ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ರೋಟರಿ ಪದಾಧಿಕಾರಿಗಳ ಪದಗ್ರಹಣ

ಕೋವಿಡ್‌ ನಿಯಂತ್ರಣವೇ ಸಂಸ್ಥೆಯ ಗುರಿ
Last Updated 13 ಆಗಸ್ಟ್ 2021, 3:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಎಸ್‌ಜೆಸಿಐಟಿಯಲ್ಲಿ ಗುರುವಾರ ರೋಟರಿ ಚಿಕ್ಕಬಳ್ಳಾಪುರ ಬಿಜಿಎಸ್ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ನಿಕಟಪೂರ್ವ ಅಧ್ಯಕ್ಷ ಎಸ್‌.ವಿ. ಮಧುಸೂದನ್ ಅವರು ನೂತನ ಅಧ್ಯಕ್ಷ ಜಿ. ನಾರಾಯಣ್ ಅವರಿಗೆ, ನಿಕಟಪೂರ್ವ ಕಾರ್ಯದರ್ಶಿ ವೈ.ಎ. ಸತೀಶ್, ನೂತನ ಕಾರ್ಯದರ್ಶಿ ಬಿ. ಸುನೀಲ್ ಕುಮಾರ್ ಅವರಿಗೆ ಅಧಿಕಾರ ವರ್ಗಾವಣೆ ಮಾಡಿದರು.

ಸೇವಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದೇ ರೋಟರಿ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಈ ಹಿಂದಿನ ಅಧ್ಯಕ್ಷರು, ಕಾರ್ಯದರ್ಶಿ ಅವರ ನೇತೃತ್ವದಲ್ಲಿ ನಡೆದ ಸೇವಾ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ನೂತನ ಪದಾಧಿಕಾರಿಗಳು ತಿಳಿಸಿದರು.

ಕೋವಿಡ್ ನಿಯಂತ್ರಣಕ್ಕೆ ರೋಟರಿ ಸಂಸ್ಥೆಯು ತನ್ನದೇ ಆದ ಕಾರ್ಯಸೂಚಿ ಹೊಂದಿದೆ. ಸೇವೆಯೇ ಸಂಸ್ಥೆಯ ಆದರ್ಶವಾಗಿದೆ. ಎಲ್ಲರ ಸಹಕಾರದಲ್ಲಿ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

ರೋಟರಿ ಸಂಸ್ಥೆಯು 2020–21ನೇ ಸಾಲಿನಲ್ಲಿ ನಡೆಸಿದ ಕಾರ್ಯಕ್ರಮಗಳ ಚಿತ್ರ ಪ್ರದರ್ಶಿಸಲಾಯಿತು. 2021–22ನೇ ಸಾಲಿನಲ್ಲಿ ಕೈಗೊಳ್ಳುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.

ವಿಜಯ್‌ನಾಗ್, ಎಂ.ಎನ್.ವತ್ಸಲಾ, ರಾಜನ್, ಎಂ.ವಿ.ಶಶಿಕುಮಾರ್, ಪುರುಷೋತ್ತಮ್, ಮೋಹನ್ ಬಾಬು, ಎಂ.ಟ.ನಟರಾಜ್, ಗೀತಾದೇವಿ ಸಂಸ್ಥೆಯ ನೂತನ ಪದಾಧಿಕಾರಿಗಳಾಗಿ ನೇಮಕವಾದರು. ಸಂಸ್ಥೆಯ ಉದಯಕುಮಾರ್ ಭಾಸ್ಕರ, ವಿ. ಶ್ರೀನಿವಾಸಮೂರ್ತಿ, ಎಸ್.ವಿ. ಸುಧಾಕರ್, ಡಿ.ಪಿ. ಮುನಿಯಪ್ಪ, ಜಿ.ಟಿ. ರಾಜು, ಜೆ. ಸುರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT