ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಬೆಟ್ಟ: ವಿಜೃಂಭಣೆಯ ದೀಪಾವಳಿ ರಥೋತ್ಸವ

ಮಹದೇಶ್ವರನಿಗೆ ವಿಶೇಷ ಪೂಜೆ: ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು
Last Updated 29 ಅಕ್ಟೋಬರ್ 2019, 14:58 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಉತ್ತವಳ್ಳಿ ಸಮೀಪದಯಡಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ ಶ್ರೀಮಲೆಮಹದೇಶ್ವರಸ್ವಾಮಿ ರಥೋತ್ಸವವು ಭಕ್ತರಹರ್ಷೋದ್ಘಾರಗಳೊಂದಿಗೆ ಮಂಗಳವಾರವಿಜೃಂಭಣೆಯಿಂದ ಜರುಗಿತು.

ಮುಂಜಾನೆ5.50ಗಂಟೆಯ ಶುಭ ಮುಹೂರ್ತದಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಅರ್ಚಕರು ಪೂಜಾಕೈಂಕರ್ಯ ನೆರೆವೇರಿಸಿದರು. ಬಳಿಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

ಬೆಳಿಗ್ಗೆ 6.10ಗಂಟೆಯಿಂದ 7 ಗಂಟೆಯ ವರೆಗೂ ರಥೋತ್ಸವ ನಡೆಯಿತು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥೋತ್ಸವವನ್ನು ಕಣ್ತುಂಬಿಕೊಂಡರು.

ವಿಶೇಷ ಅಲಂಕಾರ: ಮಲೆಮಹದೇಶ್ವರಸ್ವಾಮಿಗೆ ಬೆಳಿಗ್ಗೆಯಿಂದಲೇ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂಕೂಡ ಉತ್ತುವಳ್ಳಿ, ಉಡಿಗಾಲ ಸೇರಿದಂತೆಸುತ್ತಲಿನಗ್ರಾಮಗಳಿಂದಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಅಂಗಡಿಗಳ ಸಾಲು: ಚಾಮರಾಜನಗರ ಮುಖ್ಯರಸ್ತೆಯ ಯಡಬೆಟ್ಟದ ದ್ವಾರದಿಂದ ಆರಂಭಗೊಂಡು ದೇವಸ್ಥಾನದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಸಿಹಿತಿನಿಸು, ಪೂಜಾಕೈಂಕರ್ಯದ ಪದಾರ್ಥಗಳನ್ನು ಮಾರಾಟ ಅಂಗಡಿಗಳನ್ನು ವ್ಯಾಪಾರಸ್ಥರು ತೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT