ಗುಡಿಬಂಡೆ: ಇಲ್ಲಿನ ದೇವರಾಜ್ ವೈನ್ಶಾಪ್ಗೆ ಭಾನುವಾರ ಕನ್ನ ಹಾಕಿರುವ ಕಳ್ಳರು, ಬಾರ್ನಲ್ಲಿದ್ದ ₹1.20 ಲಕ್ಷ ಮೌಲ್ಯದ ಮದ್ಯ ಹಾಗೂ ಡಿವಿಆರ್ ಸಹಿತವಾಗಿ ಸಿಸಿ ಕ್ಯಾಮೆರಾಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದು ತಿಂಗಳ ಹಿಂದೆಯಷ್ಟೇ ಇದೇ ಬಾರ್ನಲ್ಲಿ ಕಳ್ಳತನವಾಗಿತ್ತು. ಇದೀಗ ಮತ್ತೆ ಕಳ್ಳತನವಾಗಿದೆ.

ಮಾಲೀಕನ ಮಗ ದೀಕ್ಷಿತ್ ಮಾತನಾಡಿ, ಬಾರ್ನ ಗೋಡೌನ್ ಬಾಗಿಲು ಮುರಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಕೌಂಟರ್ನಲ್ಲಿದ್ದ ಸುಮಾರು ₹10 ಸಾವಿರಕ್ಕೂ ಹೆಚ್ಚು ನಗದು ಹಾಗೂ ₹1.10 ಲಕ್ಷ ಮೌಲ್ಯದ ಮದ್ಯದ ಬಾಟಲ್ಗಳನ್ನು ಕಳ್ಳತನ ಮಾಡಿ, ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.