ಯಳಂದೂರು ವನ್ಯಜೀವಿ ವಿಭಾಗದಲ್ಲಿ ಹುಲಿ ಹೆಜ್ಜೆ ಗುರತು ದಾಖಲಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಬಂಡೀಪುರದಲ್ಲಿ ಹುಲಿ ಗಣತಿ ಚುರುಕು
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಹುಲಿ ಗಣತಿ ನಡೆಯುತ್ತಿದೆ. ಕಳೆದ ಹುಲಿ ಗಣತಿಯ ವೇಳೆ ರಾಜ್ಯದಲ್ಲಿ 563 ಹುಲಿಗಳು ಹಾಗೂ ಬಂಡೀಪುರದಲ್ಲಿ 190 ಹುಲಿಗಳು ಪತ್ತೆಯಾಗಿದ್ದವು. ಎರಡು ಚ.ಕಿ.ಮೀ ಒಂದು ಕ್ಯಾಮೆರಾದಂತೆ ಅರಣ್ಯದ ಎಲ್ಲ ದಿಕ್ಕುಗಳಲ್ಲಿ 1124 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು 25 ದಿನ ಮಾಹಿತಿ ಕಲೆ ಹಾಕಲಾಗುವುದು. ಹುಲಿಗಳ ಚಲನವಲನ ಹೆಜ್ಜೆ ಗುರುತು ಮರಗಳನ್ನು ಪರಚಿರುವ ಮಾಹಿತಿ ಸಂಗ್ರಹಿಸಲಾಗುವುದು. ಲೈನ್ ಟ್ರಾನ್ಸಾಕ್ಟ್ ಸರ್ವೆಯಲ್ಲಿ 2 ಕಿ.ಮೀ ಉದ್ದದ ಲೈನ್‌ನಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಸಸ್ಯಾಹಾರಿ ಪ್ರಾಣಿಗಳ ಮಾಹಿತಿ ಸಂಗ್ರಹಿಸಲಾಗುವುದು. ಹುಲಿ ಸಂರಕ್ಷಿತ ಪ್ರದೇಶದ ಜೊತೆಗೆ ಕಾಡಂಚಿನ ಭಾಗಗಳಲ್ಲೂ ಈ ಬಾರಿ ಹುಲಿಗಳ ಗಣತಿ ನಡೆಯುತ್ತಿರುವುದು ವಿಶೇಷ. ಕಳೆದ ಗಣತಿಗೆ ಹೋಲಿಸಿದರೆ ಹೆಚ್ಚು ಹುಲಿಗಳ ಪತ್ತೆಯಾಗುವ ನಿರೀಕ್ಷೆ ಇದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದರು. mara