ಗೌರಿಬಿದನೂರು: ತಾಲ್ಲೂಕಿನ ತೊಂಡೇಭಾವಿ ಹೋಬಳಿಯ ದ್ಯಾವಸಂದ್ರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.

ಛತ್ರಪತಿ ಶಿವಾಜಿ ಯುವಕರ ಬಳಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿಯವರ ಧೈರ್ಯ, ಶೌರ್ಯ, ಸಾಹಸ, ಸ್ವಾಭಿಮಾನ ಇಡೀ ದೇಶಕ್ಕೆ ಮಾದರಿಯಾಗಿದೆ. ಚಿಕ್ಕಂದಿನಿಂದಲೇ ರಾಮಾಯಣ, ಮಹಾಭಾರತ, ಹಾಗೂ ಯುದ್ಧದ ಕಥೆಗಳನ್ನು ಹೇಳುತ್ತಿದ್ದ ಶಿವಾಜಿ ಅವರ ತಾಯಿ, ಕ್ಷತ್ರಿಯರು ಹೇಗೆ ಧೈರ್ಯದಿಂದ ಬದುಕಬೇಕು ಎಂಬುದನ್ನು ಶಿವಾಜಿಗೆ ತಿಳಿಸಿಕೊಟ್ಟಿದ್ದರು ಎಂದರು.

ಇಡೀ ವಿಶ್ವವೇ ಅವರ ಶೌರ್ಯವನ್ನು ಮೆಚ್ಚುತ್ತಿದೆ. ಇಂದು ನಮ್ಮ ಸೈನಿಕರಿಗೆ ಶಿವಾಜಿಯೇ ಪ್ರೇರಣೆ. ಮರಾಠ ಸೈನಿಕರು ಎಂದರೆ ಇವತ್ತಿಗೂ ಕೂಡ ಹೋರಾಟ ಮಾಡುವವರು ಎಂದು ಭಾರತ ಸೇನೆಯಲ್ಲಿ ಹೆಸರುವಾಸಿಯಾಗಿದ್ದಾರೆ. ಛತ್ರಪತಿ ಶಿವಾಜಿ ಕೇವಲ ಮರಾಠ ಸಮುದಾಯ ಮತ್ತು ಪ್ರತಿಮೆಗೆ ಸೀಮಿತವಲ್ಲ. ಇಡೀ ಭಾರತ ದೇಶದ ಸ್ವಾಭಿಮಾನದ ಸಂಕೇತ. ಇಂದಿನ ಅವರ ಶಕ್ತಿ, ಶೌರ್ಯ ಮತ್ತು ಧೈರ್ಯವನ್ನು ಪ್ರೇರಣೆಯಾಗಿ ತೆಗೆದುಕೊಂಡು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟದ ಅಧ್ಯಕ್ಷ ಶ್ಯಾಮ್ ಸುಂದರ್ ಗಾಯಕ್ವಾಡ್, ಜಗನ್ನಾಥ್ ರಾವ್ ಹಸುಳೆ, ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟದ ಉಪಾಧ್ಯಕ್ಷ ಲಕ್ಷ್ಮಣ್ ರಾವ್ ಚವಾಣ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ, ರಮೇಶ್ ರಾವ್ ಶಿಲ್ಕೆ, ಗಂಗೂಜಿ ರಾವ್ ಚವಾಣ್, ಶಿವಾಜಿ ರಾವ್, ಭವಾನಿ ಬಾಯಿ, ರಾಣಾ ಪ್ರತಾಪ್, ಜಗನ್ನಾಥ್ ರಾವ್, ಶಿವಾಜಿ ರಾವ್ ಚವಾಣ್, ವಿಜಿ ಕುಮಾರ್, ಪ್ರಕಾಶ್ ರಾವ್, ಮುನಿಸ್ವಾಮಿ ರಾವ್, ದೊಡ್ಡಮನೆ ಅಂಬಾಜಿ ರಾವ್, ವೆಂಕೋಬರಾವ್, ಸತೀಶ್ ಚವಾಣ್ ರಾಮು, ಸಿದ್ದೇಶ್ ರಾವ್, ಶಿವಾಜಿ ರಾವ್, ರಾಮೋಜಿ ರಾವ್, ಸೇರಿದಂತೆ ಛತ್ರಪತಿ ಶಿವಾಜಿ ಬಳಗದ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.