ಯಳಂದೂರು: ರಾಜ್ಯದ ಎಲ್ಲೆಡೆ ಕಂಡು ಬಂದರೂ ಹೆಚ್ಚು ಜನಪ್ರಿಯವಲ್ಲದ ಮೂಲಿಕೆ ಗಿಡ ‘ಗಂಜಿಮುಳ್ಳು’ ಅಥವಾ ‘ಎಸಲಿಗೆ’.ಪೊದೆಯ ತುಂಬಸೆಟೆದು ನಿಲ್ಲುವ ಮುಳ್ಳಿಗೆ ಭಯಪಟ್ಟು ಇದರ ಹತ್ತಿರ ಹೋಗುವವರು ವಿರಳ.

ಆದರೆ,ನಳನಳಿಸುವ ಹಸಿರ ಗಿಡದಲ್ಲಿ ಬಿಳಿ ಮಾಸಲು ಬಣ್ಣದ ಹಣ್ಣು ಬಿಟ್ಟಾಗ ನೋಡದಿರಲುಸಾಧ್ಯವೇ ಇಲ್ಲ. ಹಣ್ಣುಗಳು ಇಳಿಬಿದ್ದ ಮುತ್ತಿನ ಮಣಿಯಂತೆ ಆಕರ್ಷಿಸುತ್ತವೆ. ಇದರ ಫಲ, ಪುಷ್ಪ,ಮಕರಂದಕ್ಕಾಗಿ ಪಕ್ಷಿ ಮತ್ತು ಕೀಟಗಳು ಗಿಡದ ಬಳಿ ಸುಳಿದಾಡುವುದನ್ನು ಈಗ ಕಾಣಬಹುದು. ಗ್ರಾಮೀಣ ಪ್ರದೇಶದಲ್ಲಿ ಇದರ ಹಣ್ಣಿನ ರುಚಿ ಇಷ್ಟಪಡದಮಕ್ಕಳು ಮತ್ತು ಯುವತಿಯರು ಕಡಿಮೆ.

ತಾಲ್ಲೂಕಿನ ಕಾರಾಪುರ ಮಠ ಮತ್ತು ಹೊಳೆ ದಂಡೆಯ ಬೇಲಿಗಳಲ್ಲಿ ಈಗ ಗಂಜಿಮುಳ್ಳು ಹಣ್ಣು ನಳನಳಿಸುತ್ತಿದೆ.ನಿತ್ಯ ಹರಿದ್ವರ್ಣದ ಸಸ್ಯವಾದ ಇದನ್ನು ಅಲಂಕಾರಿಕ ಮತ್ತು ಮೂಲಿಕೆ ಸಸ್ಯವಾಗಿಯೂಗುರುತಿಸಲಾಗಿದೆ. ಇದರ ಬೇರು, ನಾರು ಮತ್ತು ಹಣ್ಣು ಔಷಧೀಯ ಗುಣಗಳ ಆಗರ. ಆದರೆ, ಇದರಮಹತ್ವ ಅರಿಯದ ಬಹುತೇಕರು ಇದರ ಪ್ರಭೇದಗಳನ್ನು ಅವ್ಯಾಹತವಾಗಿ ನಾಶ ಮಾಡುತ್ತಿರುವುದುಪರಿಸರಪ್ರಿಯರ ನೋವಿಗೆ ಕಾರಣವಾಗಿದೆ.

ಔಷಧೀಯ ಗುಣ:ಹಣ್ಣುಗಳು ಚಿಟ್ಟೆ, ಪಕ್ಷಿ, ಪ್ರಾಣಿಗಳಿಗೆ ಆಹಾರವಾದರೆ, ಉದರ ಸಂಬಂಧಿಕಾಯಿಲೆಗಳಿಗೆ ಇದರ ಎಲೆ, ಬೇರನ್ನು ಜನರು ಬಳಸುತ್ತಾರೆ. ಇಲಿ ಮತ್ತು ಹಾವಿನ ಕಡಿತ, ವಸಡು,ಹಲ್ಲು ನೋವು, ಸ್ತ್ರೀಯರ ಋತುಸ್ರಾವದಲ್ಲಿ, ವಿಷ ಸೇವಿಸಿದವರಿಗೆ ವಾಂತಿಮಾಡಿಸಲು, ವಾತ ಹೋಗಲಾಡಿಸಲು, ಭೇದಿ, ಉಗುರು ಸುತ್ತು, ಆಸ್ತಮಾ, ಕೆಮ್ಮು ಶಮನಕ್ಕೆಇದರ ನಾರು ಮತ್ತು ಬೇರನ್ನು ಬಳಸುತ್ತಾರೆ. ಪಶುಗಳಿಗೆ ಬಾಧಿಸುವ ನರಡಿ ರೋಗಕ್ಕೂ ಇದರ ಮದ್ದು ಅರೆಯುತ್ತಾರೆ ಎಂದು ‘ಏಟ್ರೀ’ ಸಂಶೋಧಕ ಡಾ.ಸಿ.ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ವಂಶಾಭಿವೃದ್ಧಿ:ಹೂವು ಗುಂಪಾಗಿದ್ದು ಏಕಲಿಂಗಿಗಳಾಗಿವೆ. ಗಂಡು ಮತ್ತು ಹೆಣ್ಣು ಬೇರೆ ಬೇರೆಆಗಿರುತ್ತವೆ. ಪರಾಗ ಸ್ಪರ್ಶ ಹೊಂದಿದ ಹೆಣ್ಣು ಹೂಗಳು ಹಸಿರಾಗಿ, ಕಾಯಾಗಿ ಬಿಳುಪಾದಗಂಜಿಯಂತಹ ಹಣ್ಣನ್ನು ಅರಳಿಸುತ್ತದೆ. ಇದರಲ್ಲಿ ಒಂದೆರಡು ಬೀಜಗಳಿರುತ್ತವೆ. ಚಿಟ್ಟೆಮತ್ತು ಕಂಬಳಿ ಹುಳುಗಳು ರೂಪಾಂತರ ಹೊಂದಲು ಇದೇ ಸಸ್ಯ ಆಶ್ರಯಿಸುತ್ತವೆ. ನಂತರ ಇದರಚಿಗುರೆಲೆ ಭಕ್ಷಿಸುತ್ತವೆ. ಹಣ್ಣಿನ ರಸವನ್ನು ಪತಂಗಗಳು ಹೀರಿದರೆ, ಹಕ್ಕಿಗಳುಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಇವುಗಳ ಹಿಕ್ಕೆಯಲ್ಲಿ ಸೇರಿದ ಬೀಜ ನೆಲ ಸೇರಿಮುಂಗಾರಿನಲ್ಲಿ ಮೊಳೆಯುತ್ತವೆ.

ವಿಷಕಾರಿ ಹೊಗೆ:ನೀರು ನಿಲ್ಲದ ಜೌಗು ಇಲ್ಲವೆ ಕಲ್ಲಿನ ಪೊರೆಗಳ ನಡುವೆಯೂ ಈ ಗಿಡ ಬೆಳೆಯುತ್ತದೆ. ಗರಿಷ್ಠ ಮೂರು ಮೀಟರ್ಎತ್ತರದವರೆಗೂ ಬೆಳೆಯಬಲ್ಲುದು. ಕಿರು ಕೊಂಬೆಗಳು ನಾಲ್ಕು ಕೋನಾಕೃತಿಯಲ್ಲಿ ವಿಕಾಸಹೊಂದುತ್ತವೆ. ಎಲೆ ಕಕ್ಷೆಗಳು ಮತ್ತು ಕವಲೊಡೆಯುವ ತುದಿಯ ಕದಿರು ಗೊಂಚಲುಗಳ ಎಲೆಕಂಕುಳಲ್ಲಿ ಅತಿ ಚಿಕ್ಕದಾದ ಬಿಳಿ ಲತೆಗಳು ಶೋಭಿಸುತ್ತವೆ. ತುದಿಯಲ್ಲಿ ಸೂಜಿಯಂತಹ ಚೂಪಾದ ಮುಳ್ಳು ಇದ್ದು, ಚುಚ್ಚಿದರೆ ಜೇನು ಕುಟುಕಿದ ಅನುಭವ ಆಗುತ್ತದೆ.ಈ ಸಸ್ಯದ ಭಾಗಗಳ ಹೊಗೆ ಸೇವನೆ ಅಪಾಯಕಾರಿ ಎನ್ನುತ್ತಾರೆ ಸಸ್ಯ ತಜ್ಞರು.

ಎಲ್ಲೆಲ್ಲಿದೆ, ಏನೇನು ಹೆಸರು?
ಭಾರತ, ಆಫ್ರಿಕಾ, ಅರೇಬಿಯಾ, ಮ್ಯಾನ್ಮಾರ್ ಮತ್ತು ಶ್ರೀಲಂಕಾದಲ್ಲಿ ಈ ಗಿಡವನ್ನು ಕಾಣಬಹುದು.ಸುಲಭವಾಗಿ ಗುರುತಿಸಬಹುದಾದ ಈ ಗಿಡ ಇತ್ತೀಚಿಗೆ ವೇಗವಾಗಿ ನಶಿಸುತ್ತಿದೆ.

ಇಂಗ್ಲಿಷಿನಲ್ಲಿ ‘ನೀಡಲ್ ಬುಶ್’ ಎಂದು ಕರೆಯಲಾಗುತ್ತದೆ.ಅಜಿಮಾ ಟೆಟ್ರಾಕ್ಯಾಂತ ಎಂಬುದು ವೈಜ್ಞಾನಿಕ ಹೆಸರು. ಸಾಲ್ವಡೊರೇಶಿಯೇ
ಸಸ್ಯ ಕುಟುಂಬಕ್ಕೆ ಸೇರಿರುವ ಈ ಗಿಡಕ್ಕೆ ಸಂಸ್ಕೃತದಲ್ಲಿ ‘ಕುಂಡಲ’, ಕನ್ನಡದಲ್ಲಿ ಎಸಲಿಗೆ, ಗಂಜಿಮುಳ್ಳು, ಬಿಳಿ ಉಪ್ಪಿ ಗಿಡ, ಉಪ್ಪುಗೋಜೆ ಎಂಬ ಹೆಸರುಗಳಿವೆ. ಹಿಂದಿಯಲ್ಲಿ‘ಕಂಟಾಗುರ್ ಕಮಾಯ್’, ತೆಲಗಿನಲ್ಲಿ ‘ಮುಂಡ್ಲಾ ಕಂಪಾ’, ತಮಿಳಿನಲ್ಲಿ ‘ಸೆಂಗಿಲಾಯ್‘ ಎಂದು ಕರೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.