‘ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಲಿ’
ಸದಾಶಿವ ಆಯೋಗದ ವರದಿಯಲ್ಲಿ ಬಲಗೈ ಸಮುದಾಯಗಳಿಗೆ ಅನ್ಯಾಯವಾಗಿದ್ದು ಕಪೋಲಕಲ್ಪಿತ ವರದಿ ಮಂಡಿಸಿ ಹೊಲಯ ಬಲಗೈ ಛಲವಾದಿಗಳ ಜನಸಂಖ್ಯೆ ಕಡಿಮೆಗೊಳಿಸಲಾಗಿದೆ. ಮಾದಿಗ ಸಂಬಂಧಿತ ಉಪ ಜಾತಿಗಳಿಗೂ ಹೊಲೆಯ ಸಂಬಂಧಿತ ಉಪ ಜಾತಿಗಳ ಜನಸಂಖ್ಯೆಯ ನಡುವೆ ವ್ಯತ್ಯಾಸವಾಗಿದೆ. ವರದಿಯಲ್ಲಿ ತಪ್ಪಾದ ಅಂಕಿ ಅಂಶಗಳನ್ನು ಸರ್ಕಾರದ ಗಮನಕ್ಕೆ ತಂದ ಬಳಿಕ 101 ಜಾತಿಗಳ ನಿಖರ ಸಂಖ್ಯೆ ಅರಿಯಲು ಸಮೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಸಮುದಾಯಗಳಿಗೂ ಅನ್ಯಾಯವಾಗಬಾರದು ಮೀಸಲಾತಿಯ ಲಾಭ ಎಲ್ಲ ಸಮುದಾಯಗಳಿಗೂ ಸಿಗಬೇಕು ಎಂಬುದು ಉದ್ದೇಶ ಎಂದು ಚಂದ್ರಶೇಖರಯ್ಯ ಹೇಳಿದರು.