ಗ್ರಾಮದ ಭ್ರಮಾರಂಭ ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ 15 ಕೆ.ಜಿ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಗಳು ಪತ್ತೆಯಾಗಿದೆ. ಗ್ರಾಮದ ನಂಜುಂಡಸ್ವಾಮಿ ಎಂಬುವರ ಮನೆಯಲ್ಲಿ ಗುರುವಾರ ಬೆಳಿಗ್ಗೆ ಅಕ್ಕಿ ತೊಳೆಯುತ್ತಿದ್ದ ಸಂದರ್ಭದಲ್ಲಿ ಕೆಲ ಅಕ್ಕಿಗಳು ತೇಲಿ ಬಂದವು ಇದನ್ನು ಗಮನಿಸಿದ ಅವರು ತೇಲಿ ಬಂದ ಅಕ್ಕಿಯನ್ನು ಬೇರ್ಪಡಿಸಿ ನೋಡಿದ್ದಾರೆ. ಆಗ ಅಕ್ಕಿಯು ಪ್ಲಾಸ್ಟಿಕ್ ಅಕ್ಕಿ ಎಂದು ಖಚಿತವಾಗಿದೆ.