ಚಿಂತಾಮಣಿ: ತಾಲ್ಲೂಕಿನ ಬಟ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನಮಲೆಬೆಟ್ಟದ ಸುತ್ತಮುತ್ತ 40 ಅಪ್ರಕಟಿತ ಪ್ರಾಗೈತಿಹಾಸಿಕ ತಾಣಗಳನ್ನು ಸಂಶೋಧಕ ಎ.ಪವನ್ ಮೌರ್ಯ ಚಕ್ರವರ್ತಿ ತಂಡ ಪತ್ತೆ ಹಚ್ಚಿದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸಿದ್ದನಮಲೆಬೆಟ್ಟವನ್ನು ಕೊನಕುಂಟ್ಲು ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಗ್ರಾಮವಾರು ಸಮೀಕ್ಷೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಅಪ್ರಕಟಿತ ಪ್ರಾಗೈತಿಹಾಸಿಕ ತಾಣಗಳು ಪತ್ತೆಯಾಗಿವೆ. ಸಿದ್ದನಮಲೆಬೆಟ್ಟ ಅಥವಾ ಕೊನಕುಂಟ್ಲು ಪ್ರದೇಶವು ಪ್ರಾಚೀನ ರಾಜಕೀಯ ಇತಿಹಾಸದಲ್ಲಿ ಬಹಳ ಪ್ರಸಿದ್ಧ ಸ್ಥಳವಾಗಿತ್ತು.

ಇದು ಕೊಯಿಕುರೆ ನಾಡಿನ ರಾಜಧಾನಿಯಾಗಿತ್ತು. ಬೆಟ್ಟದ ಮೇಲೆ ಕೋಟೆಯ ಅವಶೇಷಗಳಿವೆ. ಬೆಟ್ಟದ ಬಳಿ ಎರಡು ನೈಸರ್ಗಿಕ ಗುಹೆಗಳಿವೆ. ಚೋಳರ ಕಾಲದಲ್ಲಿ ಅವುಗಳನ್ನು ಶಿವ ದೇವಾಲಯಗಳಾಗಿ ಪರಿವರ್ತಿಸಲಾಯಿತು. ಸಿದ್ದರ ಗವಿಯ ಉತ್ತರಕ್ಕೆ ಬೃಹತ್ ಬಂಡೆ ಇದೆ. ಇದು ಸುಮಾರು 30 ಅಡಿ ಎತ್ತರ, 30 ಅಡಿ ಉದ್ದ ಮತ್ತು 120 ಅಡಿಗಳಿಗಿಂತ ಹೆಚ್ಚು ಸುತ್ತಳತೆ ಹೊಂದಿದೆ.

ಇಲ್ಲಿ 20ಕ್ಕೂ ಹೆಚ್ಚು ನವಶಿಲಾಯುಗದ (ತಾಮ್ರ ಯುಗ) ಗೂಳಿಗಳು, ನವಿಲುಗಳು, ಆನೆಗಳು, ಕಾಡುಹಂದಿಗಳು ಮತ್ತು ಮನುಷ್ಯರ ವರ್ಣಚಿತ್ರಗಳು ಕಂಡುಬಂದಿವೆ. ಆ ಕಾಲದ ಮನುಷ್ಯ ಪ್ರಾಣಿಗಳನ್ನು ಪಳಗಿಸಿ ಪಶುಪಾಲನೆ ಶುರು ಮಾಡಿದ್ದ ಎಂದು ತಿಳಿದುಬರುತ್ತದೆ. ಕೆಲವು ಗೂಳಿಗಳನ್ನು ಅವುಗಳ ಶಿಶ್ನಗಳೊಂದಿಗೆ ತೋರಿಸಲಾಗಿದೆ. ಈ ರೀತಿಯ ವರ್ಣಚಿತ್ರಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಂಡುಬಂದಿದೆ ಎಂದು ಸಂಶೋಧಕ ಎ.ಪವನ್ ಮೌರ್ಯ ಚಕ್ರವರ್ತಿ ಅಭಿಪ್ರಾಯಪಡುತ್ತಾರೆ.

ಕೆಲವೆಡೆ ಬಂಡೆ ಮೇಲೆ ಕಟ್ಟು ಚಿತ್ರಗಳು ಸಿಕ್ಕಿವೆ. ಸಿದ್ದನಮಲೆ ಬೆಟ್ಟದಲ್ಲಿ ಕಂಡುಬರುವ ಈ ವರ್ಣಚಿತ್ರಗಳು ಮೊದಲ ಬಾರಿಗೆ ಕಂಡುಬಂದಿವೆ ಎಂದು ತೀರ್ಮಾನಿಸಬಹುದು. ಅದೇ ಪರಿಸರದಲ್ಲಿ ಮಧ್ಯ ಶಿಲಾಯುಗ ಮತ್ತು ನವಶಿಲಾಯುಗದ ಸಣ್ಣ ಪ್ರಮಾಣದ ಕಲ್ಲಿನ ಉಪಕರಣಗಳು ಕಂಡುಬಂದಿವೆ. ಬಂಡೆಯ ಇಳಿಜಾರಿನಲ್ಲಿ 100 ಮೀಟರ್ ಮುಂದೆ ಹೋದರೆ, ಬೃಹತ್ ಶಿಲಾಯುಗದ ಅವಧಿಯ ದೊಡ್ಡ ನೆಲಕೋಣೆ ಸಮಾಧಿಗಳನ್ನು ಕಾಣಬಹುದು ಎಂದು ಹೇಳಿದ್ದಾರೆ.

ಈ ಪರಿಸರದಲ್ಲಿ ವ್ಯಾಪಕವಾದ ಕಬ್ಬಿಣದ ಕಿಟ್ಟಗಳು, ಶಿಲಾಯುಗದ ಕೆಂಪು ಮತ್ತು ಕಪ್ಪು ಮಡಿಕೆಗಳ ಚೂರುಗಳು ಕಂಡುಬಂದಿವೆ. ಐತಿಹಾಸಿಕ ಕಾಲದಲ್ಲಿ ಜನರು ಉಪಯೋಗಿಸುತ್ತಿದ್ದ ಮಡಿಕೆ ಅವಶೇಷಗಳು ಎಂದು ಸಂಶೋಧಕರು ಹೇಳುತ್ತಾರೆ.

ಈ ಸಂಶೋಧನೆಯು ಪ್ರಾಗೈತಿಹಾಸಿಕ ಇತಿಹಾಸಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ. ಇದು ಪ್ರಾಗೈತಿಹಾಸಿಕ ಇತಿಹಾಸವನ್ನು ಶ್ರೀಮಂತಗೊಳಿಸಿದೆ ಎಂದು ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.