ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ಆಲಯದಲ್ಲಿ ಭಾನುವಾರ ಸಮಸ್ತ ಸದ್ಭಕ್ತರ ಜಯಘೋಷಗಳ ನಡುವೆ ಪವಿತ್ರೋತ್ಸವ ದೈವಿಕ ಕಾರ್ಯಗಳು ಸಾಂಗವಾಗಿ ನೆರವೇರಿದವು.

ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಪೂಜಾ ಕಾರ್ಯದಲ್ಲಿ ಆಗಮಿಕರು ಹೋಮ, ಹವನ, ಆರಾಧನೆಗಳನ್ನು ನಡೆಸಿ ಪವಿತ್ರ ಮಂತ್ರ ಪಠಿಸಿದರು. ರಂಗಪ್ಪನಿಗೆ ಧನ, ಧಾನ್ಯ, ಪುಷ್ಪ ಧಾರಣೆ ಮಾಡಿ, ವೇದ ಪಠಿಸಿ, ಪ್ರಾರ್ಥಿಸಿದರು. ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ರಾತ್ರಿ ಮೆರವಣಿಗೆ ನಡೆಸಿ ಪವಿತ್ರೋತ್ಸವ ಸಂಪನ್ನಗೊಳಿಸಿದರು.

ಆಲಯದಲ್ಲಿ ವರ್ಷ ಪೂರ್ತಿ ನಡೆಯುವ ಆರಾಧನೆಗಳಲ್ಲಿ ಉಂಟಾಗುವ ಲೋಪ ದೋಷಗಳ ನಿವಾರಣೆಗಾಗಿ ಪವಿತ್ರೋತ್ಸವ ಜರುಗುತ್ತದೆ. ಈ ಸಮಯ ದೇವರಿಗೆ ರಕ್ಷಾಧಾರಣೆ, ಕಂಕಣಧಾರಣೆ ಹಾಗೂ 12 ಬಗೆಯ ಹೂ, ದಾರ ಸಮರ್ಪಿಸಲಾಗುತ್ತದೆ. ನಂತರ ದಿನದಿಂದ ವರ್ಷಪೂರ್ತಿ ನಿತ್ಯ ಭಗವಂತನ ಆರಾಧನೆಗಳಿಗೆ ದೇವಳ ತೆರೆದಿರುತ್ತದೆ.

‘ಕೊನೆಯ ದಿನ ಮಧ್ಯಾಹ್ನ 2ಕ್ಕೆ ಪೂರ್ಣಾವತಿ ಮುಗಿಯಿತು. ನಂತರ ಪವಿತ್ರಾರಾಹೋಣ ನಡೆಸಿ, ಫಲವನ್ನು ಸಮಸ್ತ ಭಕ್ತರಿಗೆ ಸಲ್ಲಿಸಿ ಲೋಕ ಕಲ್ಯಾಣಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ದಾಸರು ಶಂಖನಾದ ಮೊಳಗಿಸಿದರೆ, ಭಕ್ತರು ಸ್ವಾಮಿ ನಾಮಾವಳಿ ಹಾಡಿದರು’ ಎಂದು ಆಗಮಿಕ ರವಿಕುಮಾರ್ ಹೇಳಿದರು.

ಚಂದ್ರಗ್ರಹಣ: ಬಾಗಿಲು ಮುಚ್ಚಿದ ರಂಗಪ್ಪ ದೇವಳ

ಸೂರ್ಯಗ್ರಹಣದ ಹಿನ್ನಲೆಯಲ್ಲಿ ರಂಗನಾಥಸ್ವಾಮಿ ದೇವಾಲಯವನ್ನು ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ಮುಚ್ಚಲಾಯಿತು. ಭಕ್ತರು ದೇವಳದ ಹೊರ ಭಾಗದಿಂದ ದೇವರಿಗೆ ಕೈಮುಗಿದು ತೆರಳಿದರು.

ಗ್ರಹಣದ ಅವಧಿ ರಾತ್ರಿ 11ರ ನಂತರ ಜರುಗಲಿದೆ. ಗ್ರಹಣ ಪೂರ್ಣಗೊಂಡ ನಂತರ ಸೋಮವಾರ ಮುಂಜಾನೆ ಆಲಯದಲ್ಲಿ ಮಹಾ ಮಂಗಳಾರತಿ ನಡೆಸಿ ಧಾರ್ಮಿಕ ಸೇವೆಗಳನ್ನು ನಡೆಸಲಾಗುತ್ತದೆ ಎಂದು ದೇವಸ್ಥಾನದ ಪಾರುಪತ್ತೆದಾರ ರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.