ಚಿಂತಾಮಣಿ: ನಗರದ ವಿನೋಬಾ ಕಾಲೊನಿಯ ನಿವಾಸಿ ಸಂಪೂರ್ಣ ಎಂಬುವರು ನಗರದ ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಪಡೆದು ಇದೀಗ ಆರ್ಥಿಕ ಸ್ವಾವಲಂಬನೆಯತ್ತ ದಾಪುಗಾಲು ಇಟ್ಟಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ್ದ ಸಂಪೂರ್ಣ ಅವರು ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿದ್ದರು. ಮನೆಯಲ್ಲಿ

ಸಂಪೂಣರ್ಾ ಬಡ ಕುಟುಂಬದಲ್ಲಿ ಜನಿಸಿ, ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡ ಮಹಿಳೆ. ಮನೆಯಲ್ಲಿ ಮಕ್ಕಳ, ಹಿರಿಯರ ಆಸೆ–ಆಕಾಂಕ್ಷೆಗಳನ್ನು ಈಡೇರಿಸುವ ಹೊಣೆಗಾರಿಕೆ ಅವರ ಮೇಲಿತ್ತು. ಬದುಕು ಸಾಗಿಸಲು ಅವರು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಕುಟುಂಬದ ನಿರ್ವಹಣೆಗೆ ಅದು ಸಾಕಾಗಲಿಲ್ಲ. ಸಂಕಷ್ಟದ ಸಮಯದಲ್ಲಿ ಅವರು ಅನ್ಯ ಕೆಲಸದತ್ತ ಮುಖ ಮಾಡಿದರು.

ಈ ಮಧ್ಯೆ, ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ಟೊಮೆಟೊ ಬೆಳೆದು, ಬೆಲೆ ಕುಸಿತವಾದಾಗ ಟೊಮೆಟೊವನ್ನು ರಸ್ತೆಗೆ ಸುರಿದದ್ದನ್ನು ಕಣ್ಣಾರೆ ನೋಡಿದ್ದರು. ಹೀಗಾಗಿ, ಟೊಮೆಟೊದಿಂದಲೇ ಲಾಭ ಗಳಿಸುವ ಉದ್ಯಮ ಮಾಡುವ ಚಿಂತನೆ ಮಾಡಿದ್ದರು.

ಅವರು ಸ್ವಸಹಾಯ ಸಂಘದ ಸಕ್ರಿಯ ಸದಸ್ಯೆಯಾಗಿದ್ದು, ಪ್ರತಿನಿತ್ಯ ತಮ್ಮ ಬದುಕಿಗೆ ಹೊಸ ದಾರಿ ಹುಡುಕುತ್ತಿದ್ದರು. ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರ ಆಯೋಜಿಸಿದ ಮೌಲ್ಯವರ್ಧನೆ ತರಬೇತಿಯಲ್ಲಿ ಪಾಲ್ಗೊಂಡರು. ಟೊಮೆಟೊ ಆಧಾರಿತ ಉತ್ಪನ್ನಗಳ ತಯಾರಿಕೆ, ಸಂರಕ್ಷಣೆ ವಿಧಾನ, ಪ್ಯಾಕಿಂಗ್ ತಂತ್ರ ಮತ್ತು ಮಾರ್ಕೆಟಿಂಗ್ ವಿಧಾನಗಳನ್ನು ಕಲಿತರು.

ಇದೀಗ ಟೊಮೆಟೊ ಕೆಚಪ್ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿರುವುದಷ್ಟೇ ಅಲ್ಲದೆ, ಕುಟುಂಬ ನಿರ್ವಹಣೆಯೂ ಸುಲಭವಾಗಿದೆ ಎನ್ನುತ್ತಾರೆ ಸಂಪೂರ್ಣ.

ಸಂಪೂರ್ಣ ಅವರ ಶ್ರಮ, ಚಾತುರ್ಯ ಮತ್ತು ನಿರ್ಧಾರ ಹಲವರ ಬದುಕಿಗೆ ಮಾರ್ಗವಾಗಿದೆ. ಅವರು ತೋರಿಸಿದ ದಾರಿಯು ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ, ಲಾಭದಾಯಕವಾಗಿ ಬದಲಾಯಿಸುವುದು ಸಾಧ್ಯ ಎಂಬುದನ್ನು ಖಚಿತಪಡಿಸುತ್ತದೆ. ಇದಕ್ಕಾಗಿ ಕೃಷಿ ವಿಜ್ಞಾನ ಕೇಂದ್ರವು ಅವರನ್ನು ಮಹಿಳಾ ಕೃಷಿ ಮಿತ್ರೆ ಎಂದು ಗೌರವಿಸಿದೆ. ಸಂಪೂರ್ಣ ಅವರು ಇದೀಗ ತಮ್ಮ ಅನುಭವವನ್ನು ವಿವಿಧ ಗ್ರಾಮಗಳ ಸ್ವಸಹಾಯ ಸಂಘಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರೈತರು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆಯಿಂದ ಬಹುಮೂಲ್ಯ ರೂಪ ಸಿಗಲಿದೆ. ನಷ್ಟದ ಹತಾಶೆಯಿಂದ ಹೊರಬರಲು ಶಿಕ್ಷಣ, ತರಬೇತಿ ಮತ್ತು ವಿಜ್ಞಾನಿಗಳ ಸಂಪರ್ಕ ಸಹಾಯ ಮಾಡುತ್ತದೆ. ಮಹಿಳೆಯರ ಕೈಯಲ್ಲಿ ಕೃಷಿಯ ಚಿಹ್ನೆಯೂ ಸವಿನಯವಾದ ಉದ್ಯಮಶೀಲತೆಯಾಗಿ ರೂಪಾಂತರವಾಗುತ್ತದೆ ಎಂದು ಸಂಪೂರ್ಣ ಹೇಳುತ್ತಾರೆ.

‘ನಮ್ಮದು 10 ಜನರ ತಂಡವಿದೆ. ನಾವು ತಯಾರಿಸಿದ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆ, ಉತ್ಸವ, ಮೇಳ ಮತ್ತಿತ್ತರ ಕಡೆಗಳಲ್ಲಿ ಪ್ರದರ್ಶನ ಮಾಡುತ್ತೇವೆ. ಇದರಿಂದಾಗಿ ನಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರತೊಡಗಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪನ್ನವನ್ನು ತಯಾರಿಸುವುದರಿಂದ ನಷ್ಟದ ಪ್ರಶ್ನೆಯೇ ಉದ್ಭವಿಸುದಿಲ್ಲ’ ಎಂದು ಈ ಉದ್ಯಮದಲ್ಲಿ ತೊಡಗಿದ ಮಹಿಳೆಯರು ಹೇಳುತ್ತಾರೆ.

ಟೊಮೆಟೊ ಮೌಲ್ಯವರ್ಧನೆ ಬಗ್ಗೆ ನಮ್ಮಲ್ಲಿ ತರಬೇತಿ ಪಡೆದವರು ಹೊರಗೆ ಕೆಲಸಕ್ಕೆ ಹೋಗುವ ಅಗತ್ಯವೇ ಇಲ್ಲ. ಅವರೇ ಸ್ವಉದ್ಯೋಗ ಮಾಡಿಕೊಳ್ಳಬಹುದು
ಸೌಮ್ಯ ಹೀರೇಗೌಡರ್ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ

ಆರ್ಥಿಕ ಸ್ವಾವಲಂಬನೆಗೆ ದಾರಿ

ಈಗಾಗಲೇ ಟೊಮೆಟೊ ಕೆಚಪ್ ಉಪ್ಪಿನಕಾಯಿ ಕ್ರಷ್ ರೂಪದಲ್ಲಿ ಸಂಸ್ಕರಿಸಲು ಆರಂಭಿಸಿದ್ದಾರೆ. ತಮ್ಮ ಸ್ವಸಹಾಯ ಸಂಘದ ಸದಸ್ಯರ ಸಹಕಾರದಿಂದ ಸಂಪೂರ್ಣ ಅವರು ಆರೋಗ್ಯಕರ ಶುದ್ಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಅಲ್ಪ ಬಂಡವಾಳದೊಂದಿಗೆ ತಯಾರಿಸಿದ ಟೊಮೆಟೊ ಕೆಚಪ್ ಉಪ್ಪಿನಕಾಯಿ ಸೇರಿದಂತೆ ಇನ್ನಿತರ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆ ಉತ್ಸವ ಮೇಳಗಳು ಮತ್ತು ಮಹಿಳಾ ಪ್ರದರ್ಶನಗಳಲ್ಲಿ ಜನಪ್ರಿಯಗೊಂಡಿದ್ದು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಸಂಪೂರ್ಣ. ಟೊಮೆಟೊ ಮೌಲ್ಯವರ್ಧನೆಯಿಂದ ಮಾಸಿಕ ಸುಮಾರು ₹30 ಸಾವಿರ ಆದಾಯ ಬರುತ್ತಿದೆ. ಟೊಮೆಟೊ ಬೆಲೆ ಕುಸಿದಾಗ ಮೌಲ್ಯ ವರ್ಧನೆಯಿಂದ ಹೆಚ್ಚಿನ ಲಾಭ ಸಿಗುತ್ತದೆ. ₹100 ಹೂಡಿಕೆ ಮಾಡಿದರೆ ₹250 ಆದಾಯ ಪಡೆಯಬಹುದು ಎಂಬುದು ಸಂಪೂರ್ಣ ಅವರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.