ಯಳಂದೂರು: ಜಿಲ್ಲೆಯಲ್ಲಿ ಕಬ್ಬು ಕಟಾವು ನಡೆಯುತ್ತಿದ್ದು ಹೊರ ರಾಜ್ಯಗಳ ನೂರಾರು ಕಾರ್ಮಿಕರು ಕೂಲಿ ಅರಸಿ ಬಂದಿದ್ದಾರೆ. ಹೀಗೆ ಬಂದವರು ಚಿಕ್ಕ ಮಕ್ಕಳನ್ನೂ ಕರೆತಂದಿದ್ದು ನಿರ್ಜನ ಪ್ರದೇಶ, ಹಳ್ಳ–ಕೊಳ್ಳಗಳು, ಪೊದೆ ಸಹಿತ ಅಪಾಯಕಾರಿ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದು ಮಕ್ಕಳ ಹಾಗೂ ಕೂಲಿ ಕಾರ್ಮಿಕರ ಜೀವಕ್ಕೆ ಕುತ್ತು ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಮಹಾರಾಷ್ಟ್ರ, ಬಿಹಾರ ಸೇರಿದಂತೆ ರಾಜ್ಯದ ಬಳ್ಳಾರಿ, ಹೊಸಪೇಟೆ, ಹೂವಿನ ಹಡಗಲಿ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಿಂದ ಕೂಲಿ ಕಾರ್ಮಿಕರು ಬಂದಿದ್ದು ಸಣ್ಣ ಬಿಡಾರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಳೆ, ಚಳಿ, ಗಾಳಿಯಿಂದ ರಕ್ಷಣೆ ಇಲ್ಲದ ಸೂರಿನಡಿ ಪುಟ್ಟ ಕಂದಮ್ಮಗಳ ಜೊತೆಗೆ ಬದುಕುತ್ತಿದ್ದಾರೆ.

ಅಂಗನವಾಡಿ ಹಾಗೂ ಶಾಲೆಗಳಲ್ಲಿ ನಲಿಯಬೇಕಾಗಿದ್ದ ಚಿಣ್ಣರು ಅಪಾಯಕಾರಿ ಸ್ಥಳಗಳಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಬದುಕುತ್ತಿದ್ದಾರೆ. ಯಳಂದೂರು ತಾಲ್ಲೂಕಿನಲ್ಲಿ ಜಮೀನುಗಳ ಸುತ್ತಮುತ್ತ ಹೊರ ರಾಜ್ಯ ಹಾಗೂ ಉತ್ತರ ಕರ್ನಾಟಕದ ಭಾಗದ 100ಕ್ಕೂ ಹೆಚ್ಚು ಕೂಲಿ ಕಾರ್ಮಿಕ ಕುಟುಂಬಗಳು ಹಾಗೂ ಅಲೆಮಾರಿಗಳು ಬೀಡುಬಿಟ್ಟಿವೆ. ಇವರಲ್ಲಿ ಬಹುತೇಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು ಅವರ ಬಾಲ್ಯ ಕಮರುತ್ತಿದೆ.

ಮಕ್ಕಳು ಹಗಲಿನ ಹೊತ್ತು ಹೊಲ, ಗದ್ದೆಗಳಲ್ಲಿ ಪೋಷಕರ ಕೂಲಿ ಕಾರ್ಯಕ್ಕೆ ನೆರವಾಗುತ್ತಿದ್ದು ವಿಷಜಂತುಗಳ ಕಡಿತ ಭೀತಿ ಎದುರಾಗಿದೆ. ಪ್ರೌಢಾವಸ್ಥೆಯ ಮಕ್ಕಳು ಪೋಷಕರ ಕಣ್ತಪ್ಪಿಸಿ ಸಮೀಪದ ಕೆರೆ, ಹಳ್ಳ, ನಾಲೆ, ಪೊದೆ, ಅರಣ್ಯ ಪ್ರದೇಶ ಸೇರಿದಂತೆ ಅಪಾಯಕಾರಿ ಸ್ಥಳಗಳಲ್ಲಿ ತಿರುಗುತ್ತಿದ್ದಾರೆ. ಕೆರಗಳಲ್ಲಿ ಈಜುವುದು, ಕಾಡಂಚಿನ ಭಾಗಗಳಲ್ಲಿ ದೊರೆಯುವ ಅಪಾಯಕಾರಿ ಹಣ್ಣುಗಳ ಸೇವನೆಗೂ ಮುಂದಾಗುತ್ತಿದ್ದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.

ಅಪಾಯಕಾರಿ ಸ್ಥಳಗಳಲ್ಲಿ ಬಿಡಾರ ಹೂಡುವುದು, ಹಗಲು-ರಾತ್ರಿ ಎನ್ನದೆ ಸಂಚರಿಸುವ ಅಲೆಮಾರಿಗಳು ವಿಷಜಂತುಗಳ ದಾಳಿಗೆ ತುತ್ತಾಗುತ್ತಿದ್ದಾರೆ. ಈಚೆಗೆ ಕೂಲಿಕಾರ್ಮಿಕರ ಟೆಂಟ್ ಬಳಿಯೇ ದೈತ್ಯ ಹೆಬ್ಬಾವೊಂದು ಬಂದು ಕೂದಳೆಲೆ ಅಂತರದಲ್ಲಿ ಮಕ್ಕಳು ಪಾರಾಗಿದ್ದರು ಎನ್ನುತ್ತಾರೆ ಬಳ್ಳಾರಿಯ ಕೂಲಿ ಕಾರ್ಮಿಕ ರಾಥೋಡ್.

1 ಟನ್ ಕಬ್ಬು ಕಡಿದರೆ ₹ 500 ಕೂಲಿ ಸಿಗುವುದರಿಂದ ಗಂಡ-ಹೆಂಡತಿ, ಕೆಲವೊಮ್ಮೆ ಮಕ್ಕಳೂ ಒಟ್ಟಾಗಿ ದುಡಿಯುತ್ತಾರೆ. ಮೂರ್ನಾಲ್ಕು ಮಕ್ಕಳ ಪಾಲನೆ ಪೋಷಣೆ ಮಾಡಬೇಕಾಗಿರುವುದರಿಂದ ಜೋಪಡಿಗಳಲ್ಲಿ ಅಪಾಯಕಾರಿ ಸನ್ನಿವೇಶದಲ್ಲಿ ವಾಸ ಮಾಡಬೇಕಾಗಿರುವುದು ಅನಿವಾರ್ಯ. ಬಾಣಂತಿಯರು, ಗರ್ಭಿಣಿಯರು ಸಹಿತ ಮಕ್ಕಳು ಚಳಿ, ಗಾಳಿ, ಮಳೆ ನಡುವೆ ಅಸುರಕ್ಷಿತ ತಾಣಗಳಲ್ಲಿ ಇರಬೇಕಾಗಿದೆ ಎನ್ನುತ್ತಾರೆ ಕಾರ್ಮಿಕರು.

ಮಧ್ಯವರ್ತಿಗಳು ನೆರೆಯ ರಾಜ್ಯಗಳು ಹಾಗೂ ಹಲವು ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆತಂದು ಕೂಲಿ ಕೊಡುತ್ತಾರೆಯೇ ಹೊರತು ಸವಲತ್ತು ನೀಡುವುದಿಲ್ಲ. ಸ್ತ್ರೀಯರಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು, ರಕ್ಷಣೆ ಇಲ್ಲದಂತಾಗಿದೆ. ಕಾರ್ಮಿಕ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸುತ್ತಾರೆ ಮುಖಂಡ ರಾಮಪ್ಪ.

‘ಸಿಡಿಪಿಒಗಳಿಗೆ ಪರಿಶೀಲಿಸಲು ಸೂಚನೆ’

ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಕಬ್ಬು ಕಟಾವು ಮಾಡಲು ಹಾಗೂ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ವಲಸೆ ಕಾರ್ಮಿಕರು ಹೆಚ್ಚಾಗಿ ಜಿಲ್ಲೆಗೆ ಬರುತ್ತಾರೆ. ವಲಸೆ ಕೂಲಿ ಕಾರ್ಮಿಕರು ನೆಲೆಸಿರುವ ಜಾಗಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಅಂಗನವಾಡಿ ಸೌಲಭ್ಯ ನೀಡುವಂತೆ ಸಂಬಂಧಪಟ್ಟ ಸಿಡಿಪಿಒಗಳಿಗೆ ಸೂಚನೆ ನೀಡಲಾಗಿದೆ. 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಪೌಷ್ಟಿಕ ಆಹಾರ 3 ವರ್ಷದಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿಯಲ್ಲಿ ತಾತ್ಕಾಲಿಕ ದಾಖಲಾತಿ ಮಾಡಿಕೊಂಡು ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ ಗರ್ಭಿಣಿ ಬಾಣಂತಿಯರಿಗೆ ತಿಂಗಳ 25 ದಿನ ಪೂರಕ ಪೌಷ್ಟಿಕ ಆಹಾರ ನೀಡಲು ಸೂಚಿಸಲಾಗಿದೆ. – ಮಂಜುಳಾ ಡಿಸಿಪಿಒ

ಅಸ್ವಸ್ಥಗೊಂಡವರು ಮಹಾರಾಷ್ಟ್ರದವರು

ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಅರಳೇಕಾಯಿ ತಿಂದು ಅಸ್ವಸ್ಥಗೊಂಡಿದ್ದ ಕೂಲಿ ಕಾರ್ಮಿಕ ಮಹಿಳೆ ಹಾಗೂ 12 ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಅಸ್ವಸ್ಥಗೊಂಡವರು ಮಹಾರಾಷ್ಟ್ರದ ಬೀಡ್ ಜಿಲ್ಲೆಯವರಾಗಿದ್ದು ಕಬ್ಬು ಕಟಾವು ಮಾಡಲು ಬಂದಿದ್ದರು. ಮಗುವೊಂದು ಮೊದಲ ಅರಳೇಕಾಯಿ ತಿಂದು ಸಿಹಿಯಾಗಿದೆ ಎಂದ ನಂತರ 11 ಮಕ್ಕಳು ಹಾಗೂ ಮಹಿಳೆ ಸೇವಿಸಿದ್ದು ಎಲ್ಲರಿಗೂ ವಾಂತಿಯಾಗಿದೆ. ಯಳಂದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಾಮರಾನಗರದ ಸಿಮ್ಸ್ನಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಕೂಲಿ ಕಾರ್ಮಿಕರು ತಂಗಿರುವ ಸ್ಥಳಗಳಿಗೆ ತೆರಳಿ ಆರೋಗ್ಯ ಶಿಕ್ಷಣ ನೀಡಲಾಗಿದೆ ಎಂದು ಯಳಂದೂರು ತಾಲ್ಲೂಕು ಆರೋಗ್ಯಾಧಿಕಾರಿ ತನುಜಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.