ಚಾಮರಾಜನಗರ/ಯಳಂದೂರು: ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜ.5ರಿಂದ ಮೂರು ಹಂತಗಳಲ್ಲಿ ಹುಲಿ ಗಣತಿ ನಡೆಯಲಿದೆ.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗ 949.28 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, 7 ವಲಯ ಹಾಗೂ 56 ಗಸ್ತುಗಳನ್ನು ಹೊಂದಿದ್ದು ಜ.5ರಿಂದ ಮಾರ್ಚ್ 26ರವರೆಗೆ ಹುಲಿ ಗಣತಿ ನಡೆಯಲಿದೆ. ಎಂ-ಸ್ಟ್ರೈಪ್ ಇಕಾಲಜಿಕಲ್ ಆ್ಯಪ್ ಮೂಲಕ ಹುಲಿ ಗಣತಿ ನಡೆಯಲಿದೆ.

ಮೊದಲ ಹಂತದಲ್ಲಿ ಸೈನ್ ಸರ್ವೆ ಜ.5ರಿಂದ 7ರವರೆಗೆ ಕಾಡಿನೊಳಗೆ ಕಾಲ್ನಡಿಗೆಯ ಮೂಲಕ ನಡೆಯಲಿದೆ. ಪ್ರತಿದಿನ ಕನಿಷ್ಠ 5 ಕಿ.ಮೀ ನಡಿಗೆ ಇರಲಿದ್ದು, 56 ತಂಡಗಳು ಭಾಗವಹಿಸುತ್ತಿವೆ. ಪ್ರತಿ ತಂಡದಲ್ಲಿ ಮೂರರಿಂದ ನಾಲ್ಕು ಮಂದಿ ಇರಲಿದ್ದು 225 ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇರಲಿದ್ದಾರೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಆರಂಭವಾಗುವ ಹುಲಿ ಗಣತಿ 10 ಗಂಟೆಯವರೆಗೆ ನಡೆಯಲಿದೆ. ಗಣತಿ ವೇಳೆ ಸಿಗುವ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಪ್ರಾಣಿಗಳನ್ನು ಗುರುತಿಸಲಾಗುವುದು ಹಾಗೂ ಪ್ರಾಣಿಗಳ ಹೆಜ್ಜೆ ಗುರುತು, ಲದ್ದಿ, ಶಬ್ಧ, ಚಿಹ್ನೆಗಳ ಆಧಾರದ ಮೇಲೆ ಗಣತಿ ನಡೆಸಿ ಪ್ರಾಣಿಗಳ ಲದ್ದಿ ಹಾಗೂ ಹಿಕ್ಕೆಗಳನ್ನು ಸಂಗ್ರಹಿಸಲಾಗುವುದು.

ಎರಡನೇ ಹಂತದಲ್ಲಿ ಜ.15ರಿಂದ 18ರವರೆಗೆ ಲೈನ್ ಟ್ರಾನ್ಸಕ್ಟ್ ನಡೆಯಲಿದೆ. ರೇಂಜ್ ಫೈಂಡರ್, ಕಂಪಾಸ್, ಜಿಪ್ ಕವರ್, ಟೇಪ್ಗಳ ಸಹಾಯದಿಂದ ಗಣತಿ ನಡೆಯಲಿದೆ. ಒಟ್ಟು 56 ಲೈನ್ ಟ್ರಾನ್ಸಾಕ್ಟ್ಗಳಿದ್ದು ಸ್ವಯಂಸೇವಕರನ್ನೊಳಗೊಂಡ ಒಂದು ತಂಡದಲ್ಲಿ ತಲಾ ಮೂವರು ಸೇರಿ 168 ಮಂದಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಲಿದ್ದಾರೆ.

ಪ್ರತಿದಿನ ಬೆಳಿಗ್ಗೆ 6ರಿಂದ 8 ಹಾಗೂ ಸಂಜೆ 4ರಿಂದ 6ರವರೆಗೆ ಕಿ.ಮೀ ಕಾಲ್ನಡಿಗೆಯಲ್ಲಿ ಗಣತಿ ನಡೆಯಲಿದೆ. ಈ ವೇಳೆ ಕಾಣಸಿಗುವ ಪ್ರಾಣಿಗಳ ದತ್ತಾಂಶವನ್ನು ದಾಖಲು ಮಾಡಿಕೊಳ್ಳಲಾಗುವುದು, ಪ್ರತಿ 400 ಮೀ ಅಂತರದಲ್ಲಿ ಸಿಗುವ ಸಸ್ಯವರ್ಗ, ಹುಲ್ಲು, ಕಳೆ ಸಸ್ಯ, ಮಾನವ ಅಡಚಣೆ, ಪ್ರಾಣಿಗಳ ಹಿಕ್ಕೆಗಳ ಮಾಹಿತಿ ದಾಖಲಿಸಿಕೊಳ್ಳಲಾಗುವುದು ಸಂಗ್ರಹಸಲಾಗುವುದು.

ಮೂರನೇ ಹಂತದಲ್ಲಿ ಜ.26ರಿಂದ ಮಾರ್ಚ್ 26ವರೆಗೆ ಕ್ಯಾಮೆರಾ ಟ್ರಾಪ್ ಮೂಲಕ ಹುಲಿಗಳ ಗಣತಿ ನಡೆಯಲಿದೆ. ಒಟ್ಟು 454 ಗ್ರಿಡ್ಗಳಿದ್ದು ಒಂದು ಗ್ರಿಡ್ಗೆ ತಲಾ ಎರಡು ಕ್ಯಾಮೆರಾಗಳಂತೆ 908 ಕ್ಯಾಮೆರಾಗಳನ್ನು ಅಳವಡಿಸಿ ಪ್ರಾಣಿಗಳ ಚಲನ ವಲನಗಳ ದತ್ತಾಂಶಗಳನ್ನು ದಾಖಲು ಮಾಡಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ತಿಳಿಸಿದ್ದಾರೆ.

ಬಿಆರ್ಟಿಯಲ್ಲೂ ಗಣತಿ:

ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಅರಣ್ಯ ವ್ಯಾಪ್ತಿಯಲ್ಲೂ ಹುಲಿ ಗಣತಿ ನಡೆಯಲಿದೆ. ತಂತ್ರಜ್ಞಾನ ಆಧಾರಿತ ಕ್ಯಾಮೆರಾ ಟ್ರ್ಯಾಪ್, ಡ್ರೋನ್ ಮತ್ತು ಸ್ಯಾಟಲೈಟ್ ಆಧಾರಿತ ವ್ಯವಸ್ಥೆಯ ಮೂಲಕ ನಿಖರ ದತ್ತಾಂಶ ಸಂಗ್ರಹಣೆಗೆ ಒತ್ತು ನೀಡಲಾಗಿದೆ.

ಪ್ರಪಂಚದ ಶೇ 75 ಹುಲಿ ಆವಾಸ ಭಾರತದಲ್ಲಿದ್ದು ರಾಷ್ಟ್ರೀಯ ಪ್ರಾಣಿಯ ಅಭಿದಾನ ನೀಡಲಾಗಿದೆ. ಕಳೆದ ಗಣತಿಗಳಲ್ಲಿ ದೇಶದಲ್ಲಿ 3,682ಕ್ಕೂ ಹೆಚ್ಚು ಹುಲಿಗಳನ್ನು ಗುರುತಿಸಲಾಗಿದ್ದು, ಗಣತಿಯಲ್ಲಿ ಕರ್ನಾಟಕ ಎರಡನೇ ಸ್ಥಾನ ಅಲಂಕರಿಸಿದೆ. ರಾಷ್ಟ್ರೀಯ ಹುಲಿ ಗಣತಿ ಸಮೀಕ್ಷೆಯ ನಂತರ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ.

ಹುಲಿ ಗಣತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. ಆಯಾ ಕಾನನದ ಆವಾಸದಲ್ಲಿ ಜೀವಿಸುವ ಹುಲಿಗಳ ಸಂಖ್ಯೆ, ಅನುಕೂಲಕರ ಪರಿಸ್ಥಿತಿ, ಬಲಿ ಪ್ರಾಣಿಗಳ ಲಭ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಇದರಿಂದ ಹುಲಿಗಳ ಸಂರಕ್ಷಣಾ ನೀತಿ ಹಾಗೂ ನಿಯಮ ರೂಪಿಸಲು ಸ್ಪಷ್ಠ ಮಾಹಿತಿ ಲಭ್ಯವಾಗಲಿದೆ ಎನ್ನುತ್ತಾರೆ ಪರಿಸರ ಪ್ರಿಯರು.

ಬಿಳಿಗಿರಿ ಅರಣ್ಯದಲ್ಲಿ 65 ಪಾಯಿಂಟ್ ಗುರುತು

ಹುಲಿಗಣತಿ ಕಾರ್ಯ ಅತ್ಯಂತ ಕಷ್ಟಕರವಾಗಿದ್ದು ಯಶಸ್ವಿಯಾಗಿ ನಡೆಸಲು ಸಿಬ್ಬಂದಿಗೆ ವನ್ಯಜೀವಿ ತಜ್ಞರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತರಬೇತಿ ನೀಡಿದ್ದಾರೆ. 2022ರಲ್ಲಿ ಹುಲಿ ಗಣತಿ ನಡೆದಿತ್ತು. ಹುಲಿ ಸಂಚರಿಸುವ ಹಾದಿಯಲ್ಲಿ 65 ಕ್ಯಾಮೆರಾ ಟ್ರ್ಯಾಪ್ ಸ್ಥಳಗಳನ್ನು ಆಯ್ಕೆಮಾಡಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.