ಗೌರಿಬಿದನೂರು: ‘ನಗರಸಭೆ ತಾಂತ್ರಿಕ ವಿಭಾಗದ ಎಇ ದಾನಿಯಾ ಫೈರೋಜ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ನಗರಸಭೆ ಸದಸ್ಯರು ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆರೋಪಗಳ ಸುರಿಮಳೆಗೈದರು.

8ನೇ ವಾರ್ಡ್ ಸದಸ್ಯೆ ಮಂಜುಳಾ ಮಾತನಾಡಿ, ‘ಅಧಿಕಾರಿಗಳು ಮಾಡಿರುವ ತಪ್ಪಿಗೆ ಜನರು ನನ್ನನ್ನು ಕೇಳುತ್ತಿದ್ದಾರೆ. ವಾರ್ಡ್ನಲ್ಲಿ ಎರಡು ಬೋರ್ವೆಲ್ ಇದೆ. 400 ಮನೆಗೆ ನೀರು ಸರಬರಾಜು ಆಗುತ್ತಿದೆ. ಯಾವುದೇ ಅನುಮತಿ ಇಲ್ಲದೆ ಖಾಸಗಿ ಜಾಗಕ್ಕೆ ಎಇ ದಾನಿಯಾ ಅವರು ಅನುಮತಿ ನೀಡಿದ್ದಾರೆ. ಈಗಾಗಲೇ ಇರುವ ಬೋರ್ವೆಲ್ 600 ಮೀಟರ್ ದೂರದಲ್ಲಿದೆ ಎಂದು ಎನ್ಒಸಿಯಲ್ಲಿ ತೋರಿಸಿದ್ದಾರೆ’ ಎಂದರು.

‘ಆದರೆ ಅದು 120 ಮೀಟರ್ ಅಂತರದಲ್ಲಿ ಇದೆ. ₹2.46 ಲಕ್ಷದ ರಸ್ತೆ ಕಾಮಗಾರಿಯನ್ನು 30 ಮೀಟರ್ ನಿರ್ಮಾಣ ಮಾಡಿ 100 ಮೀಟರ್ ಎಂದು ಹೇಳುತ್ತಿದ್ದಾರೆ’ ಎಂದು ಶಾಸಕರ ಗಮನಕ್ಕೆ ತಂದರು.

ಈ ಬಗ್ಗೆ ದನಿಯಾ ಅವರನ್ನು ಕೇಳಿದಾಗ, ‘ಇಂತಹ ಸಣ್ಣ ವಿಷಯಗಳ ಬಗ್ಗೆ ಪ್ರಸ್ತಾಪ ಬೇಡ’ ಎಂದರು.

ಇದಕ್ಕೆ ಗರಂ ಆದ ಶಾಸಕ ಪುಟ್ಟಸ್ವಾಮಿ ಗೌಡ, ‘ಇದು ಸಣ್ಣ ವಿಚಾರ ಅಲ್ಲ. ಯಾವುದೇ ಅಧಿಕಾರಿ ತಪ್ಪು ಮಾಡಿದರೆ ಅವರನ್ನು ಅಮಾನತು ಮಾಡಲು ಕ್ರಮಕೈಗೊಳ್ಳಿ’ ಎಂದು ಪೌರಾಯುಕ್ತ ರಮೇಶ್ ಅವರಿಗೆ ಸೂಚನೆ ನೀಡಿದರು.

ನಾಮನಿರ್ದೇಶತ ಸದಸ್ಯ ಚಂದ್ರಮೋಹನ್ ಮಾತನಾಡಿ, ‘ನಗರಸಭೆಯ ತಾಂತ್ರಿಕ ವಿಭಾಗದಲ್ಲಿ ಭ್ರಷ್ಟಾಚಾರ ನಡೆದಿದೆ. ಇಲ್ಲಿ ಕೆಲಸ ನಿರ್ವಹಿಸುವ ದಾನಿಯಾ ಫೈರೋಜ್ ಎಂಬುವವರು, ಎಇಇ, ಎಇ ಯಾರದೇ ಅನುಮತಿ ಕೇಳದೆ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ. ನಗರಸಭೆಗೆ 15 ದಿನದ ಹಿಂದೆ ಬಂದಿರುವ ಕಿರಿಯ ಸಹಾಯಕ ಎಂಜಿನಿಯರ್ ನರಸೇಗೌಡ ಅವರಿಗೆ ಈವರೆಗೆ ಯಾವುದೇ ಕಡತ ಕಳಿಸಿಲ್ಲ. ಇವರೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾಮಗಾರಿ ನಡೆದ ಯಾವುದೇ ಸ್ಥಳ ವೀಕ್ಷಣೆ ಮಾಡದೇ ಕಚೇರಿಯಲ್ಲೇ ಕಡತ ವಿಲೇವಾರಿ ಮಾಡುತ್ತಾರೆ. ಕೊಳವೆಬಾವಿ ಕೊರೆಸುವ ವಿಷಯದಲ್ಲಿ ಇವರಿಂದ ನಗರಸಭೆ ಸದಸ್ಯರು ನೊಂದಿದ್ದಾರೆ’ ಎಂದು ಆರೋಪಿಸಿದರು.

ಗ್ಯಾರಂಟಿಗಳ ನಡುವೆ ಶಾಸಕರು ನಗರಸಭೆ ವಾರ್ಡ್ಗಳ ರಸ್ತೆ, ಚರಂಡಿ ನೀರಿನ ಪೈಪ್ಲೈನ್, ಇತರೆ ಅಭಿವೃದ್ಧಿಗಳಿಗೆ ₹8 ಕೋಟಿ ತಂದಿದ್ದು ಕೇವಲ ಶೇ 40ರಷ್ಟು ಕಾಮಗಾರಿ ಆಗಿದೆ. ಇನ್ನು ಕೆಲವು ಸದಸ್ಯರ ವಾರ್ಡ್ಗಳಿಗೆ ಕೆಲಸವೇ ನೀಡಿಲ್ಲ ಎಂದು ಎಇ ದಾನಿಯ ಫೈರೋಜ್ ವಿರುದ್ಧ ಸದಸ್ಯರು ಆರೋಪಿಸಿದರು.

ಮಾರ್ಕೆಟ್ ಮೋಹನ್ ಮಾತನಾಡಿ, ‘ನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ವಹಣೆ ಮಾಡದೆ ಹಣ ಪೋಲು ಮಾಡಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಗುಣಮಟ್ಟ ಪರಿಶೀಲನೆ ಮಾಡಬೇಕು. ಕುಡಿಯುವ ನೀರಿನಿಂದ ಜನರ ಆರೋಗ್ಯಕ್ಕೆ ಏನಾದರು ಆದರೆ ಯಾರು ಹೊಣೆ?. ಹದಿನೈದು ದಿನಗಳಿಗೊಮ್ಮೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲನೆ ಮಾಡಬೇಕು’ ಎಂದು ತಿಳಿಸಿದರು.

ಶಾಸಕ ಪುಟ್ಟಸ್ವಾಮಿಗೌಡ ಮಾತನಾಡಿ, ‘₹8 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸ ನಡೆಯುತ್ತದೆ. ಕೆಲವೇ ದಿನಗಳಲ್ಲಿ ₹6 ಕೋಟಿ ಅನುದಾನ ತಂದು ಇನ್ನಷ್ಟು ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸಗಳಿಗೆ ಹಾಕಲು ತೀರ್ಮಾನಿಸಿದ್ದೇನೆ. ನಗರ ಮತ್ತು ತಾಲ್ಲೂಕಿನ ಸರ್ವತೋಮುಖ ಮಾಡಲಾಗುವುದು’ ಎಂದರು.

ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ, ಉಪಾಧ್ಯಕ್ಷ ಫಜ್ಲುಳ್ಳ ಫೀರ್, ಪೌರಾಯುಕ್ತ ಕೆ.ಜಿ ರಮೇಶ್, ನಗರಸಭೆ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.