ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರು, ನವಜೋಡಿಗಳಿಗೆ ನಿರಾಸೆ

ಮೂರನೇ ವರ್ಷವೂ ಜರುಗದ ಚಾಮರಾಜೇಶ್ವರ ರಥೋತ್ಸವ: ಜಾತ್ರೆಯ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ
Last Updated 16 ಜುಲೈ 2019, 16:42 IST
ಅಕ್ಷರ ಗಾತ್ರ

ಚಾಮರಾಜನಗರ: ಹೊಸ ರಥ ನಿರ್ಮಾಣವಾಗದ ಕಾರಣಕ್ಕೆ ನಗರದ ಐತಿಹಾಸಿಕಚಾಮರಾಜೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸತತ ಮೂರನೇ ವರ್ಷವೂ ನಡೆಯಲಿಲ್ಲ.

ಇದರಿಂದಾಗಿ ಭಕ್ತಾದಿಗಳು ಹಾಗೂ ನವಜೋಡಿಗಳು ನಿರಾಸೆ ಅನುಭವಿಸಿದರು.ಎಲ್ಲವೂ ಸರಿ ಇದ್ದಿದ್ದರೆ ಮಂಗಳವಾರ ವಿಜೃಂಭಣೆಯ ರಥೋತ್ಸವ ನಡೆಯಬೇಕಿತ್ತು. ಸಾವಿರಾರು ಭಕ್ತರು ಉತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದರು. ರಥೋತ್ಸವ ನಡೆಯದ ಕಾರಣ ಜಾತ್ರಾ ದಿನದ ಪ್ರಯುಕ್ತ ಚಾಮರಾಜೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಕಾಣದ ಭಕ್ತರು: ಮೂರು ವರ್ಷಗಳಿಂದ ತೇರು ಎಳೆಯದೆ ಇರುವುದರಿಂದ ದೇವಸ್ಥಾನದಲ್ಲಿ ಹೆಚ್ಚು ಭಕ್ತರು ಕಂಡು ಬರಲಿಲ್ಲ. ಆಷಾಢ ಮಾಸದಲ್ಲಿ ನಡೆಯುವ ಈ ರಥೋತ್ಸವ ಅತ್ಯಂತ ಅಪರೂಪವಾದುದು. ಜಾತ್ರೆಯ ದಿನದಂದು ಜಿಲ್ಲೆಯ, ಹೊರ ಜಿಲ್ಲೆಗಳ ಸಾವಿರಾರು ನವ ದಂಪತಿಗಳು ದೇವಸ್ಥಾನಕ್ಕೆ ಬಂದು ಹರಕೆ ಒಪ್ಪಿಸುವುದು ವಾಡಿಕೆ. ಆದರೆ, ಮೂರು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರೂ ಬರುತ್ತಿಲ್ಲ. ನವಜೋಡಿಗಳೂ ಕಂಡು ಬರುತ್ತಿಲ್ಲ. ಮಂಗಳವಾರವೂ ಬೆರಳೆಣಿಕೆಯಷ್ಟು ನವದಂಪತಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

‘ಈ ಹಿಂದೆ ನನ್ನ ಸ್ನೇಹಿತರೊಂದಿಗೆಜಾತ್ರೆಗೆ ಬಂದಿದ್ದ ಸಂದರ್ಭದಲ್ಲಿ ಈ ಜಾತ್ರೆಗೆ ನವಜೋಡಿಗಳು ಹೆಚ್ಚು ಬರುತ್ತಾರೆ. ಮುಂದೆ ನೀನು ಮದುವೆಯಾದ ವರ್ಷದಲ್ಲೇ ಜಾತ್ರೆಗೆ ಬಂದು ರಥಕ್ಕೆ ಹಣ್ಣು, ದವನ ಎಸೆಯಬೇಕುಒಳ್ಳೆಯದಾಗುತ್ತದೆ ಎಂದಿದ್ದರು. ಆದರೆ, ಈಗ ರಥೋತ್ಸವ ನಡೆಯದಿರುವ ವಿಚಾರ ತಿಳಿದು ಬೇಸರವಾಯಿತು’ ಎಂದು ಮೈಸೂರಿನ ಕಡಕೋಳದ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಿರಾಸೆಯಾಗಿದೆ: ‘ಆಷಾಢಮಾಸದಲ್ಲಿ ಬೇರೆ ಬೇರೆ ಇರುವ ನಾವು ಈ ರಥೋತ್ಸವದ ಮೂಲಕ ಒಟ್ಟಿಗೆಓಡಾಡುವಅವಕಾಶ ಸಿಗುತ್ತದೆ. ಹೀಗಾಗಿ ಜಾತ್ರೆಯಂಗಳಕ್ಕೆ ಬರುತ್ತೇವೆ. ಇಂದು ಯಾವುದೇ ಸಂಭ್ರಮ ಇಲ್ಲ. ಪೂಜೆ ಮುಗಿಸಿ ಊರಿಗೆ ಹೋಗುತ್ತಿದ್ದೇವೆ. ರಥೋತ್ಸವ ನಡೆಯದಿರುವುದು ನಿರಾಸೆ ಮೂಡಿಸಿದೆ’ಎಂದು ನಲ್ಲೂರಿನ ಮಹದೇವಸ್ವಾಮಿ ಮತ್ತು ಸರಸ್ವತಿ ದಂಪತಿ ಬೇಸರ ವ್ಯಕ್ತಪಡಿಸಿದರು.

ಯಥಾಸ್ಥಿತಿ ನಡೆದ ಪೂಜಾ ಕೈಂಕರ್ಯಗಳು: ದೇವಸ್ಥಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು, ದೇವರ ದರ್ಶನ ಎಂದಿನಂತೆ ನಡೆಯಿತು. ಬೆಳಿಗ್ಗೆ ಮತ್ತು ಮಧ್ಯಾಹ್ನದ ಪೂಜೆ, ದರ್ಶನಗಳು ಯಥಾಪ್ರಕಾರ ನಡೆದವು.

ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ, ಮುಜುರಾಯಿ ಇಲಾಖೆಯ ಅಧಿಕಾರಿಗಳು ರಥ ನಿರ್ಮಾಣ ಕಾರ್ಯದಲ್ಲಿ ಮುತುವರ್ಜಿ ವಹಿಸಿ ಮುಂದಿನ ವರ್ಷವಾದರೂ ಜಾತ್ರೆ ನಡೆಸಲು ಮುಂದಾಗಬೇಕುಎನ್ನುವುದು ಸಾರ್ವಜನಿಕರ ಒತ್ತಾಯ.

ಕಿಡಿಗೇಡಿಗಳಿಗೆ ‘ನವಜೋಡಿ’ಗಳ ಶಾಪ
ಚಾಮರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ 200ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ.ಪ್ರತಿವರ್ಷ ಆಷಾಢ ಮಾಸದಲ್ಲೇ ಚಾಮರಾಜೇಶ್ವರ ರಥೋತ್ಸವ ಅತ್ಯಂತ ವಿಜೃಂಭಣೆಯಿಂದಜರುಗುತ್ತಿತ್ತು. ಸಾಮಾನ್ಯವಾಗಿ ಆಷಾಢ ಮಾಸವನ್ನು ಶೂನ್ಯಮಾಸವೆಂದು ಕರೆಯುತ್ತಾರೆ. ಈ ಮಾಸದಲ್ಲಿಹೊಸದಾಗಿ ಮದುವೆಯಾದ ಜೋಡಿಗಳು ದೂರ ಇರುತ್ತಾರೆ. ಆದರೆ, ಈ ರಥೋತ್ಸವ ನವದಂಪತಿಗಳನ್ನು ಒಂದುಗೂಡಿಸುತ್ತಿತ್ತು.

‘ಯಾಕಾದರೂ ರಥಕ್ಕೆ ಬೆಂಕಿ ಹಚ್ಚಿದರೋ? ಕಿಡಿಗೇಡಿಗಳು ನಮಗೆ ಜಾತ್ರೆಯಲ್ಲಿ ಸಂಭ್ರಮಿಸುವ ಅವಕಾಶವನ್ನು ಕಿತ್ತುಕೊಂಡರು’ ಎಂದು ಜಾತ್ರೆಯಲ್ಲಿ ಸಂಭ್ರಮಿಸುವ ಅವಕಾಶದಿಂದ ವಂಚಿತರಾದ ದಂಪತಿ ನಾಗವಳ್ಳಿಯ ರಂಗರಾಜು ಮತ್ತು ಮಮತಾ ಹೇಳಿದರು.

ಸೆಲ್ಫಿ ಸಂಭ್ರಮ: ‘ದೇವಸ್ಥಾನದಲ್ಲಿ ಪೂಜೆ ಮುಗಿಸಿದ ನವಜೋಡಿಗಳು ಗರ್ಭಗುಡಿಯ ಹೊರಗಡೆ ಹಾಗೂ ದೇವಸ್ಥಾನದ ಹೊರಗಡೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ದೃಶ್ಯ ಸಾಮಾನ್ಯವಾಗಿತ್ತು.

ಆರ್ಥಿಕ ನಷ್ಟ: ‘ರಥೋತ್ಸವ ಸಂದರ್ಭದಲ್ಲಿ ಒಂದೇ ದಿನಕ್ಕೆ₹ 3,000 ರಿಂದ ₹ 4,000 ಸಂಪಾದನೆ ಆಗುತ್ತಿತ್ತು. ಇಂದು ಮಾತ್ರ₹ 500ರಿಂದ 700 ಆಗುವುದಿಲ್ಲ. ರಥೋತ್ಸವ ಜರುಗದಿರುವುದು ನಮಗೆ ಆರ್ಥಿಕವಾಗಿ ನಷ್ಟವಾಗಿದೆ’ ಎಂದು ಆಟಿಕೆ ಮಾರಾಟಗಾರರಾದ ಸೋಮವಾರಪೇಟೆ ಕುಸುಮಾ ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT