ಸೇತುವೆ ಕುಸಿತದಿಂದಾಗಿ ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ತೆರಳುವ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ. ದ್ವಿಚಕ್ರ ವಾಹನ ಸವಾರರು ಭಕ್ತರಹಳ್ಳಿ-ಗಿಡಗಾನಹಳ್ಳಿ ಮಾರ್ಗ ಬಳಸಿಕೊಂಡು ಸಂಚರಿಸುತ್ತಿದ್ದಾರೆ. ಬೃಹತ್ ವಾಹನಗಳು ತೊಂಡೇಬಾವಿ-ಮಂಚೇನಹಳ್ಳಿ ಮಾರ್ಗದ ಮೂಲಕ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಕಡೆಗೆ ಸಂಚರಿಸುತ್ತಿವೆ.