ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

752 ಮಂದಿಗೆ ಸೋಂಕು, ಮತ್ತೊಂದು ಸಾವು

Last Updated 23 ಜನವರಿ 2022, 15:05 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 752 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 83 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೂರನೇ ಅಲೆ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ವಡ್ಡಗೆರೆ ಗ್ರಾಮದ 46 ವರ್ಷ ವ್ಯಕ್ತಿ ಇದೇ 18ರಂದು ಕೋವಿಡ್‌ ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ (ಜ.22) ಮೃತಪಟ್ಟಿದ್ದಾರೆ. ಜಿಲ್ಲಾಡಳಿತ ಈ ಪ್ರಕರಣವನ್ನು ಭಾನುವಾರದ ವರದಿಯಲ್ಲಿ ಉಲ್ಲೇಖಿಸಿದೆ.

ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 2,579ಕ್ಕೆ ಏರಿದೆ. 1955 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಭಾನುವಾರ ಒಂದೇ ದಿನ 668 ಮಂದಿಯನ್ನು ಹೋಂ ಐಸೊಲೇಷನ್‌ಗೆ ಕಳುಹಿಸಲಾಗಿದೆ. ಐಸಿಯುನಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ 3,095 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದೆ. ಈ ಪೈಕಿ 752 ಜನರಿಗೆ ಸೋಂಕು ಖಚಿತವಾಗಿದೆ. ಇವರಲ್ಲಿ 264 ಮಂದಿ ಮಕ್ಕಳು. ನಗರ ಪ್ರದೇಶಗಳಲ್ಲಿ 182 ಹಾಗೂ ಗ್ರಾಮೀಣ ಭಾಗಗಳಲ್ಲಿ 62 ಮಕ್ಕಳಿಗೆ ಸೋಂಕು ತಗುಲಿದೆ.

ನಗರಗಳಲ್ಲಿ ಹೆಚ್ಚು ಸೋಂಕು: ಜಿಲ್ಲೆಯಲ್ಲಿ ಮೂರನೇ ಅಲೆ ಆರಂಭಗೊಂಡ ನಂತರ ಗ್ರಾಮೀಣ ಭಾಗಗಳಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಭಾನುವಾರ ನಗರ, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

180 ಪುರುಷರು, 158 ಮಹಿಳೆಯರು ಹಾಗೂ 182 ಮಕ್ಕಳು ಸೇರಿ 520 ಪ್ರಕರಣಗಳು ನಗರ ಪ್ರದೇಶಗಳಲ್ಲಿ ವರದಿಯಾಗಿವೆ.

107 ಪುರುಷರು, 63 ಮಹಿಳೆಯರು ಹಾಗೂ 62 ಮಕ್ಕಳು ಸೇರಿ 232 ಕೋವಿಡ್‌ ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ದೃಢಪಟ್ಟಿವೆ.

ತಾಲ್ಲೂಕುವಾರು: ಚಾಮರಾಜನಗರ ತಾಲ್ಲೂಕಿನಲ್ಲಿ 358, ಕೊಳ್ಳೇಗಾಲದಲ್ಲಿ 141, ಗುಂಡ್ಲುಪೇಟೆಯಲ್ಲಿ 121, ಯಳಂದೂರಿನಲ್ಲಿ 78 ಹಾಗೂ ಹನೂರಿನಲ್ಲಿ 54 ಪ್ರಕರಣಗಳು ಭಾನುವಾರ ದೃಢಪಟ್ಟಿವೆ.

ಭಾನುವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 36,062 ಮಂದಿಗೆ ಸೋಂಕು ದೃಢಪಟ್ಟಿದೆ. 32,939 ಮಂದಿ ಗುಣಮುಖರಾಗಿದ್ದಾರೆ. 585ಮಂದಿ ಕೋವಿಡ್‌ ಹಾಗೂ ಕೋವಿಡ್‌ ಯೇತರ ಕಾರಣಗಳಿಂದ ಮೃತಪಟ್ಟಿದ್ದಾರೆ.

ನೇತಾಜಿ ಜನ್ಮದಿನ: ಲಸಿಕೆ ಅಭಿಯಾನ

ಚಾಮರಾಜನಗರ: ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನದ ಅಂಗವಾಗಿ ನಗರದ 22ನೇ ವಾರ್ಡ್‌ನಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಸಲಾಯಿತು. ವಾರ್ಡ್‌ನ 120ಕ್ಕೂ ಹೆಚ್ಚು ನಿವಾಸಿಗಳು ಲಸಿಕೆ ಹಾಕಿಸಿಕೊಂಡರು.

ಭ್ರಮರಾಂಬ ಬಡಾವಣೆಯಲ್ಲಿರುವ ರೋಟಿಗರ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾಧನಾ ಸಂಸ್ಥೆ ಹಾಗೂ ವರ್ತಕರ ಸೌಹಾರ್ದ ಸಹಕಾರ ಸಂಘದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ವಾರ್ಡ್‌ ಸದಸ್ಯೆ ಮಮತಾ, ಸಹಕಾರ ಪ್ರಕೋಷ್ಠಕದ ರಾಜ್ಯ ಸಂಚಾಲಕ ಎಸ್. ಬಾಲಸುಬ್ರಹ್ಮಣ್ಯ, ನಗರಸಭಾ ಸದಸ್ಯೆ ಗಾಯತ್ರಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಸಾಧನ ಸಂಸ್ಥೆಯ ಸುರೇಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡ ಪ್ರತಾಪ್, ವರ್ತಕರ ಸೌಹಾರ್ದ ಸಹಕಾರಿ ನಿಯಮಿತ ನಿರ್ದೇಶಕರಾದ ರಾಜಣ್ಣ , ಪದ್ಮ ಕುಮಾರ್, ಸಂಕಿರ್ತನ್, ಆಶಾ, ಸಾಧನಾ ಡಾ.ರಶ್ಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT