ಚಿಂತಾಮಣಿ: ಉಪಲೋಕಾಯುಕ್ತ ಬಿ.ವೀರಪ್ಪ ಹಾಗೂ ಚಿಕ್ಕಬಳ್ಳಾಪುರದ ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರ ಕುಮಾರ್ ಶನಿವಾರ ಸಂಜೆ ನಗರದ ಸರ್ಕಾರಿ ಅಸ್ಪತ್ರೆ ಹಾಗೂ ನಗರದ ಕೆಲವು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಕಾರಿ ಅಸ್ಪತ್ರೆಯ ವೈದ್ಯರು ಔಷಧಿಗಳನ್ನು ಹೊರಗಡೆಯಿಂದ ತರಿಸಲು ಚೀಟಿ ಬರೆದುಕೊಡುವುದನ್ನು ಕಂಡು ವೀರಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಡವರ ಅನುಕೂಲಕ್ಕಾಗಿ ಔಷಧಿಗಳಿಗಾಗಿ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ.

ಅಕಸ್ಮಾತ್ ಯಾವುದಾದರೂ ತುರ್ತು ಔಷಧಿ ಬೇಕಾದರೆ ದಿನಕ್ಕೆ ₹ 10 ಸಾವಿರ ವರೆಗೂ ಖರ್ಚು ಮಾಡಿ ತರಿಸಿಕೊಳ್ಳಲು ಅವಕಾಶವಿದೆ. ವೈದ್ಯರು ಚೀಟಿ ಬರೆದುಕೊಡುವ ಹಳೆಯ ಹವ್ಯಾಸ ನಿಲ್ಲಿಸಿಲ್ಲ. ಸರ್ಕಾರಿ ವೈದ್ಯರು ಹೊರಗಡೆ ಬರೆದುಕೊಡುವುದು ಅವಮಾನ ಎಂದರು.

ಚೀಟಿ ಬರೆದುಕೊಟ್ಟ ವೈದ್ಯ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಆಸ್ಪತ್ರೆಯೊ ಅಥವಾ ಖಾಸಗಿ ಕ್ಲಿನಿಕ್ಕೊ ಎಂದು ಪ್ರಶ್ನಿಸಿದರು.

ಬಡರೋಗಿಗಳಿಗೆ ಚೀಟಿ ಬರೆದುಕೊಟ್ಟು ಹೊರಗಡೆಯಿಂದ ಔಷಧಿ ತರಿಸುತ್ತಿದ್ದೀರಿ. ಇಲ್ಲಿನ ಔಷಧಿಗಳು ಸಂಗ್ರಹಾರದಲ್ಲಿ ಕೊಳೆಯುತ್ತಿವೆ. ಅವಧಿಮುಗಿದ ನಂತರ ತ್ಯಾಜ್ಯಕ್ಕೆ ಹಾಕುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ವೈದ್ಯರ ಮೇಲೆ ನಂಬಿಕೆಯೇ ಇಲ್ಲ. ಬಹುತೇಕ ವೈದ್ಯರು ಹೊರಗಡೆಗೆ ಚೀಟಿ ಬರೆದುಕೊಡುತ್ತಾರೆ. ಇಲ್ಲಿಗೆ ಬರುವವರೆಲ್ಲ ಬಡವರು. ಶೌಚಾಲಯಗಳನ್ನು ರಿಪೇರಿ ಮಾಡುವುದಾಗಿ ಆಡಳಿತ ವೈದ್ಯಾಧಿಕಾರಿ ಸಂತೋಷ್ ತಿಳಿಸಿದ್ದಾರೆ. ಮತ್ತೊಮ್ಮೆ ಇಲ್ಲಿಗೆ ಬರುವೆ’ ಎಂದು ತಿಳಿಸಿದರು.

ರಾಜ್ಯ ಕಾನೂನು ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗಲೂ ಇಲ್ಲಿನ ಸರ್ಕಾರಿ ಅಸ್ಪತ್ರೆಗೆ ಭೇಟಿ ನೀಡಿದ್ದೆ. ಆಸ್ಪತ್ರೆಯ ವ್ಯವಸ್ಥೆ ಸಮಾಧಾನ ತರುವುದಿಲ್ಲ. ಗಂಡಸರ ಎಲ್ಲ ಶೌಚಾಲಯಗಳಿಗೂ ಬೀಗ ಹಾಕಲಾಗಿದೆ. ಮಹಿಳೆಯರ ಒಂದು ಶೌಚಾಲಯ ಮಾತ್ರ ತೆಗೆದಿದ್ದಾರೆ. ಹಾಸಿಗೆಗಳು ಹಾಳಾಗಿವೆ. ಆಡಳಿತ ವೈದ್ಯಾಧಿಕಾರಿ ರಿಪೇರಿ ಎಂದು ಸಬೂಬು ಹೇಳಿದ್ದಾರೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆಯ ಶೌಚಾಲಯಗಳು, ಔಷಧಿಗಳ ದಾಸ್ತಾನು ಕೊಠಡಿ ಸೇರಿದಂತೆ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಪರಿಶೀಲಿಸಿದರು.

ವಿದ್ಯಾರ್ಥಿನಿಲಯಗಳಿಗೆ ಭೇಟಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಪಕ್ಕದ ವಿದ್ಯಾರ್ಥಿನಿಯರ ನಿಲಯ ಹಾಗೂ ಸಬ್ ಜೈಲು ಬಳಿಯ ಮೂರು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದರು. ಎರಡು ದಿನಗಳ ಹಿಂದೆ ಊಟದಲ್ಲಿ ಜಿರಳೆ ಪತ್ತೆಯಾದ ಚಿತ್ರವನ್ನು ವಿದ್ಯಾರ್ಥಿಗಳು ತೋರಿಸಿದರು. ಆಗ ಉಪಲೋಕಾಯುಕ್ತರು ವಾರ್ಡನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನಿಮ್ಮ ಮನೆಯ ಮಕ್ಕಳಿಗೆ ಇದೇ ರೀತಿಯ ಊಟ ನೀಡುತ್ತೀರಾ? ಎಂದು ಪ್ರಶ್ನಿಸಿದರು. ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು. ಅಡುಗೆಕೋಣೆ, ಆಹಾರ ದಾಸ್ತಾನುಕೊಠಡಿ, ವಸತಿ ಕೊಠಡಿಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಂದ ಊಟ, ವಸತಿ ಬಗ್ಗೆ ಮಾಹಿತಿ ಪಡೆದರು.

ವಿದ್ಯಾರ್ಥಿನಿಲಯದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸುತ್ತಿಲ್ಲ. ಒಂದು ಕೊಠಡಿಯಲ್ಲಿ ಅನೇಕ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿರುವುದರಿಂದ ಇಕ್ಕಟ್ಟಾಗಿದೆ. ಅಭ್ಯಾಸ ಮಾಡಲು ತೊಂದರೆಯಾಗಿದೆ. ಅಡಿಗೆಯವರು ಸ್ಪಂದಿಸುವುದಿಲ್ಲ. ಬಟ್ಟೆ ತೊಳೆಯುವ ಸ್ಥಳ ಕೊಳಕಾಗಿದೆ. ಸಮರ್ಪಕ ಬೆಡ್ ವ್ಯವಸ್ಥೆ, ಸ್ನಾನಕ್ಕೆ ಬಿಸಿನೀರು ಇಲ್ಲ. ಸಾರು ಸರಿಯಾಗಿ ಮಾಡುವುದಿಲ್ಲ ಎಂದು ವಿದ್ಯಾರ್ಥಿನಿಯರು ಸಮಸ್ಯೆಗಳ ಬಗ್ಗೆ ತಿಳಿಸಿದರು.

ಕೊಠಡಿಗಳ ಕಿಟಕಿ, ಬಾಗಿಲು, ಆಹಾರ ದಾಸ್ತಾನು ಸ್ಥಳವನ್ನು ಗಮನಿಸಿ ಉಪಲೋಕಾಯುಕ್ತರು ಅಸಮಧಾನ ವ್ಯಕ್ತಪಡಿಸಿದರು. ಮಕ್ಕಳು ತಾವೇ ಕಸ ಹೊಡೆದು, ದೂಳು ಹೊಡೆಯುವ ವ್ಯವಸ್ಥೆ ಬದಲಾಗಬೇಕು. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.