ಪಾತಪಾಳ್ಯ (ಬಾಗೇಪಲ್ಲಿ): ತಾನು ಮಾಡಿದ ತೀರಿಸಲು ಸಾಲ ತೀರಿಸಲಾಗದೇ, ಸಾಲಗಾರರ ಕಾಟ ಭರಿಸಲಾಗದೇ ವ್ಯಕ್ತಿಯೊಬ್ಬರು ಕತ್ತು ಸೀಳಿಕೊಂಡು, ಹಣ ಕಳವು ಹಾಗೂ ಕೊಲೆ ಯತ್ನದ ನಾಟಕವಾಡಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ.

ಚೇಳೂರು ತಾಲ್ಲೂಕಿನ ಭೀರಂಗಿವಾಂಡ್ಲಪಲ್ಲಿ ಗ್ರಾಮದ ಮಲ್ಲಿಕಾರ್ಜುನರೆಡ್ಡಿ (25) ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ ಮಂಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅನೇಕ ಆನ್ಲೈನ್ ಆ್ಯಪ್ಗಳ ಮೂಲಕ ಸಾಲ ಮಾಡಿದ್ದಾರೆ. ಸಕಾಲಕ್ಕೆ ಸಾಲ ತೀರಿಸಿಲ್ಲ. ಸಾಲ ತೀರಿಸುವಂತೆ ಖಾಸಗಿ ಸಂಸ್ಥೆಗಳಿಂದ ಒತ್ತಡ ಹಾಕಿದ್ದರು.

ಸಾಲದ ಬಗ್ಗೆ ಮನೆಯಲ್ಲಿ ತಿಳಿಯುತ್ತದೆ ಎಂದು ಹೆದರಿ ಮನೆಯವರಿಂದ ಅನುಕಂಪ ಗಿಟ್ಟಿಸಲು ತನ್ನ ಕೊಲೆಗೆ ತಾನೇ ಯೋಜನೆ ರೂಪಿಸಿಕೊಂಡಿದ್ದಾರೆ.

‘ನಾನು ಅನೇಕರಿಗೆ ಸಾಲ ನೀಡಿದ್ದೇನೆ. ನೀಡಿದ ಸಾಲವನ್ನು ಪಡೆದು ಮನೆಗೆ ಬರುತ್ತೇನೆ ಎಂದು ಪೋಷಕರಿಗೆ ತಿಳಿಸಿ ಮನೆಯಿಂದ ಹೊರಗೆ ಬಂದಿದ್ದಾರೆ. ತಮಗೆ ಬರಬೇಕಾದ ಸಾಲದ ಹಣ ಪಡೆದು, ಬಾಗೇಪಲ್ಲಿಗೆ ವಾಪಸ್ ಆಗುವ ಮಾರ್ಗದ ರಾಚವಾರಿಪಲ್ಲಿ-ಕುರಪ್ಪಲ್ಲಿ ಬಳಿ ನಾಲ್ಕು ದುಷ್ಕರ್ಮಿಗಳು ದ್ವಿಚಕ್ರ ವಾಹನ ಅಡ್ಡಗಟ್ಟಿ ನನ್ನ ಬಳಿಇರುವ ಹಣ ಕಸಿದು ಕೊಲೆ ಮಾಡಲು ಯತ್ನಿಸಿದ್ದಾರೆ’ ಎಂದು ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದರಿಂದ ಗಾಬರಿಯಾದ ಪೋಷಕರು ಮಲ್ಲಿಕಾರ್ಜುನರೆಡ್ಡಿ ಅವರನ್ನು ಪತ್ತೆಮಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಕತ್ತಿನ ಭಾಗದಲ್ಲಿ ತೀವ್ರ ರಕ್ತಸ್ರಾವದಿಂದ ಬಳಲಿದ ಮಲ್ಲಿಕಾರ್ಜುನರೆಡ್ಡಿಗೆ ಸಾರ್ವಜನಿಕ ಆಸ್ಪತ್ರೆಯ ಐಸಿಯುನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಸಂಬಂಧ ಕುಟುಂಬ ಸದಸ್ಯರು ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಶಿವಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಪಾತಪಾಳ್ಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಸೈಯ್ಯದ್ ಅನ್ಸರ್ ಅವರು ಪ್ರಕರಣದ ಬಗ್ಗೆ ಮಲ್ಲಿಕಾರ್ಜುನರೆಡ್ಡಿ ಅವರಿಂದ ಹೇಳಿಕೆ ಪಡೆದಿದ್ದಾರೆ. ಪೊಲೀಸರು ತನಿಖೆಯಲ್ಲಿ ದರೋಡೆ ನಡೆದಿಲ್ಲ. ಹಣ ಯಾರೂ ದೋಚಿಲ್ಲ. ಸಾಲಗಾರರಿಂದ ಪಾರು ಆಗಲು ಈ ಕೃತ್ಯ ಎಸಗಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.