ಗೌರಿಬಿದನೂರು: ‘ಸರ್ ಇದು ಯಾವ ರಸ್ತೆ. ಮುಂದೆ ಹೋದರೆ ಎಷ್ಟನೇ ಕ್ರಾಸ್’–ಹೀಗೆ ಕೇಳಿದವರು ಮಧುಗಿರಿಯ ರಾಮಲಿಂಗಪ್ಪ. ಹೀಗೆ ರಾಮಲಿಂಗಪ್ಪ ಅವರಂತಹ ಬಹಳಷ್ಟು ಹೊರಗಿನ ಜನರಿಗೆ ಗೌರಿಬಿದನೂರಿನ ಅಡ್ಡರಸ್ತೆಗಳು, ಬಡಾವಣೆಯ ರಸ್ತೆಗಳು ಹುಡುಕಿದರೂ ಕಾಣಸಿಗುವುದಿಲ್ಲ!

ನಗರದ ಮುಖ್ಯರಸ್ತೆ ಅಥವಾ ಒಳಭಾಗದ ರಸ್ತೆ, ವೃತ್ತಗಳಲ್ಲಿ ಮಾರ್ಗಸೂಚಿ ಫಲಕಗಳಿಲ್ಲ. ಅಡ್ಡರಸ್ತೆ ಹೆಸರಿಸುವ ನಾಮಫಲಕ ಅಳವಡಿಸಿಲ್ಲ. ಸ್ಥಳೀಯರು ಹಾಗೂ ಹೊರಗಡೆಯಿಂದ ಬಂದವರಿಗೆ ವಿಳಾಸ ಕಷ್ಟವಾಗಿದೆ. ಮುಖ್ಯರಸ್ತೆ, ಅಡ್ಡರಸ್ತೆ ಗೊತ್ತಾಗದೆ ಜನರು ಪರದಾಡುವಂತಾಗಿದೆ.

ಮಾರ್ಗಸೂಚಿ ಫಲಕಗಳು ವಿಳಾಸ ಹುಡುಕಿಕೊಂಡು ಬರುವವರಿಗೆ ಬೇಕಾದ ವಿಳಾಸ ಪತ್ತೆಹಚ್ಚಲು ಸಹಕಾರಿ. ಆದರೆ ನಗರಕ್ಕೆ ಹೊರ ಭಾಗದಿಂದ ಆಗಮಿಸುವ ಹೊಸ ಪ್ರಯಾಣಿಕರು ವಾರ್ಡ್ಗಳಿಗೆ ಹೋಗಲು ಸೂಕ್ತ ಮಾರ್ಗಸೂಚಿಗಳಿಲ್ಲದೆ ಹೈರಾಣಾಗುತ್ತಿದ್ದಾರೆ.

ಜನಸಂಖ್ಯೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ನಗರವಾಗಿದೆ. ನಗರದ ನಾಲ್ಕು ಮೂಲೆಯಲ್ಲಿ, ಎಲ್ಲಿ ನೋಡಿದರು ಹೊಸ ಲೇಔಟ್ ತಲೆ ಎತ್ತುತ್ತಿವೆ. ಹೊಸದಾಗಿ ನಿರ್ಮಾಣವಾದ ಲೇಔಟ್ಗಳಲ್ಲಿ ಮಾರ್ಗಸೂಚಿ ಫಲಕಗಳನ್ನು ಖಾಸಗಿ ಲೇಔಟ್ ಮಾಲೀಕರು ಅಳವಡಿಸುತ್ತಿದ್ದಾರೆ.

ಆದರೆ ಹಳೆಯ ಬಡಾವಣೆಗಳಲ್ಲಿ ನಗರಸಭೆ ಅಧಿಕಾರಿಗಳು ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಕೆಲವೆಡೆ ಅಳವಡಿಸಿದ್ದರೂ ಸುಣ್ಣ ಬಣ್ಣ ಕಳೆದುಕೊಂಡು ಹಾಳಾಗಿವೆ. ಇದರಿಂದ ನಗರಕ್ಕೆ ಹೊಸದಾಗಿ ಪ್ರವೇಶಿಸುವವರಿಗೆ ದಿಕ್ಕು ತೋಚದೆ, ವಿಳಾಸಕ್ಕಾಗಿ ಅಂಗಡಿ ಮಾಲೀಕರನ್ನೋ, ದಾರಿಹೋಕರನ್ನೋ, ಆಟೊ ಚಾಲಕರನ್ನೋ ಆಶ್ರಯಿಸಿ ಮಾರ್ಗದರ್ಶನ ಪಡೆಯುವಂತಾಗಿದೆ.

ಹೊಸ ಪ್ರಯಾಣಿಕರು ನಗರಕ್ಕೆ ಆಗಮಿಸಿದಾಗ ತಮ್ಮ ವಿಳಾಸಕ್ಕೆ ಹೋಗಲು ವಾರ್ಡ್ ಪ್ರವೇಶ ದ್ವಾರಗಳಲ್ಲಾಗಲಿ, ಸಣ್ಣ ಸಣ್ಣ ಗಲ್ಲಿಗಳ ಮುಖ್ಯ ರಸ್ತೆಗಳಲ್ಲಾಗಲಿ ಹಾಗೂ ಸೂಕ್ತ ಸ್ಥಳಗಳಲ್ಲಿ ಫಲಕಗಳಿಲ್ಲ. ಆಟೊ ಚಾಲಕರಿಗೂ ಇದು ಅನುಕೂಲ ಎನ್ನುವಂತಾಗಿದೆ. ವಿಳಾಸದ ಕೇಳಿದರೆ ದುಪ್ಪಟ್ಟು ಹಣ ಪಡೆದು ಸುತ್ತಾಡಿಸಿ, ವಿಳಾಸಕ್ಕೆ ಬಿಡುತ್ತಾರೆ.

ನಗರದಲ್ಲಿರುವ 31 ವಾರ್ಡ್ಗಳಲ್ಲಿ ಬಹುತೇಕ ಹೊಸ ಲೇಔಟ್ಗಳು ನಿರ್ಮಾಣ ವಾಗಿರುವುದರಿಂದ, ಹಳೆಯ ಬಡಾವಣೆಗಳನ್ನು ಗುರುತಿಸುವುದೇ ಕಷ್ಟ.

ಕರೇಕಲ್ಲಹಳ್ಳಿ, ವೀರಂಡಹಳ್ಳಿ ಮಾದನಹಳ್ಳಿ, ಕಲ್ಲೂಡಿ, ಹಿರೇಬಿದನೂರು ಸೇರಿದಂತೆ ನಗರಸಭೆ ವ್ಯಾಪ್ತಿಗೆ ಸೇರಿದ ಹಳೆಯ ವಾರ್ಡ್ಗಳಲ್ಲಿ ರಸ್ತೆಗಳು ಕಿರಿದಾಗಿವೆ. ತಿರುವುಗಳಿಂದ ಕೂಡಿವೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಒಳ ರಸ್ತೆ, ವೃತ್ತಗಳಲ್ಲಿ ಹೆಸರನ್ನು ಸೂಚಿಸುವ ಫಲಕಗಳಿಲ್ಲದೆ ಒಮ್ಮೆ ಹೊದ ಕಡೆ ಮತ್ತೊಮ್ಮೆ ಹೋಗಲು ಸಹಜವಾಗಿ ಗೊಂದಲ ಮೂಡುತ್ತದೆ.

ಇಂತಹ ರಸ್ತೆಗಳಲ್ಲಿ ವಿಳಾಸ ಪತ್ತೆ ಹಚ್ಚುವುದು ಕಷ್ಟದ ಕೆಲಸವೇ ಸರಿ. ಕೆಲವು ವಾರ್ಡ್ಗಳಲ್ಲಿ ಮಾರ್ಗದ ಫಲಕಗಳಿದ್ದರು ಸಹ ಅಕ್ಷರಗಳು ಬಣ್ಣ ಕಳೆದುಕೊಂಡು ಅಳಿಸಿವೆ. ಇನ್ನು ಬಹುತೇಕ ಕಡೆ ನಾಮಫಲಕಗಳಿದ್ದರೂ ಬೇಕಾಬಿಟ್ಟಿಯಾಗಿ ಪೋಸ್ಟರ್, ಬ್ಯಾನರ್, ಬಿತ್ತಿ ಪತ್ರಗಳನ್ನು ಅಂಟಿಸಲಾಗಿದೆ. ಕೆಲವೆಡೆ ಕಟೌಟ್ಗಳನ್ನು ನಾಮಫಲಕಕ್ಕೆ ಅಡ್ಡಲಾಗಿ ಕಟ್ಟಲಾಗಿದೆ ಸೂಚನಾ ಫಲಕ ಮರೆಯಾಗಿವೆ.

ನಗರವು ವೇಗವಾಗಿ ಬೆಳೆಯುತ್ತಿದೆ ಅಭಿವೃದ್ಧಿ ಮತ್ತು ಮುಂದುವರಿದ ನಗರ ಎಂದು ಹೆಸರಿಸಬೇಕಾರೆ ಮಾರ್ಗಸೂಚಿ ಫಲಕ ಅಗತ್ಯ. ಮಾರ್ಗಸೂಚಿ ಫಲಕಗಳಿದ್ದರೆ ನಗರದ ಸೌಂದರ್ಯವೂ ವೃದ್ಧಿಸುತ್ತದೆ. ನಗರಸಭೆ ಆಡಳಿತ ವೈಖರಿಗೂ ಸಾಕ್ಷಿಯಾಗುತ್ತದೆ. ನಗರದ ಎಲ್ಲಾ ವಾರ್ಡ್ಗಳಲ್ಲಿ, ಮತ್ತು ಸಣ್ಣ ಸಣ್ಣ ರಸ್ತೆಗಳಿಗೆ ನಾಮಫಲಕಗಳನ್ನು ಅಳವಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ವಾರ್ಡ್ನಲ್ಲಿಯೂ ಅಳವಡಿಸಿ

ನಗರಕ್ಕೆ ವಿಳಾಸ ಹುಡುಕಿಕೊಂಡು ಬರುವ ಸಾರ್ವಜನಿಕರು ದಾರಿ ತಪ್ಪದೆ ವಿಳಾಸ ಹುಡುಕಲು ನಗರದ ಪ್ರತಿ ವಾರ್ಡ್ಗಳಲ್ಲಿ ಮಾರ್ಗ ಸೂಚಕ ಫಲಕಗಳನ್ನು ಅಳವಡಿಸಿ ಮಾರ್ಗ ಸೂಚಕ ಹೆಸರುಗಳನ್ನು ಬರೆಯಬೇಕು. ಮಂಜುನಾಥ್ 1ನೇ ವಾರ್ಡ್ ನಿವಾಸಿ ಗೌರಿಬಿದನೂರು ನಗರಸಭೆ ಕ್ರಮಕೈಗೊಳ್ಳಬೇಕು ನಗರಸಭೆ ಅಧಿಕಾರಿಗಳು ಎಲ್ಲ ವಾರ್ಡ್ಗಳಲ್ಲಿ ಸಮರ್ಪಕವಾಗಿ ಫಲಕ ಅಳವಡಿಸಿದರೆ ನಗರಕ್ಕೆ ಬರುವ ಹೊಸಬರಿಗೆ ಮತ್ತು ಆಟೊ ಚಾಲಕರಿಗೆ ಅನುಕೂಲವಾಗಲಿದೆ.

ಈ ಬಗ್ಗೆ ನಗರಸಭೆ ತಕ್ಷಣ ಕ್ರಮಕೈಗೊಳ್ಳಬೇಕು. ಸಾಗರ್ ಆಟೊ ಚಾಲಕ ಗೌರಿಬಿದನೂರು ಭಿತ್ತಿಪತ್ರ ಕರಪತ್ರ ಅಂಟಿಸದಂತೆ ತಡೆಯಿರಿ ನಗರಸಭೆಯವರು ಮಾರ್ಗಸೂಚಿ ನಾಮಫಲಕಗಳ ಮೇಲೆ ಜಾಹೀರಾತುದಾರರು ಫಲಕಗಳಿಗೆ ಭಿತ್ತಿಪತ್ರ ಕರಪತ್ರಗಳನ್ನು ಅಂಟಿಸದಂತೆ ಸೂತ್ತೋಲೆ ಹೊರಡಿಸಬೇಕು. ಬಹುತೇಕ ಕಡೆ ಫಲಕಗಳ ಮೇಲೆ ಖಾಸಗಿ ಸಂಸ್ಥೆಗಳ ಬಿತ್ತಿ ಪತ್ರಗಳೇ ಕಾಣಿಸುತ್ತವೆ ವಾರ್ಡ್ ಹೆಸರಾಗಲಿ ರಸ್ತೆಯ ಹೆಸರಾಗಲಿ ಕಾಣಿಸುವುದಿಲ್ಲ. ಸ್ವಾತಿ ಮಾದನಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.