ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಸಂಭ್ರಮದ ಖಾದ್ರಿ ಲಕ್ಷ್ಮಿನರಸಿಂಹ ರಥೋತ್ಸವ

Published 28 ಮಾರ್ಚ್ 2024, 13:36 IST
Last Updated 28 ಮಾರ್ಚ್ 2024, 13:36 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟಗಲ್ ಶಿಂಗರೇಪಲ್ಲಿ ಮಜರಾ ರಾಗುಟ್ಟಹಳ್ಳಿಯಲ್ಲಿನ ಖಾದ್ರಿ ಲಕ್ಷ್ಮಿನರಸಿಂಹ ರಥೋತ್ಸವ ಗುರುವಾರ ಸಂಭ್ರಮದಿಂದ ನಡೆಯಿತು.

ರಾಜ್ಯ ವಿವಿಧ ಭಾಗಗಳಿಂದ ಹಾಗೂ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ರಾಸು ಜಾತ್ರೆಗೆ ಆಗಮಿಸುತ್ತವೆ. ಉತ್ತಮ ರಾಸುಗಳಿಗೆ ಬಹುಮಾನವನ್ನು ದೇವಾಲಯದಿಂದ ನೀಡಲಾಗುತ್ತದೆ.

ಹೋಮ, ಹವನ, ಹೂವಿನ ಅಲಂಕಾರ, ಅಭಿಷೇಕ, ಪ್ರಧಾನಪೂಜೆ, ಕಳಶ ಸ್ಥಾಪನೆ, ನವಗ್ರಹಗಳ ಪೂಜೆ, ನಾಗದೇವರ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಉತ್ಸವಮೂರ್ತಿಯನ್ನು ಮಂಗಳವಾದ್ಯದಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ದೇವಾಲಯದ ಧರ್ಮದರ್ಶಿ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಮಾಡಿರುವ ಹೂವಿನ ಅಲಂಕಾರ.
ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಮಾಡಿರುವ ಹೂವಿನ ಅಲಂಕಾರ.

ರಥೋತ್ಸವ ಮೆರವಣಿಗೆಯಲ್ಲಿ ತಮಟೆ ವಾದ್ಯ, ಕೋಲಾಟ, ಭಜನೆ ಸೇರಿದಂತೆ ಹಲವಾರು ಜನಪದ ಹಾಗೂ ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT