ಹನೂರು: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಮಾರಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿ ಬುಧವಾರ ಬಂಧಿಸಿದ್ದಾರೆ.
ಹನೂರು ತಾಲ್ಲೂಕಿನ ಗುಂಡಿಮಾಳದ ಪ್ರಕಾಶ್, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾಗನೂರಿನ ನಾಗೇಂದ್ರ ಸ್ವಾಮಿ, ರಾಗಿಬೊಮ್ಮನಹಳ್ಳಿ ನಿವಾಸಿ ನಾಗರಾಜು ಬಂಧಿತರು.
ಗುಂಡಿಮಾಳದ ಮೂಲಕ ನಕ್ಷತ್ರ ಆಮೆಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಅರಣ್ಯ ಸಂಚಾರಿ ದಳದ ಅಧಿಕಾರಿ ವಿಜಯರಾಜ್ ನೇತೃತ್ವದ ತಂಡ ದಾಳಿ ನಡೆಸಿ 1 ಕೆಜಿ 280 ಗ್ರಾಂ ತೂಗುವ ಎರಡು ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.