ಬಾಗೇಪಲ್ಲಿ: ಗ್ರಾಮ ದೇವತೆ ಟ್ರಸ್ಟ್ ಮತ್ತು ಕರಗ ಮಹೋತ್ಸವ ಸಮಿತಿಯಿಂದ ಧರ್ಮರಾಯ ಕರಗ ಮಹೋತ್ಸವ ಪ್ರಯುಕ್ತ ಪಟ್ಟಣದಲ್ಲಿ ಹಸಿಕರಗದ ಮೆರವಣಿಗೆ ಮತ್ತು ತಂಬಿಟ್ಟಿನ ದೀಪೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಕರಗ ಪ್ರಯುಕ್ತ ನಡೆದ ಜಾರುಟ್ಲು ಪರಿಷೆ ಎಲ್ಲರ ಗಮನ ಸೆಳೆಯಿತು.

36ನೇ ಧರ್ಮರಾಯಸ್ವಾಮಿ ಕರಗದ ಪ್ರಯುಕ್ತ ಗುರುವಾರ ರಾತ್ರಿ 22 ನೇ ವಾರ್ಡ್ನ ಬೈಯ್ಯಪ್ಪರೆಡ್ಡಿ ಮನೆಯ ಆವರಣದಲ್ಲಿ ಕತ್ತಿ, ಚಾಕು, ಬಾಕು ಸೇರಿದಂತೆ ವಿವಿಧ ವಸ್ತುಗಳಿಗೆ ಪೂಜೆ ಸಲ್ಲಿಸಲಾಯಿತು. ಕರ್ಪೂರ ಬೆಳಗಿಸಿದ ಬಳಿಕ ಸಮಿತಿಯ ಪದಾಧಿಕಾರಿಗಳ ಕೈಗಳಿಗೆ ಅರಿಶಿಣ ದಾರದ ಕಂಕಣ ಕಟ್ಟಿದರು. ಮೇಲೂರು ವಹ್ನಿಕುಲ ಧರ್ಮೇಶ್ ಅವರು ಹಾಗೂ ವೀರಕುಮಾರರು ಮನೆಯ ಒಳಗೆಯಿಂದ ಹಸಿ ಕರಗವನ್ನು ಕೈಗಳಲ್ಲಿ ಹಿಡಿದು ಹೊರಬಂದರು. ನೆರೆದ ಭಕ್ತರು ಆವರಣದಲ್ಲಿ ಕರ್ಪೂರ ಬೆಳಗಿಸಿ ಸ್ವಾಗತಿಸಿದರು.

ಪಟ್ಟಣದ ಆವುಲಮಂದೆ, ಗಂಗಮ್ಮ ಗುಡಿ ರಸ್ತೆ, ಕುಂಬಾರಪೇಟೆ ರಸ್ತೆ, ಸಂತೇಮೈದಾನದ ರಸ್ತೆಗಳು ಸೇರಿದಂತೆ ಮುಖ್ಯವೃತ್ತಗಳಲ್ಲಿ ಧರ್ಮೇಶ್ ಅವರು ಹಸಿ ಕರಗ ಹೊತ್ತು ಮೆರವಣಿಗೆ ಮಾಡಿದರು. ಪಟ್ಟಣದ ಗಂಗಮ್ಮ ದೇವಾಲಯದ ಮುಂದೆ ತಮಟೆ ಕಲಾವಿದರು ಹೊಡೆದ ಶಬ್ದಗಳಿಗೆ ಹಸಿ ಕರಗ ಹೊತ್ತ ಧರ್ಮೇಶ್ ರವರು ಅರ್ಧ ಗಂಟೆ ಕಾಲ ಹೆಜ್ಜೆ ಹಾಕಿ ಕುಣಿದರು. ಭಕ್ತರು ಗೋವಿಂದಾ... ಗೋವಿಂದಾ... ಎಂದು ಹುಮ್ಮಸ್ಸು ತುಂಬಿದರು. ಹಸಿ ಕರಗ ಹೊತ್ತು ಧರ್ಮೇಶ್ ಅವರು ವಿವಿಧ ಭಂಗಿಗಳಲ್ಲಿ ನೃತ್ಯ ಮಾಡಿದರು.

ಗಂಗಮ್ಮ ದೇವಾಲಯದ ಅರ್ಚಕ ಪುನೀತ್ ಹಸಿ ಕರಗಕ್ಕೆ ಮಹಾಮಂಗಳಾರತಿ ಬೆಳಗಿಸಿದರು. ಪಟ್ಟಣದ ವಿವಿಧ ವಾರ್ಡ್ಗಳ ಯುವಕರು, ಯುವತಿಯರು, ಮಹಿಳೆಯರು ಹಸಿಕರಗಕ್ಕೆ ಪೂಜೆ ಮಾಡಿದರು. ಆಗಮಿಸಿದ ಭಕ್ತರಿಗೆ ಕರಗ ಮಹೋತ್ಸವದ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಜನಮನ ಸೆಳೆದ ತಂಬಿಟ್ಟಿನ ದೀಪೋತ್ಸವ: ಧರ್ಮರಾಯಸ್ವಾಮಿ ಕರಗದ ಪ್ರಯುಕ್ತ ಶುಕ್ರವಾರ ಮಧ್ಯಾಹ್ನ ಸಿಡೀರಣ್ಣ ನೇತೃತ್ವದಲ್ಲಿ ತಂಬಿಟ್ಟಿನ ದೀಪೋತ್ಸವ ನಡೆಯಿತು. ಪಟ್ಟಣದ ವಾಲ್ಮೀಕಿ ನಗರದ ಅಶ್ವಥ್ಥಪ್ಪ, ರೇಡಿಯೋಕಿಟ್ಟಪ್ಪ, ಅಶೋಕ ನೇತೃತ್ವದಲ್ಲಿ ಹೆಣ್ಣುಮಕ್ಕಳು, ಮಹಿಳೆಯರು ತಟ್ಟೆ, ಪಾತ್ರೆಗೆ ಹೂವುಗಳಿಂದ ಸಿಂಗರಿಸಿ, ತಾಂಬೂಲ, ಹಣ್ಣುಗಳೊಂದಿಗೆ ತಂಬಿಟ್ಟಿನ ದೀಪಗಳ ಮೆರವಣಿಗೆ ಮಾಡಿದರು. ಪಟ್ಟಣದ ಅಂಬೇಡ್ಕರ್ ನಗರದ ಮಹಿಳೆಯರು ಮುಖ್ಯರಸ್ತೆಯಲ್ಲಿ ತಂಬಿಟ್ಟಿನ ದೀಪಾದಾರತಿ ಮೆರವಣಿಗೆ ಮಾಡಿದರು. ದೇವಾಲಯದ ಮುಂದೆ ತಂಬಿಟ್ಟಿನ ದೀಪಗಳು ಹಿಡಿದ ಮಹಿಳೆಯರು ಅಗ್ನಿಕುಂಡ ಪ್ರವೇಶ ಮಾಡಿದರು. ದೇವಿಗೆ ತಂಬಿಟ್ಟಿನ ದೀಪಾದಾರತಿ ಬೆಳಗಿಸಿದರು.

ನಗೆಕಡಲಿನಲ್ಲಿ ತೇಲಿಸಿದ ಜಾರುಟ್ಲು ಪರಿಷೆ: ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿ ಜಾರುಟ್ಲು ಪರಿಷೆ ನಡೆಯಿತು. ಕೆಸರಿನಲ್ಲಿ ಉದ್ದನೆಯ ಕಂಬ ನೆಟ್ಟು ಅದಕ್ಕೆ ಜೇಡಿಮಣ್ಣು, ಕಿತ್ತಾಳೆ ಅಂಟು ಅಂಟಿಸಿ ಜಾರುಟ್ಲು ಕಂಬ ಸಿದ್ಧಪಡಿಸಲಾಗಿತು. ವೀರಕುಮಾರರು ಜಾರುಟ್ಲು ಕಂಬದ ಸುತ್ತಲೂ ಮೆರವಣಿಗೆ ಮಾಡಿ, ಕಂಬವನ್ನು ಏರಲು ಕೆಸರಿನ ನೀರಿನಲ್ಲಿ ಇಳಿದರು. ಅಂಟಿನ ನೀರು ಮೇಲೆಯಿಂದ ಹಾಕುವಾಗ, ವೀರಕುಮಾರರು ಕಂಬವನ್ನು ಏರಲು ಆಗದೇ, ಕೆಸರಿನಲ್ಲಿ ಬೀಳುವ ದೃಶ್ಯಗಳು ನಗೆಗಡಲಿನಲ್ಲಿ ತೇಲಿಸಿತು. ಕಡೆಗೆ ವ್ಯಕ್ತಿಯೊಬ್ಬರು ಕಂಬಕ್ಕೆ ಹಗ್ಗಗಳನ್ನು ಕಟ್ಟಿಕೊಂಡು ಕಂಬ ಏರಿ ಸಾಹಸ ಪ್ರದರ್ಶಿಸಿದರು. ನೆರೆದ ಜನರು ಚಪ್ಪಾಳೆ, ಕೇಕೆ ಹಾಕಿ ಸಂಭ್ರಮಸಿದರು.

ಕರಗ ಮಹೋತ್ಸವ ಸಮಿತಿಯ ಮುಖ್ಯಸ್ಥರಾದ ಬಿ.ಆರ್.ನರಸಿಂಹನಾಯ್ಡು, ಎ.ಜಿ.ಸುಧಾಕರ್, ಮರಿಯಪ್ಪ, ಗಡ್ಡಂನರಸಪ್ಪ, ಸೂರ್ಯನಾರಾಯಣರೆಡ್ಡಿ, ಮಂಜುನಾಥ್, ಆದಿಮೂರ್ತಿ, ವೆಂಕಟೇಶ್, ಬಿ.ಎಸ್.ನಾರಾಯಣಸ್ವಾಮಿ, ಆರ್. ಹನುಮಂತರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.