ಚಿಕ್ಕಬಳ್ಳಾಪುರ: ಕಳಪೆ ಟೊಮೆಟೊ ಸಸಿಗಳನ್ನು ರೈತರಿಗೆ ನೀಡಿದ ನರ್ಸರಿ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ.

ಗುಡಿಬಂಡೆ ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ ರೈತ ಆದಿನಾರಾಯಣರೆಡ್ಡಿ ಟೊಮೆಟೊ ಬೆಳೆಯುವ ಸಲುವಾಗಿ ನರ್ಸರಿ ಮಾಲೀಕ ಚಲಪತಿ ಅವರಿಂದ 8 ಸಾವಿರ ಟೊಮೆಟೊ ಸಸಿಗಳನ್ನು ಖರೀದಿಸಿದ್ದರು.

ನಾಟಿ ಮಾಡಿದ ನಂತರ ನಿಗದಿತ ಬೇಸಾಯ ಕ್ರಮಗಳನ್ನು ಅನುಸರಿಸಿದರು. ಆದರೂ ಸಣ್ಣ ಗಾತ್ರದ ಟೊಮೆಟೊ ಫಸಲು ಬಂದಿತು. ಇದರಿಂದ ನಷ್ಟವಾಗಿದೆ. ನ್ಯಾಯದೊರಕಿಸಿಕೊಡಿ ಎಂದು ಆದಿನಾರಾಯಣರೆಡ್ಡಿ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ಕುಮಾರ್ ಮತ್ತು ಸದಸ್ಯರಾದ ಎಚ್.ಜನಾರ್ದನ, ನರ್ಸರಿ ಮಾಲೀಕ ಚಲಪತಿ ಮತ್ತು ಟೊಮೆಟೊ ಬೀಜ ಸರಬರಾಜು ಮಾಡಿದ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದ್ದರು.

ವಿಚಾರಣೆ ವೇಳೆ ನರ್ಸರಿ ಮಾಲೀಕರು ಕಳಪೆ ಟೊಮೆಟೊ ಸಸಿಗಳನ್ನು ಆದಿನಾರಾಯಣರೆಡ್ಡಿ ಅವರಿಗೆ ನೀಡಿರುವುದು ದೃಢವಾಗಿದೆ. ಚಲಪತಿ ಅವರ ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರ ಸಾಬೀತಾಗಿದೆ.

ಆದಿನಾರಾಯಣರೆಡ್ಡಿ ಅವರಿಗೆ ಟೊಮೆಟೊ ಬೆಳೆಯಲ್ಲಿ ಆದ ನಷ್ಟಕ್ಕೆ ಚಲಪತಿ ₹ 1,66,871 ಮತ್ತು ಇದಕ್ಕೆ 2024ರ ಜೂ.18ರಿಂದ ಶೇ 8ರ ಬಡ್ಡಿ ಮತ್ತು ದಾವೆ ವೆಚ್ಚ ₹ 8 ಸಾವಿರ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.