ಬಾಗೇಪಲ್ಲಿ: ಪಟ್ಟಣದ ತಾಲ್ಲೂಕು ಪಂಚಾಯಿತಿ ಮುಂಭಾಗ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ರೈತ ಸಂಘಟನೆ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.

ರೈತರಿಗೆ ತೊಂದರೆಯಾದಾಗ ಹಾಗೂ ಸರ್ಕಾರದ ಯೋಜನೆಗಳನ್ನು ರೈತರಿಗೆ ಕಲ್ಪಿಸಲು ಅಖಿಲ ಕರ್ನಾಟಕ ರೈತ ಸಂಘಟನೆ ಯಾವುದೇ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳದೆ ಹೋರಾಟ ನಡೆಸಬೇಕು ಎಂದು ಮಾಜಿ ಸ್ವೀಕರ್ ಕೆ.ಆರ್.ರಮೇಶ್ ಕುಮಾರ್ ಕರೆ ನೀಡಿದರು

ಕೃಷಿಕರು ಸಂಕಷ್ಟದಲ್ಲಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳು ರೈತರಿಗೆ ಸಾಲ ಸೌಲಭ್ಯ ನೀಡುತ್ತಿಲ್ಲ. ಆದರೆ, ಸರ್ಕಾರಗಳು ಶ್ರೀಮಂತರು ಹಾಗೂ ಕಾರ್ಪೋರೇಟ್ ಕಂಪನಿ ಮಾಲೀಕರಿಗೆ ಸಾಲ ನೀಡಿ ಮನ್ನಾ ಮಾಡುತ್ತಾರೆ. ಆದರೆ, ರೈತರಿಗೆ ನೋಟಿಸ್ ನೀಡುತ್ತಾರೆ ಎಂದರು.

ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಇಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಕಮಿಷನ್ ಹೆಚ್ಚಾಗಿದೆ. ಹಾಗಾಗಿ ರೈತರೇ ನೇರವಾಗಿ ವ್ಯಾಪಾರ ಮಾಡುವ ಕಾನೂನು ಜಾರಿಯಾದರೆ ರೈತರು ಬೆಳೆದ ಬೆಳೆಗಳಿಗೆ ಆರ್ಥಿಕ ಬೆಲೆ ಸಿಗಲಿದೆ ಎಂದರು.

ಬಾಗೇಪಲ್ಲಿ ಕ್ಷೇತ್ರವು ಹೋರಾಟಗಳ ನೆಲೆಯಾಗಿದೆ. ಅಪ್ಪಸ್ವಾಮಿರೆಡ್ಡಿ, ಶ್ರೀರಾಮರೆಡ್ಡಿ, ಎಚ್.ಎಸ್.ರಾಮರಾವ್, ನಾಗಭೂಷಣ್ ಅವರಂತಹ ಕಮ್ಯೂನಿಸ್ಟ್ ನಾಯಕರು ರೈತರ ಭೂಮಿ, ನೀರಿಗಾಗಿ ಹೋರಾಟ ಮಾಡಿದ್ದಾರೆ ಎಂದು ಸ್ಮರಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಕೃಷಿ, ಕೃಷಿಕರು ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಇದರಿಂದ ಕೃಷಿ ಹಾಗೂ ಕೃಷಿಕರ ಕಲ್ಯಾಣ ಯೋಜನೆಗಳಿಗೆ ಸರ್ಕಾರಗಳು ಹೆಚ್ಚು ಅನುದಾನಗಳು ನೀಡಬೇಕು ಎಂದರು.

ಸಂಘಟನೆಯ ತಾಲ್ಲೂಕು ಸಂಚಾಲಕ ಪಿ.ಮಂಜುನಾಥರೆಡ್ಡಿ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಮುಖಂಡರಾದ ಎಸ್.ಎಸ್.ರಮೇಶಬಾಬು, ಹೇಮಚಂದ್ರ, ಲಕ್ಷ್ಮಿನರಸಿಂಹಪ್ಪ, ಆಂಜನೇಯರೆಡ್ಡಿ, ಲಕ್ಷ್ಮಿನಾರಾಯಣರೆಡ್ಡಿ, ಪಿ.ಆರ್.ಚಲಂ, ಎಚ್.ವಿ.ನಾಗರಾಜ್, ಚಂದ್ರಶೇಖರರೆಡ್ಡಿ, ಎ.ವಿ.ಪೂಜಪ್ಪ, ರಾಮಕೃಷ್ಣಾರೆಡ್ಡಿ, ಆದಿರೆಡ್ಡಿ, ನುಲಿಗೊಂಬುಗೆಂಗಿರೆಡ್ಡಿ, ಕೆ.ಆರ್.ನರೇಂದ್ರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.