ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತಗಟ್ಟೆಗಳಲ್ಲಿ ಸೆಲ್ಫಿ ಸಂಭ್ರಮ

ಗಮನ ಸೆಳೆದ ಸಖಿ–ಸಾಂಸ್ಕೃತಿಕ ಮತಗಟ್ಟೆಗಳು
ಫಾಲೋ ಮಾಡಿ
Comments

ಚಾಮರಾಜನಗರ: ಮಹಿಳೆಯರನ್ನು ಮತಗಟ್ಟೆಯತ್ತ ಸೆಳೆಯಲು ಸ್ಥಾಪಿಸಲಾಗಿದ್ದಸಖಿ ಮತಗಟ್ಟೆಗಳುಹಾಗೂ ಬುಡಕಟ್ಟು ಜನರನ್ನು ಆಕರ್ಷಿಸಲು ಸ್ಥಾಪಿಸಲಾಗಿದ್ದ ಸಾಂಸ್ಕೃತಿಕ ಬುಡಕಟ್ಟುಮತಗಟ್ಟೆಗಳು ಗಮನ ಸೆಳೆದವು.

ಜಿಲ್ಲೆಯಾದ್ಯಂತ 10 ಸಖಿ ಮತಗಟ್ಟೆಗಳು, ನಾಲ್ಕು ಸಾಂಸ್ಕೃತಿಕ ಬುಡಕಟ್ಟು ಮತಗಟ್ಟೆಗಳು ಹಾಗೂ ಎರಡು ಅಂಗವಿಕಲರ ಮತಗಟ್ಟೆಗಳನ್ನು ತೆರೆಯಲಾಗಿತ್ತು.

ವಿಶೇಷ ಅಲಂಕಾರ ಹಾಗೂ ಗಿಡಗಳ ವಿತರಣೆ: ಸಖಿ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಹಸಿರು ತೋರಣ, ಬಾಳೆ ಕಂದು, ಬಣ್ಣ ಬಣ್ಣದ ಬಲೂನು, ಬಿಳಿ, ನೀಲಿ ಇನ್ನಿತರ ಪರದೆಗಳನ್ನು ಅಲಂಕಾರ ಮಾಡಲಾಗಿತ್ತು. ಮತದಾನ ಉತ್ತೇಜಿಸುವ ಸಲುವಾಗಿ ಮತ ಚಲಾಯಿಸಲು ಬರುವ ಮೊದಲ 100 ಮತದಾರರಿಗೆ ನುಗ್ಗೆ /ಕರಿ ಬೇವಿನ ಗಿಡಗಳನ್ನು ವಿತರಿಸಲಾಯಿತು.

ಸಾಂಸ್ಕೃತಿಕ ಬುಡಕಟ್ಟು ಮತಗಟ್ಟೆ: ಬುಡಕಟ್ಟು ಜನರನ್ನು ಆಕರ್ಷಿಸುವ ಸಲುವಾಗಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಮತಗಟ್ಟೆ ತೆರೆಯಲಾಗಿತ್ತು. ಬುಡಕಟ್ಟು ಜನರ ಶೈಲಿಯಲ್ಲಿ ಈ ಮತಗಟ್ಟೆಗಳನ್ನು ಅಲಂಕರಿಸಲಾಗಿತ್ತು.

ಸೆಲ್ಫಿಪಾಯಿಂಟ್‌: ಸಖಿ ಮತಗಟ್ಟೆಗಳಲ್ಲಿ ಯುವ ಮತದಾರರನ್ನು ಸೆಳೆಯಲು ಸೆಲ್ಫಿ ಪಾಯಿಂಟ್‌ ಹಾಕಲಾಗಿತ್ತು.

ನಗರದ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಖಿಮತಗಟ್ಟೆಯಲ್ಲಿ ಯುವಕರನ್ನು ಸೆಳೆಯಲುಸೆಲ್ಫಿ ಪಾಯಿಂಟ್‌ ಹಾಕಲಾಗಿತ್ತು. ‘ವೋಟ್‌ ಫಾರ್‌ ಬೆಟರ್‌ ಇಂಡಿಯಾ’ ಶಿರ್ಷಿಕೆಯ ಎದುರು ಮತ ಚಲಾಯಿಸಿದ ಬಳಿಕ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಯುವಕ ಯುವತಿಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಬಸ್‌ ಹಾಗೂ ಜನರು ವಿರಳ: ಚುನಾವಣಾ ಕಾರ್ಯಕ್ಕೆ ಬಸ್ಸುಗಳ ನಿಯೋಜನೆ ಮಾಡಿರುವುದರಿಂದ ಗುರುವಾರ ಕೆಎಸ್‌ಆರ್‌ಟಿಸಿ ಬಸ್ಸುಗಳು ವಿರಳ ಸಂಖ್ಯೆಯಲ್ಲಿ ಸಂಚರಿಸಿದವು. ಚುನಾವಣೆಗೆಂದು ತಮ್ಮ ತಮ್ಮ ಊರುಗಳಿಗೆ ತೆರಳಿದ ಹಾಗೂ ಸಾಲು ರಜೆಯ ಕಾರಣ ಬಸ್‌ ನಿಲ್ದಾಣದಲ್ಲಿ ಹೆಚ್ಚಿನ ಜನರು ಕಾಣ ಸಿಗಲಿಲ್ಲ. ಸಮಯಕ್ಕೆ ಸರಿಯಾಗಿ ಹೊರಡುವ ಬಸ್‌ಗಳು ಸ್ವಲ್ಪ ತಡವಾಗಿ ಪ್ರಯಾಣಿಕರ ಭರ್ತಿ ಅನುಸರಿಸಿ ತೆರಳುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT