ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ | ಅತ್ಯಾಚಾರ: ಗ್ರಾ.ಪಂ ಅಧ್ಯಕ್ಷೆ ಮಗನ ವಿರುದ್ಧ ದೂರು

Published 28 ಮೇ 2024, 23:28 IST
Last Updated 28 ಮೇ 2024, 23:28 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ‘ಆಶ್ರಯ ಮನೆ ಕೊಡಿಸುವ ಭರವಸೆ ನೀಡಿ, ನನ್ನೊಂದಿಗೆ ಬಲವಂತದ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದು ಆರೋಪಿಸಿ ಕಾಡಂಚಿನ ಗ್ರಾಮದ ಗೃಹಿಣಿಯೊಬ್ಬರು, ಪೊನ್ನಾಚಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಾಂಬಿಕೆ ಎಂಬವರ ಮಗ ವೈದೇಶ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 

‘ವಿಡಿಯೊವನ್ನು ಹರಿಬಿಟ್ಟಿದ್ದಾರೆ’ ಎಂದು ಆರೋಪಿಸಿ ಬಸಮಣಿ, ಶಿವಮ್ಮ ಎಂಬವರ ವಿರುದ್ಧವೂ ಮಹಿಳೆ ದೂರು ನೀಡಿದ್ದು, ಮಹದೇಶ್ವರ ಬೆಟ್ಟ ಠಾಣೆಯ ಪೊಲೀಸರು ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. 

‘ಮೇ 24ರಂದು ಮಹಿಳೆ ದೂರು ನೀಡಿದ್ದಾರೆ. ‌ಮೊದಲ ಆರೋಪಿ ವೈದೇಶ್‌ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಠಾಣೆ ಇನ್‌ಸ್ಪೆಕ್ಟರ್‌ ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.    

ದೂರಿನಲ್ಲಿ ಏನಿದೆ?: ‘ನಾವು ಬಡವರಾಗಿದ್ದು, ಪಂಚಾಯಿತಿಯಿಂದ ಒಂದು ಮನೆ ಕೊಡಿಸಿಕೊಡಿ ಎಂದು ವೈಯಕ್ತಿಕವಾಗಿ ವೈದೇಶ್‌ಗೆ ಮನವಿ ಮಾಡಿದ್ದೆ. ಮನೆಯ ಆಸೆಯಿಂದ ಹೋದಾಗ ಲೈಂಗಿಕ ಕ್ರಿಯೆಗೆ ಬಳಸಿಕೊಂಡು, ಅದನ್ನು ಚಿತ್ರೀಕರಿಸಿದ್ದಾರೆ. ವೈದೇಶ್‌ ಅವರೊಂದಿಗೆ ಬಸಮಣಿ ಮತ್ತು ಶಿವಮ್ಮ ಅವರು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮಾನಹಾನಿ ಮಾಡಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT