ಡಾ.ಎಚ್.ಎನ್.ವೃತ್ತದಿಂದ ಗೂಳೂರು ಕಡೆಗೆ ಸಂಚರಿಸುವ ರಸ್ತೆಯಲ್ಲಿ ಗುಂಡಿ
ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಬಾಗೇಪಲ್ಲಿ ಪಟ್ಟಣದ 7ನೇ ವಾರ್ಡ್‍ನ ಹಳೆ ಭಾರತಿ ಶಾಲೆಯ ರಸ್ತೆಯಲ್ಲಿರುವ ಗುಂಡಿ

ಗುಂಡಿ ಮುಚ್ಚುವಂತೆ ಕ್ರಮ ಅಗೆದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವಂತೆ ಕ್ರಮ ತೆಗೆದುಕೊಳ್ಳಲಾಗುವುದು. ರಸ್ತೆ ಕಾಮಗಾರಿ ಚರಂಡಿ ಸ್ವಚ್ಛತೆಗೆ ಗುಂಡಿಗಳನ್ನು ಅಗೆಯಬೇಕಾಗಿದೆ. ನಂತರ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚಿಸಲಾಗುವುದು.
ಎಂ.ಶ್ರೀನಿವಾಸ್ ಮುಖ್ಯಾಧಿಕಾರಿ
ಕೆಸರು ಗುಂಡಿಗಳ ಮೇಲೆ ಸಂಚಾರ ಹೊರವಲಯದ ಟಿ.ಬಿ.ಕ್ರಾಸ್‍ನಲ್ಲಿ ಅವೈಜ್ಞಾನಿಕ ರಸ್ತೆ ಮಾಡಲಾಗಿದೆ. ಚರಂಡಿ ನಿರ್ಮಾಣ ಮಾಡಿಲ್ಲ. ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಿಲ್ಲ. ಕಲುಷಿತ ಹಾಗೂ ಮಳೆ ನೀರು ಗುಂಡಿಗಳಲ್ಲಿ ಸಂಗ್ರಹವಾಗಿದ್ದು ಕೆಸರು ನೀರಿನ ಗುಂಡಿಗಳ ಮೇಲೆ ಸವಾರರು ಸಂಚರಿಸುವಂತಾಗಿದೆ.
ಮಹೇಶ್ ಟಿ.ಬಿ.ಕ್ರಾಸ್ ನಿವಾಸಿ
ಸಮರ್ಕಪವಾಗಿ ಗುಂಡಿ ಮುಚ್ಚಿಲ್ಲ ಉತ್ತಮ ರಸ್ತೆಗಳು ಗುಂಡಿ ಬಿದ್ದಿವೆ. ಪುರಸಭೆಯವರು ರಿಪೇರಿಗೆ ಗುಂಡಿ ಅಗೆದವರು ಸಮರ್ಪಕವಾಗಿ ಮುಚ್ಚುವುದಿಲ್ಲ. ಕಲ್ಲು ಮಣ್ಣು ಹಾಕಿ ತುಂಬಿಸಲ್ಲ. ಒಂದು ಕಡೆ ಎತ್ತರ ಮತ್ತೊಂದು ಕಡೆ ಗುಂಡಿ ಬಿದ್ದಿವೆ.
ಜಿ.ಕೃಷ್ಣಪ್ಪ 7ನೇ ವಾರ್ಡ್ ಪುರಸಭೆ ಮಾಜಿ ಸದಸ್ಯ