ಬುಧವಾರ, ಜನವರಿ 22, 2020
25 °C

ವಿಜೃಂಭಣೆಯ ಶಿವ ದೀಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಗ್ರಾಮದ ದಿವ್ಯಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶಿವ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು.

ಇದೇ ಸಂದರ್ಭದಲ್ಲಿ ದಿವ್ಯಲಿಂಗೇಶ್ವರನಿಗೆ ವಿಶೇಷ ಅಭಿಷೇಕ ಪೂಜಾ ಕೈಂಕರ್ಯಗಳು ನಡೆದವು. ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 

ದೇವಸ್ಥಾನದ ಸುತ್ತಲೂ ದೀಪಗಳನ್ನು ಹಚ್ಚಲಾಗಿತ್ತು. ಬಳಿಕ ದೊಡ್ಡ ದೀಪವನ್ನು ಗರಡು ಕಂಬದ ಮೇಲೆ ಇಡಲಾಗಿತ್ತು. ಈ ದೀಪವು ಬೆಳಗಿನ ವರೆಗೂ ಉರಿಯಲಿದೆ. 

ಈ ಶಿವ ದೀಪೋತ್ಸವದಲ್ಲಿ ತಮಿಳುನಾಡಿನ ಈರೋಡ್‌, ಕೊಯಮತ್ತೂರು, ಪೆರಿಯಕಲ್ಲಿ ಪಟ್ಟಿ, ಮೇಟುಪಾಳ್ಯಂ, ಹರದನಹಳ್ಳಿ, ಬಂಡಿಗೇರೆ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು