ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರುದ್ದ ಯಾವ ತಂಡ ಫೈನಲ್ನಲ್ಲಿ ಆಡಲಿದೆ ಎಂಬುದು ಕುತೂಹಲವೆನಿಸಿದೆ.

ದುಬೈಯಲ್ಲಿ ಇಂದು ನಡೆಯುತ್ತಿರುವ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ.

ಸೆಮಿಫೈನಲ್ ಮಹತ್ವ ಪಡೆದುಕೊಂಡ ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ಗೆ ತಲುಪಲಿದೆ.

ಪಾಕಿಸ್ತಾನ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಬಾಂಗ್ಲಾದೇಶ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಎಂಟು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಪಾಕ್ ಪರ ಮೊಹಮ್ಮದ್ ಹ್ಯಾರಿಸ್ 31 ಹಾಗೂ ಮೊಹಮ್ಮದ್ ನವಾಜ್ 25 ರನ್ ಗಳಿಸಿದರು. ಆದರೆ ಅಗ್ರ ಕ್ರಮಾಂಕದ ಬ್ಯಾಟರ್ಗಳು ವೈಫಲ್ಯವನ್ನು ಅನುಭವಿಸಿದರು.

ಬಾಂಗ್ಲಾ ಪರ ತಸ್ಕಿನ್ ಅಹ್ಮದ್ ಮೂರು ಮತ್ತು ಮಹೆದಿ ಹಸನ್ ಹಾಗೂ ರಿಷಾದ್ ಹೊಸೈನ್ ತಲಾ ಎರಡು ವಿಕೆಟ್ ಗಳಿಸಿದರು.

ಫೈನಲ್ ಪಂದ್ಯವು ಭಾನುವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.