ಚಿಕ್ಕಬಳ್ಳಾಪುರ: ಗಣೇಶೋತ್ಸವಕ್ಕೆ ಮೂರೇ ದಿನಗಳು ಬಾಕಿ ಇದೆ. ಹಬ್ಬಕ್ಕಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ನಗರದಲ್ಲಿ ವಿಘ್ನ ನಿವಾರಕ ಮೂರ್ತಿಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರಾಟಕ್ಕೆ ಸಜ್ಜಾಗಿವೆ.

ಶಂಖ ಗಣಪ, ಕೃಷ್ಣ ಗಣಪ ದರ್ಬಾರ್, ಸಾಯಿಬಾಬಾ, ಸಿಂಹಾರೂಢ, ಗಜವಾಹನ, ಅಂಜನೇಯ, ನಾಗರಹಾವು, ಮಯೂರ ವಾಹನ, ಕಮಲಾರೂಢ, ನೃತ್ಯಪಟು, ವೀಣಾ, ಆಕಳು, ಅಶ್ವ, ಇಲಿ, ರಥ, ಮರದ ಕೊಂಬೆಯ ಮೇಲೆ ಕುಳಿತ ಗಣಪ ಹೀಗೆ ನಾನಾ ಬಗೆ ಬಗೆಯ ಭಂಗಿಗಳಲ್ಲಿ ಕುಳಿತಿರುವ ಮೂರ್ತಿಗಳು ಮಾರುಕಟ್ಟೆಗೆ ಬರುತ್ತಿವೆ.

ಮನೆಗಳಲ್ಲಿ ಮೂರ್ತಿಗಳನ್ನು ಕೂರಿಸುವವರು ಹಾಗೂ ಬೀದಿಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮಂಡಳಿಯವರು, ಮುಂಚೆಯೇ ತಮಗೆ ಬೇಕಾದ ಆಕಾರದ ಮೂರ್ತಿಯನ್ನು ಮುಂಗಡವಾಗಿ ಕಾಯ್ದಿರಿಸುವರು. ಗಣೇಶ ಚತುರ್ಥಿ ಅಥವಾ ಹಬ್ಬದ ಹಿಂದಿನ ದಿನ ಮೂರ್ತಿಗಳನ್ನು ತರುವರು.

ಹೀಗೆ ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹಬ್ಬದ ತಯಾರಿಗಳು ಹೆಚ್ಚುತ್ತದೆ. ಗಣೇಶನಿಗೆ ಸ್ವಾಗತ ಕೋರಲು ಜನರು ಸಜ್ಜಾಗಿದ್ದಾರೆ. ಎಂ.ಜಿ ರಸ್ತೆ, ಬಿಬಿ ರಸ್ತೆಯಲ್ಲಿ ಮಾರಾಟಕ್ಕೆ ಇಟ್ಟಿರುವ ವೈವಿಧ್ಯಮಯ ಗಣೇಶ ಮತ್ತು ಗೌರಿ ಮೂರ್ತಿಗಳು ಗಮನ ಸೆಳೆಯುತ್ತಿವೆ. ಸಣ್ಣ ಮೂರ್ತಿಗಳಿಂದ ಹಿಡಿದು ಆಳೆತ್ತರದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಗಾತ್ರ ಮತ್ತು ವೈವಿಧ್ಯದ ಆಧಾರದಲ್ಲಿ ಬೆಲೆಯು ನಿರ್ಧಾರವಾಗುತ್ತದೆ.

ಕೊಲ್ಕತ್ತಾ ತಂಡ: ನಗರದ ಹೊರವಲಯದ ಅಗಲಗುರ್ಕಿ ರೈಲ್ವೆ ಗೇಟ್ ಬಳಿಯ ರಸ್ತೆಬದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಟೆಂಟ್ ನಲ್ಲಿ ಕೊಲ್ಕತ್ತಾದ ಕೃಷ್ಣಾನಗರದ ಲಕ್ಷ್ಮಿಕಾಂತ್ ನೇತೃತ್ವದ ಕಲಾವಿದರ ತಂಡ ಕಳೆದ ಎರಡು ತಿಂಗಳಿನಿಂದ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ.

ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿರುವ ಈ ಕಲಾವಿದರು ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಜಲಮಾಲಿನ್ಯವಾಗಲಿ ಅಥವಾ ಜಲಚರಗಳಿಗೆ ತೊಂದರೆ ಉಂಟು ಮಾಡದಂತಹ ವಸ್ತುಗಳನ್ನು ಬಳಕೆ ಮಾಡುತ್ತಿರುವುದು ವಿಶೇಷವಾಗಿದೆ.

ಇದೀಗ ಕೊನೆಯ ಹಂತವಾಗಿ ಮೂರ್ತಿಗಳು ಆಕರ್ಷಕವಾಗಿ ಗ್ರಾಹಕರ ಗಮನ ಸೆಳೆಯುವ ರೀತಿಯಲ್ಲಿ ವಾಟರ್ ಪೇಯಿಂಟ್ ಮಾಡುವ ಮೂಲಕ ಮೂರ್ತಿಗಳಿಗೆ ಪಂಚೆ, ಶಲ್ಯಗಳನ್ನು ಬಳಸಿ ಅಲಂಕರಿಸಿ ಮಾರಾಟಕ್ಕೆ ಇಟ್ಟಿದ್ದಾರೆ.

‘ವಿವಿಧ ಭಂಗಿಯ ಗಣಪ ಮೂರ್ತಿಗಳು 3 ರಿಂದ 12 ಅಡಿವರೆಗೆ ತಯಾರಿಸಲಾಗಿದೆ. ಇನ್ನೂ ಮೂರ್ತಿಯ ಗಾತ್ರದ ಆಧಾರದ ಮೇಲೆ ಸುಮಾರು ₹ 3 ಸಾವಿರದಿಂದ ಮೌಲ್ಯ ಆರಂಭವಾಗಲಿದೆ. ಹಬ್ಬಕ್ಕೆ ಮುಂಚಿತವಾಗಿ ಗ್ರಾಹಕರು ಇಂತಹದೇ ವಿನ್ಯಾಸದ ಮೂರ್ತಿಬೇಕೆಂದು ಕೇಳಿದರೂ ತಯಾರಿಸಿಕೊಡುತ್ತೇವೆ’ ಎಂದು ಕಲಾವಿದರ ತಂಡದ ಮೂರ್ತಿ ತಯಾರಕ ಲಕ್ಷ್ಮಿಕಾಂತ್ ಹೇಳುತ್ತಾರೆ.

ಪಿಒಪಿ ಮೂರ್ತಿ ಆತಂಕ: ಪ್ರತಿ ಸಲ ಹಬ್ಬದ ವೇಳೆ ಮಣ್ಣಿನಲ್ಲಿ ಸುಲಭವಾಗಿ ಕರಗಬಲ್ಲ ಪರಿಸರ ಸ್ನೇಹಿ ಮೂರ್ತಿಗಳನ್ನು ಮನೆ ಹಾಗೂ ಬೀದಿಗಳಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಜಿಲ್ಲಾಡಳಿತ ಸೂಚಿಸುತ್ತದೆ. ಸರ್ಕಾರ ಸಹ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಿದೆ. ಇಷ್ಟಾದರೂ ಪಿಒಪಿ ಮೂರ್ತಿಗಳನ್ನು ಕದ್ದು ಮಾರಾಟ ಮಾಡುವುದು ಮಾತ್ರ ನಿಂತಿಲ್ಲ.

Cut-off box - ಬಡಾವಣೆಗಳಲ್ಲಿ ಸಿದ್ದತೆ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಇಡೀ ಗ್ರಾಮಕ್ಕೆ ಒಂದೇ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ವಾರ್ಡ್ಗಳಿಗೆ ಎರಡು ಮೂರು ಅಥವಾ ಬಡಾವಣೆ ಬೀದಿಗೆ ಒಂದು ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ನಗರದ ವಾರ್ಡ್ಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪೆಂಡಲ್ಗಳ ನಿರ್ಮಾಣ ಹಣ ವಸೂಲಿ ಸೇರಿದಂತೆ ಕಾರ್ಯಕ್ರಮಗಳನ್ನು ವೇಳಾ ಪಟ್ಟಿಗಳನ್ನು ಗಣೇಶೋತ್ಸವ ಸಂಘಟಕರು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಲು ಮೂರ್ತಿಗಳ ಖರೀದಿ ಜೊತೆಗೆ ಬೀದಿಗಳಲ್ಲಿ ಮಕ್ಕಳಿಂದ ಹಬ್ಬದ ಕಲೆಕ್ಷನ್ ಸಹ ಶುರುವಾಗಿದೆ.

Cut-off box - ‘₹300ರಿಂದ ₹30 ಸಾವಿರವರೆಗೆ ಬೆಲೆ’ ಅರ್ಧ ಅಡಿಯಿಂದ 13 ಅಡಿಯವರೆಗೂ ನಮ್ಮಲ್ಲಿ ಗಣಪತಿಗಳು ಇವೆ. ₹ 300ರಿಂದ ₹ 30 ಸಾವಿರವರೆಗೂ ಬೆಲೆ ಇದೆ. ವಿನ್ಯಾಸ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಇದೆ’ ಎಂದು ಚಿಕ್ಕಬಳ್ಳಾಪುರದ ಗಣೇಶ ವ್ಯಾಪಾರಿ ಪವನ್ ತಿಳಿಸಿದರು. *** 10 ವರ್ಷದಿಂದ ಗಣಪತಿ ತಯಾರಿಕೆ ಕೋಲ್ಕತ್ತಾದಿಂದ ಕಳೆದ 10 ವರ್ಷದಿಂದ ಇಲ್ಲಿಗೆ ಬಂದು ಗಣಪತಿ ತಯಾರಿಸುತ್ತಿದ್ದೇವೆ. ಐದರಿಂದ 10 ಜನರು ತಂಡ ನಮ್ಮದು. ಈ ಬಾರಿ ಹೊಸ ಹೊಸ ಡಿಸೈನ್ ಗಣೇಶಗಳು ಇವೆ. 80 ಮೂರ್ತಿಗಳನ್ನು ಮಾಡಿದ್ದೇವೆ ಎಂದು ಕೋಲ್ಕತ್ತದ ಲಕ್ಷ್ಮಿಕಾಂತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.