ಚೇಳೂರು: ಅಧಿಕಾರಿಗಳು ಸ್ಥಳೀಯವಾಗಿ ಲಭ್ಯವಾಗಬೇಕು. ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂಬ ಮಹತ್ವದ ಉದ್ದೇಶದೊಂದಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ವಾಸಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಹೀಗಿದ್ದರೂ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿ ಕೇಂದ್ರಗಳಲ್ಲಿ ವಾಸಿಸುತ್ತಿಲ್ಲ.

ಚೇಳೂರು ತಾಲ್ಲೂಕಿನಲ್ಲಿ ನಾರೇಮದ್ದೇಪಲ್ಲಿ, ಸೋಮನಾಥಪುರ, ರಾಚ್ಚೇರುವು, ಚಾಕವೇಲು, ಪುಲಿಗಲ್, ನಲ್ಲಗುಟ್ಲಪಲ್ಲಿ, ಪೋಲನಾಯಕನಹಳ್ಳಿ, ಬುರುಡಗುಂಟೆ, )ಏನಿಗದಲೆ, ಚಿಲಕಲನೆರ್ಪು, ಚೇಳೂರು ಮತ್ತು ಪಾಳ್ಯಕೆರೆ ಗ್ರಾಮ ಪಂಚಾಯಿತಿ ಕೇಂದ್ರಗಳಾಗಿವೆ.

ತಾಲ್ಲೂಕಿನ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಅಧಿಕಾರಿಗಳು ತಾವು ಕೆಲಸ ಮಾಡುವ ಕೇಂದ್ರಸ್ಥಾನ ವ್ಯಾಪ್ತಿಯಲ್ಲಿ ವಾಸಿಸುತ್ತಿಲ್ಲ. ಬದಲಾಗಿ ಪಟ್ಟಣಗಳಿಂದ ಮತ್ತು ಸ್ವಗ್ರಾಮಗಳಿಂದ ಓಡಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಕೆಲಸಗಳಿಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಾಸಿಸುವ ಪಟ್ಟಣ ಅಥವಾ ನಗರಗಳಿಗೆ ಅಲೆದಾಡುವಂತ ದುಸ್ಥಿತಿ ಇದೆ.

ಗ್ರಾಮ ಪಂಚಾಯಿತಿಗಳಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಸಾರ್ವಜನಿಕರು ವಾರಗಟ್ಟಲೆ ಅಧಿಕಾರಿಗಳ ದರ್ಶನಕ್ಕೆ ಕಾಯಬೇಕಾಗಿದೆ. ಸಹಜವಾಗಿ ಈ ಕಾರಣದಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಸಕಾಲಕ್ಕೆ ಆಗುತ್ತಿಲ್ಲ ಎನ್ನುವ ಆರೋಪಗಳಿವೆ.

ಹಲವು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಅಧಿಕಾರಿಗಳು ನಿಗದಿತ ಸಮಯಕ್ಕಿಂತ ಬೇಗನೆ ಮನೆಗೆ ಹೊರಡುವುದು ಹಾಗೂ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು ಅಪರೂಪವಾಗಿದೆ.

ಹಲವು ಪಿಡಿಒಗಳು ಎರಡೆರಡು ಗ್ರಾಮ ಪಂಚಾಯತಿ ಅಧಿಕಾರ ಹೊಂದಿದ್ದಾರೆ. ಪಟ್ಟಣಗಳಿಗೆ ಕಚೇರಿ ಕೆಲಸದ ನಿಮಿತ್ತ ಹೋದವರು ಮತ್ತೆ ಗ್ರಾಮ ಪಂಚಾಯತಿಗೆ ಬರುವುದೇ ಇಲ್ಲ. ಇದರಿಂದ ಸಾರ್ವಜನಿಕರು ಕೆಲಸಗಳಿಗಾಗಿ ವಾರ ಗಟ್ಟಲೆ ಕಾದರೂ ಅಧಿಕಾರಿಗಳನ್ನು ಕಾಣುವುದು ಅಪರೂಪ ಎನ್ನುವುದು ಸಾರ್ವಜನಿಕರ ಆರೋಪ.

ಮೇಲಧಿಕಾರಿಗಳು ಕಟ್ಟುನಿಟ್ಟಾಗಿಲ್ಲದ ಕಾರಣ ಪಿಡಿಒಗಳು ಸರ್ಕಾರದ ಆದೇಶ ಪಾಲಿಸುತ್ತಿಲ್ಲ ಎನ್ನುವ ದೂರುಗಳೂ ಇವೆ.

ಕಚೇರಿಯ ವ್ಯಾಪ್ತಿಯಲ್ಲಿ ಅಥವಾ ಹಳ್ಳಿಗಳಲ್ಲಿ ಉಳಿದುಕೊಳ್ಳಲು ಮೂಲ ಸೌಲಭ್ಯಗಳ ವ್ಯವಸ್ಥೆ ಇಲ್ಲ. ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಪಟ್ಟಣಗಳಲ್ಲಿ ವಾಸಿಸುತ್ತಿದ್ದೇವೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪಿಡಿಒ.

‘ಸದ್ಬಳಕೆಯಾಗದ ಸರ್ಕಾರಿ ಕಟ್ಟಡಗಳನ್ನು ಗುರುತಿಸಿ ಆಧುನೀಕರಣಗೊಳಿಸಬೇಕು. ಅಲ್ಲಿ ಸೌಲಭ್ಯ ಕಲ್ಪಿಸಿ ಅಧಿಕಾರಿಗಳು ಕೇಂದ್ರ ಸ್ಥಾನಗಳಲ್ಲಿ ವಾಸಿಸುವಂತೆ ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕು ಎನ್ನುತ್ತಾರೆ ಮಿಂಚಲಹಳ್ಳಿ ಗ್ರಾಮದ ಜಿ. ನರಸಿಂಹ.

ಪಿಡಿಒಗಳ ವಿರುದ್ಧ ಕ್ರಮ

ತಾಲೂಕಿನಲ್ಲಿ ಪಿಡಿಒಗಳ ಸಂಖ್ಯೆ ಕಡಿಮೆ ಇದೆ. ಎರಡೆರಡು ಪಂಚಾಯಿತಿ ಜವಾಬ್ದಾರಿಯನ್ನು ಒಬ್ಬರಿಗೆ ವಹಿಸಿದ್ದೇವೆ. ಈಗಾಗಲೇ ತಾಲೂಕಿನ ಇಒ ಅವರಿಗೆ ಕೇಂದ್ರ ಸ್ಥಾನದಲ್ಲಿ ವಾಸವಿರುವ ಪಿಡಿಒ ಅಧಿಕಾರಿಗಳ ಮಾಹಿತಿ ನೀಡಲು ಸೂಚಿಸಲಾಗಿದೆ. ಮಾಹಿತಿ ಬಂದ ತಕ್ಷಣವೇ ಕೇಂದ್ರ ಸ್ಥಾನದಲ್ಲಿ ಇಲ್ಲದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಡಾ. ನವೀನ್ ಭಟ್, ವೈ. ಜಿ. ಪಂ ಸಿಇಒ

ಜನರ ಕೆಲಸಕ್ಕೆ ಅಡ್ಡಿ

ಅಧಿಕಾರಿಗಳು ಸಮಾಜಕ್ಕೆ ಮಾದರಿ ಆಗಿರಬೇಕು. ಗ್ರಾಮ ಮಟ್ಟದಲ್ಲಿ ಪಂಚಾಯಿತಿಯು ಮುಖ್ಯ ಆಡಳಿತ ಕೇಂದ್ರವಾಗಿದೆ. ಇಂತಹ ಕಡೆಯೇ ಅಧಿಕಾರಿಗಳು ಇಲ್ಲದಿದ್ದರೆ ಕೆಲಸ ಕಾರ್ಯಗಳು ಸರಿಯಾಗಿ ಆಗುವುದಿಲ್ಲ.

ಹರೀಶ ಜಿ.ವಿ, ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.