ಚಿಕ್ಕಬಳ್ಳಾಪುರ: ವಸತಿ ನಿಲಯಕ್ಕೆ ಪೂರೈಕೆಯಾದ ಅಕ್ಕಿ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಗುಡಿಬಂಡೆ ತಾಲ್ಲೂಕಿನ ಕೊಂಡರೆಡ್ಡಿಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ಮತ್ತು ನಿಲಯಪಾಲಕಿ ರಾಧಿಕಾ ಎಸ್. ಅವರನ್ನು ಜಿಲ್ಲಾಧಿಕಾರಿ ಜಿ.ಪ್ರಭು ಕೆಲಸದಿಂದ ಅಮಾನತುಗೊಳಿಸಿದ್ದಾರೆ.

ಗುಡಿಬಂಡೆ ಟಿಎಪಿಸಿಎಂಎಸ್ ನಿಂದ ಹಾಸ್ಟೆಲ್ಗೆ 60 ಕ್ವಿಂಟಲ್ ಅಕ್ಕಿ ಹಾಗೂ 30 ಕ್ವಿಂಟಲ್ ಗೋಧಿ ಎತ್ತುವಳಿ ಮಾಡಿದ್ದರು. ಹಾಸ್ಟೆಲ್ನಲ್ಲಿ ದಾಸ್ತಾನು ಮಾಡಿರುವ ಅಕ್ಕಿಯಲ್ಲಿ 4.40 ಕ್ವಿಂಟಲ್ ಕೊರತೆಯಾಗಿದೆ. ಪ್ರಾಂಶುಪಾಲ ಮತ್ತು ವಾರ್ಡನ್ ಅಕ್ಕಿ ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.