಥವಾ ತರಕರಡಿ, ಬೆಟ್ಟಳಿಲು, ಕೊಳ್ಳೇಗಾಲದ ನೆಲಹಲ್ಲಿ, ನೀರುನಾಯಿ, ಆನೆ, ಕೆನ್ನಾಯಿಗಳು ಸೇರಿದಂತೆ ಹಲವು ಪ್ರಾಣಿ ಪ್ರಭೇದಗಳು ಇಲ್ಲಿವೆ. ಇತ್ತೀಚೆಗೆ ಹುಲಿಗಳ ಓಡಾಟವೂ ಹೆಚ್ಚಾಗಿದೆ. ಮಲೆ ಮಹದೇಶ್ವರ ವನ್ಯಧಾಮವು ಶೀಘ್ರದಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆಯಾಗುವುದು ನಿಚ್ಚಳವಾಗಿದೆ.

‘ಈ ಅರಣ್ಯ ಪ್ರದೇಶದಲ್ಲಿರುವ43ಸಸ್ತನಿಗಳು,ಪಕ್ಷಿಗಳು,ಸರಿಸೃಪಗಳು,ಚಿಟ್ಟೆ ಮತ್ತು ಮೀನುಗಳ ಬಗ್ಗೆ ಸುಂದರ ಚಿತ್ರಗಳೊಂದಿಗೆ ವಿವರಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. 140 ಪುಟಗಳ ಪುಸ್ತಕವು 62 ಚಿತ್ರಗಳನ್ನು ಹೊಂದಿದೆ’ ಎಂದು ಸಂಜಯ್ ಗುಬ್ಬಿ ಅವರು ಮಾಹಿತಿ ನೀಡಿದರು.

ಈ ಕಾಡುಗಳಲ್ಲಿ ನೆಲೆಸಿರುವ ಬೇಡಗಂಪಣ, ಸೋಲಿಗ, ಉಪ್ಪಾರ ಸಮುದಾಯದ ಬಗ್ಗೆಯೂ ವಿವರಗಳಿವೆ.

ಕಾಫಿಟೇಬಲ್ ಪುಸ್ತಕ: ‘ಇದು ಕಾಫಿಟೇಬಲ್ ಪುಸ್ತಕ. ನಿರ್ದಿಷ್ಟ ವನ್ಯಧಾಮಗಳ ಬಗ್ಗೆ ಸ್ಥಳೀಯ ಭಾಷೆಗಳಲ್ಲಿ ಈ ರೂಪದ ಪುಸ್ತಕ ಪ್ರಕಟವಾಗುತ್ತಿರುವುದು ಪ್ರಾಯಶಃ ಇದೇ ಮೊದಲು’ ಎಂದು ಹೇಳುತ್ತಾರೆ ಗುಬ್ಬಿ.

ಉಚಿತ ವಿತರಣೆ: ಎರಡೂ ವನ್ಯಧಾಮಗಳ ಕಾಡಂಚಿನ ಹಳ್ಳಿಗಳ ಎಲ್ಲ ಸರ್ಕಾರಿ ಶಾಲೆಗಳಿಗೆ ಈ ಪುಸ್ತಕವನ್ನು ಉಚಿತವಾಗಿ ನೀಡಲು ಅವರು ನಿರ್ಧರಿಸಿದ್ದಾರೆ.

‘ಜಿಲ್ಲೆಯ ಎಲ್ಲ 130 ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು. ಮಾರಾಟದಿಂದ ಬಂದ ಆದಾಯವನ್ನು ಈ ಪ್ರದೇಶದಲ್ಲಿ ವನ್ಯಜೀವಿ ಶಿಕ್ಷಣ ಚಟುವಟಿಕೆಗಳಿಗೆ ಬಳಸಲಾಗುವುದು’ ಎಂದು ಸಂಜಯ್ ಗುಬ್ಬಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.