ಚಾಮರಾಜನಗರ: ಷಷ್ಠಿ ದಿನವಾದ ಬುಧವಾರ ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರು. ಕುಟುಂಬ ಸಮೇತ ಎಲ್ಲರೂ ಒಟ್ಟಾಗಿ ಮಡಿಯುಟ್ಟು ಬೆಳಿಗ್ಗೆ ಹುತ್ತಕ್ಕೆ ಪೂಜೆ ಸಲ್ಲಿಸಿ ಷಷ್ಠಿ ಆಚರಿಸಿದರು. ಹೂ, ಅರಿಶಿನ, ಕುಂಕುಮ ಲೇಪಿಸಿ ಹಾಲು, ಬಾಳೆಹಣ್ಣು, ಸಕ್ಕರೆ ನೈವೇದ್ಯ ಸಮರ್ಪಿಸಿದರು.

ರಕ್ತ ತರ್ಪಣ: ಹುತ್ತಕ್ಕೆ ಕೋಳಿ ಬಲಿ ಕೊಟ್ಟು ರಕ್ತದ ನೈವೇದ್ಯ ಅರ್ಪಿಸುವುದು ಈ ಭಾಗದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ತಾಲ್ಲೂಕಿನ ಉತ್ತವಳ್ಳಿ, ಚಂದಕವಾಡಿ, ಮಲ್ಲಯನಪುರ ಸೇರಿದಂತೆ ನಗರ, ಗ್ರಾಮಾಂತರ ಭಾಗಗಳಲ್ಲಿ ಹುತ್ತಕ್ಕೆ ಕೋಳಿಯ ರಕ್ತ ತರ್ಪಣ ನೀಡುವ ಆಚರಣೆ ಕಂಡು ಬಂತು.

ಷಷ್ಠಿ ದಿನ ಹುತ್ತಕ್ಕೆ ಕೋಳಿ ರಕ್ತ ಹಾಕಿದರೆ ಮನೆ, ಜಮೀನುಗಳಲ್ಲಿ ವಿಷಜಂತುಗಳ ಹಾವಳಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಈ ಭಾಗದಲ್ಲಿರುವ ನಂಬಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.