ಗೂಳೂರು(ಬಾಗೇಪಲ್ಲಿ): ತಾಲ್ಲೂಕಿನ ಗೂಳೂರು ಹೋಬಳಿಯ ಯಗವಐವಾರಪಲ್ಲಿ ಗ್ರಾಮದಲ್ಲಿ ಜಡಿ ಮಳೆ ನೆಲಗಡಲೆ ಬೆಳೆ ಸಂಪೂರ್ಣವಾಗಿ ನಾಶ ಆಗಿದೆ.

ರೈತ ನಂಜುಂಡಪ್ಪ ತಮ್ಮ ಗ್ರಾಮದ ಬಳಿಯ 4 ಏಕರೆ ಪ್ರದೇಶದಲ್ಲಿ ನೆಲಗಡಲೆ ಬೆಳೆ ಬೆಳೆದಿದ್ದರು. ನೆಲಗಡಲೆ ಗಿಡಗಳನ್ನು ಕಿತ್ತು ನೆಲದ ಮೇಲೆ ಹಾಕಿದ್ದರು. ಮಳೆ ನೀರು ಕಡಲೆಕಾಯಿ ಗಿಡಗಳನ್ನು ಕೊಚ್ಚಿಕೊಂಡು ಹೋಗಿದೆ. ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ತೋಟದಲ್ಲಿ ಉಳಿದಿರುವ ಗಿಡಗಳು ಮೊಳಕೆ ಹೊಡೆದಿವೆ.

₹1 ಲಕ್ಷ ಸಾಲ ಮಾಡಿ ನೆಲಗಡಲೆ ಬೆಳೆ ಬೆಳೆದ್ದೆ. ಕೂಲಿ ಹಾಗೂ ಬಿತ್ತನೆಬೀಜ ಸೇರಿ ಹೆಚ್ಚುವರಿಯಾಗಿ ₹1 ಲಕ್ಷ ಖರ್ಚು ಮಾಡಿದ್ದೆ. ನೆಲಗಡಲೆ ಗಿಡಗಳು ಕಿತ್ತು ಒಣಗಲು ಹಾಕಿದ್ದವು. ಆದರೆ ನಿರಂತರ ಮಳೆಯಿಂದ ನೀರಿನ ತೇವಾಂಶದಿಂದ ಕಾಯಿಗಳು ಇದೀಗ ಮೊಳಕೆ ಹೊಡೆದಿದೆ. ₹2.50 ಲಕ್ಷ ನಷ್ಟ ಉಂಟಾಗಿದೆ ಎಂದು ರೈತ ನಂಜುಂಡಪ್ಪ ತಿಳಿಸಿದರು.

ಸ್ಥಳಕ್ಕೆ ಕಂದಾಯ, ಕೃಷಿ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ಮಾಡಬೇಕು. ನಷ್ಟ ಪರಿಹಾರದ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು. ಸರ್ಕಾರ ಕೂಡಲೇ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.