ಚಿಕ್ಕಬಳ್ಳಾಪುರ: ಅಪಘಾತದ ನಂತರ ನಟ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಗರ ಹೊರವಲಯದ ಅಗಲಗುರ್ಕಿ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ(ಬೆಂಗಳೂರು–ಹೈದರಾಬಾದ್) ಅವರು ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದ ಬಳಿಕ ಸಮೀಪದಲ್ಲಿದ್ದವರು ಅವರನ್ನು ಉಪಚರಿಸಿದರು. ಆ ಬಳಿಕ ಅವರು ಸಮೀಪದ ತೋಟವೊಂದಕ್ಕೆ ತೆರಳಿ ಅಲ್ಲಿ ನೃತ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಯತಿರಾಜ್ ಅಪಘಾತ ನಡೆದ ಗುರುವಾರ ಸಂಜೆ ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಮಾಧ್ಯಮದವರು ಅಪಘಾತ ಹೇಗೆ ಆಯಿತು ಎಂದು ಕೇಳಿದಾಗ ‘ಡಿಸ್ಕ್...’ ಹಾರಿತೆಂದು ಸಿನಿಮೀಯ ಶೈಲಿಯಲ್ಲಿ ಉತ್ತರಿಸಿದ್ದರು.
‘ರಾಯರ ದಯೆ ಮತ್ತು ನಿಮ್ಮ ಶುಭ ಹಾರೈಕೆಯಿಂದ ಯತಿರಾಜನಿಗೆ ಸಣ್ಣಗಾಯವೂ ಇಲ್ಲ’ ಎಂದು ಗುರುವಾರ ಜಗ್ಗೇಶ್ ಟ್ವೀಟ್ ಮಾಡಿದ್ದರು. ಆದರೆ, ಶುಕ್ರವಾರ ಬೆಳಿಗ್ಗೆ ‘ಮಗನಿಗೆ ಬಹಳ ಒಳಏಟು ಬಿದ್ದಿದೆ. ಪಕ್ಕೆ ಮೂಳೆ, ಬಲತೊಡೆ, ಲಿಗಮೆಂಟ್‌ಗೆ ಬಲವಾದ ಪೆಟ್ಟು ಬಿದ್ದಿದೆ. ಚಿಕಿತ್ಸೆ ನಡೆಯುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಯತಿರಾಜ್ ಅವರಿಗೆ ಮುಖ, ಹಣೆ ಮತ್ತು ಕಾಲಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಈ ವಿಡಿಯೊ ಕುರಿತ ಖಚಿತತೆ ಬಗ್ಗೆ ವಿವರಣೆ ಪಡೆಯಲು ಜಗ್ಗೇಶ್ ಅವರನ್ನು ಸಂಪರ್ಕಿಸಿದಾಗ ಅವರು ಮೊಬೈಲ್ ಕರೆ ಸ್ವೀಕರಿಸಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.