ಗುರುವಾರ , ಮಾರ್ಚ್ 23, 2023
23 °C
ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ, ನದಿ‌ಗೆ ಹಾರಿ ಆತ್ಮಹತ್ಯೆ ಮಾಡಿರುವ ಸಾಧ್ಯತೆ

ಪಿಜಿ ಪಾಳ್ಯ ಹೊಸ ಮಠದ ಶ್ರೀಗಳ ಶವ ನದಿಯಲ್ಲಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ತಾಲ್ಲೂಕಿನ ವೆಸ್ಲಿ ಸೇತುವೆಯ ಕಾವೇರಿ ನದಿಯಲ್ಲಿ ಹನೂರು ತಾಲ್ಲೂಕಿನ ಪಿಜಿ ಪಾಳ್ಯ ಗ್ರಾಮದ ಹೊಸ ಮಠದ ರಾಜಶೇಖರ ಸ್ವಾಮೀಜಿ (70) ಅವರ ಶುಕ್ರವಾರ ಶವ ಪತ್ತೆಯಾಗಿದೆ.

ಕಾವೇರಿ ನದಿ ತೀರದಲ್ಲಿ ಅಪರಿಚಿತ ಮೃತ ದೇಹ ಪತ್ತೆಯಾಗಿದೆ ಎಂಬ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್ ಭೇಟಿ ನೀಡಿ ವೀಕ್ಷಣೆ ಮಾಡಿ ಈಜುಗಾರರ ಸಹಾಯದಿಂದ ಮೃತ ದೇಹವನ್ನು ನದಿಯಿಂದ ಮೇಲೆತ್ತಿದರು. ನಂತರ ಪರಿಶೀಲಿಸಿದಾಗ ಪಿಜಿ ಪಾಳ್ಯ ಗ್ರಾಮದ ಹೊಸ ಮಠದ ರಾಜಶೇಖರ ಸ್ವಾಮೀಜಿ ಎಂದು ಗೊತ್ತಾಗಿದೆ. 

ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರ ಪ್ರಕಾಶ್ ಎಂಬುವರು ಸ್ಥಳಕ್ಕೆ ಬಂದು ಗುರುತಿಸಿದರು. 

‘ಸ್ವಾಮೀಜಿ ಅನಾರೋಗ್ಯ ಪೀಡಿತರಾಗಿದ್ದರು ಹಾಗೂ ಆಗಾಗ ಹೊಟ್ಟೆನೋವಿನಿಂದ ನರಳುತ್ತಿದ್ದರು.  17ರಂದು ಕೊಳ್ಳೇಗಾಲಕ್ಕೆ ಹೋಗಿ ಬರುವುದಾಗಿ ಎಂದು ಹೋದವರು ಮಠಕ್ಕೆ ಹಿಂದಿರುಗಿರಲಿಲ್ಲ. ಎಲ್ಲ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ. ಅನಾರೋಗ್ಯವಿದ್ದ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ನೀರಿಗೆ ಹಾರಿರಬಹುದು’ ಎಂದು ಪ್ರಕಾಶ್‌ ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು