ಚಿಕ್ಕಬಳ್ಳಾಪುರ: ಹೊಸ ಆವಿಷ್ಕಾರಗಳು, ಸಂಶೋಧನೆಗಳು ದೇಶದ ಬೆಳವಣಿಗೆಗೆ ಪೂರಕ ಎಂದು ವಿಟಿಯು ಕುಲಸಚಿವ ಬಿ.ಇ.ರಂಗಸ್ವಾಮಿ ತಿಳಿಸಿದರು.

ನಗರದ ಎಸ್ಜೆಸಿಐಟಿಯಲ್ಲಿ ಗುರುವಾರ ನಡೆದ ‘ಎಮರ್ಜಿಂಗ್ ಟ್ರಂಡ್ಸ್ ಇನ್ ಎಂಜಿನಿಯರಿಂಗ್ ಆ್ಯಂಡ್ ಅಪ್ಲೈಡ್ ಸೈನ್ಸ್’ ಕುರಿತು ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕೃತಕ ಬುದ್ದಿಮತ್ತೆ ಮತ್ತು ಯಾಂತ್ರಿಕ ಅಧ್ಯಯನವು ಆರೋಗ್ಯ, ಕೃಷಿ, ಕೈಗಾರಿಕೆ, ಸಂಚಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹತ್ವದ ಬದಲಾವಣೆ ತರುತ್ತಿವೆ. ಸೌರಶಕ್ತಿ, ಗಾಳಿ, ಜಲಶಕ್ತಿ ಭವಿಷ್ಯದಲ್ಲಿ ಶಾಶ್ವತ ಅಭಿವೃದ್ಧಿಗೆ ಮೂಲವಾಗಲಿವೆ ಎಂದು ಪ್ರತಿಪಾದಿಸಿದರು.

ನೀವು ಇವುಗಳ ಬಗ್ಗೆ ಅನುಭವನ, ಆಲೋಚನೆ, ಸಮಸ್ಯೆ ಪರಿಹಾರದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಮಾನವ ಸಮಾಜದ ಹಿತಕ್ಕಾಗಿ ನವೀನ ತಂತ್ರಜ್ಞಾನವನ್ನು ಮಾನವೀಯ ಮೌಲ್ಯಗಳಿಂದಿಗೆ ಜೋಡಿಸಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.

‘ಎಲ್ಲರೂ ಹೊಸ ಪ್ರವೃತ್ತಿಗಳನ್ನು ಅರ್ಥಮಾಡಿಕೊಂಡು ದೇಶದ ಅಭಿವೃದ್ಧಿಗೆ ಬಳಸಬೇಕು. ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸುತ್ತಿದೆ. ನಾವು ಸೃಜನಶೀಲ, ವಿಮರ್ಶಾತ್ಮಕ ಚಿಂತನೆ ಮತ್ತು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ಸಂಶೋಧನೆ ಮತ್ತು ನವೀನತೆಗಳನ್ನು ಕೇವಲ ಲಾಭದ ದೃಷ್ಟಿಯಿಂದ ಮಾತ್ರವಲ್ಲ ಮಾನವ ಸಮಾಜದ ಕಲ್ಯಾಣಕ್ಕೆ ಬಳಸಬೇಕು. ಸಂಶೋಧನೆ ಕುತೂಹಲದಿಂದ ಹುಟ್ಟುತ್ತದೆ ಎಂದರು. ವಿವಿಧ ಕಾಲೇಜುಗಳ 200ಕ್ಕೂ ಹೆಚ್ಚು ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. ಪ್ರಾಂಶುಪಾಲ ಜಿ.ಟಿ.ರಾಜು, ರಂಗಸ್ವಾಮಿ, ಮಂಜುನಾಥ್ ಕುಮಾರ್, ಪ್ರೊ.ಪ್ರವೀಣ್ ಸಿ.ರಾಮಮೂರ್ತಿ, ಜಿ.ನಾರಾಯಣ್, ದೀಪಾ, ರಾಜಶೇಖರ್ ಕೆ.ಎಂ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.