ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಮಹಾಸಭಾ: ಮೂಡ್ಲುಪುರ ನಂದೀಶ್‌ ಜಿಲ್ಲಾ ಅಧ್ಯಕ್ಷ

Last Updated 15 ಫೆಬ್ರವರಿ 2021, 16:35 IST
ಅಕ್ಷರ ಗಾತ್ರ

ಚಾಮರಾಜನಗರ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಂದೀಶ್‌ಕುಮಾರ್‌ (ಮೂಡ್ಲುಪುರ ನಂದೀಶ್‌) ಅವರು ಆಯ್ಕೆಯಾಗಿದ್ದಾರೆ.

ಶನಿವಾರ ನಡೆದ ಚುನಾವಣೆಯಲ್ಲಿ ನಂದೀಶ್‌ ಅವರು 942 ಮತಗಳನ್ನು ಪಡೆದುಪ್ರತಿಸ್ಪರ್ಧಿ ಎಚ್‌.ಜಿ.ಮಹದೇವಪ್ರಸಾದ್‌ ಅವರನ್ನು 364 ಮತಗಳಿಂದ ಸೋಲಿಸಿದರು. ಮಹದೇವಪ್ರಸಾದ್‌ ಅವರು 578 ಮತಗಳನ್ನು ಗಳಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೂ, ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದ ಕೋಡಸೋಗೆ ಶಿವಬಸಪ್ಪ ಅವರು ಆರು, ಮಹದೇವಸ್ವಾಮಿ ಅವರು ಐದು ಹಾಗೂ ಶ್ರೀಕಂಠಸ್ವಾಮಿ ಅವರು ಒಂದು ಮತ ಪಡೆದರು.

1870 ಮತದಾರರ ಪೈಕಿ, 1574 ಮಂದಿ ಮತದಾನ ಮಾಡಿದ್ದರು. ಈ ಪೈಕಿ 42 ಮತಗಳು ಅಸಿಂಧು ಗೊಂಡವು.

20 ನಿರ್ದೇಶಕರ ಆಯ್ಕೆ: ಅಧ್ಯಕ್ಷ ಸ್ಥಾನದ ಜೊತೆಗೆ 20 ನಿರ್ದೇಶಕರ ಸಾಮಾನ್ಯ ಸ್ಥಾನಗಳಿಗೂ ಚುನಾವಣೆ ನಡೆಯಿತು. 20 ಸ್ಥಾನಗಳಿಗೆ 53 ಮಂದಿ ಸ್ಪರ್ಧಿಸಿದ್ದರು.

ಬಸವರಾಜು ಎಂ., ನಾಗೇಂದ್ರ ಡಿ‌., ಪುಟ್ಟಣ್ಣ, ಪುರುಷೋತ್ತಮ ಎನ್‌.ಆರ್., ಸುಜೇಂದ್ರ ಎಂ,ಮಹೇಶ್‌ ಆರ್‌., ಇಂದ್ರೇಶ್‌ ಎಂ.ಪಿ, ವಿಶ್ವನಾಥ್‌ ಎಂ, ಮಧು ಡಿ., ಲೋಕೇಶ್‌ ಬಿ., ಮುರುಡೇಶ್ವರ ಸ್ವಾಮಿ, ಗಂಗಪ್ಪ ಹಂಗಳ, ಮಲ್ಲೇಶ್‌ ಎಂ.ಕೆ., ಉಮೇಶ್‌ ಕುಮಾರ್‌, ಬಸವಣ್ಣ ಕೆ.ಎಂ, ಲೋಕೇಶ್‌ ಕೆ.ಆರ್‌. ವೀರಭದ್ರಸ್ವಾಮಿ ಕೆ.ವಿ., ವೀರಭದ್ರಸ್ವಾಮಿ ಜಿ, ಪ್ರಮೋದ ಜಿ.ಕೆ., ನಿರಂಜನಮೂರ್ತಿ ಅವರು ನಿರ್ದೇಶಕರಾಗಿ ಆಯ್ಕೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT