ಬಾಗೇಪಲ್ಲಿ: ತಾಲ್ಲೂಕಿನ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹುಡ್ಯ ಗ್ರಾಮದ ರೈತ ಎಲ್.ಮಂಜುನಾಥರೆಡ್ಡಿ ಹೊಲದಲ್ಲಿ ಶನಿವಾರ ಎಸ್ಆರ್ಟಿ ವಿಧಾನದಲ್ಲಿ ಸಿರಿಧಾನ್ಯಗಳ ಬೆಳೆಸುವಿಕೆ ಹಾಗೂ ಪ್ರಾಥಮಿಕ ಸಂಸ್ಕರಣೆ ಕುರಿತು ಪ್ರಾಯೋಗಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದಲ್ಲಿ ಸಿರಿಧಾನ್ಯ ಬೆಳೆಸುವಿಕೆ, ಸಂಸ್ಕರಣೆ, ಹವಾಮಾನ ಹಾಗೂ ರೈತಸ್ನೇಹಿ ಕೃಷಿ ವಿಧಾನಗಳ ಬಗ್ಗೆ ಗ್ರಾಮದ ರೈತರಿಗೆ, ರೈತ ಸಂಘಟನೆಗಳ ಮುಖಂಡರಿಗೆ ಹಾಗೂ ಬೆಸ್ಟ್ ಯುನಿವರ್ಸಟಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಹೊಲದಲ್ಲಿ ಟ್ರ್ಯಾಕ್ಟರ್ ಮಾದರಿಯ ಯಂತ್ರದಿಂದ ಸಿರಿಧಾನ್ಯ ಬಿತ್ತುವುದು, ಸಿರಿಧಾನ್ಯ ಬೆಳೆಯುವುದರ ಲಾಭ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಿರಿಧಾನ್ಯಗಳ ತಜ್ಞ ಲಕ್ಷ್ಮಿನಾರಾಯಣರೆಡ್ಡಿ ಪರಿಚಯ ಮಾಡಿದರು.

ಸಿರಿಧಾನ್ಯಗಳನ್ನು ಬೆಳೆಯುವ ರೈತರ ಸಂಖ್ಯೆ ಕಡಿಮೆ ಆಗುತ್ತಿದೆ. ಇದರಿಂದ ಎಸ್ಆರ್ಟಿ ವಿಧಾನದಲ್ಲಿ ಸಿರಿಧಾನ್ಯ ಬೆಳೆ, ಸಂಸ್ಕರಣೆ, ಲಾಭದ ಬಗ್ಗೆ ರೈತರು ಅರಿವು ಪಡೆದುಕೊಳ್ಳಬೇಕು. ಸಿರಿಧಾನ್ಯಗಳಿಗೆ ಜೈವಿಕ ಗೊಬ್ಬರ ಮುಖ್ಯ. ಸಿರಿಧಾನ್ಯ ಸೇವಿಸುವುದರಿಂದ ಹೃದಯ ಸಂಬಂಧಿತ ರೋಗ ತಡೆಯಬಹುದು ಎಂದರು.

ಸೆಲ್ಕೋ ಫೌಂಡೇಷನ್ನ ಜಗದೀಶ್, ರೋಹಿತ್ ಐಎನ್ಎವಿ ಕಂಪನಿ ವೆಂಕಟರಾವ್, ಎಸ್ಆರ್ಟಿ ಫೌಂಡೇಷನ್ ಪರಶುರಾಮ್ ಮತ್ತು ಮಯೂರ್, ರೈತ ಮುಖಂಡ ಜಿ.ಎಂ.ರಾಮಕೃಷ್ಣಪ್ಪ, ಪ್ರಾಂತ ರೈತ ಮುಖಂಡ ಹೊಸಹುಡ್ಯ ಶ್ರೀನಿವಾಸರೆಡ್ಡಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಎನ್.ಗೋವಿಂದರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಕೃಷಿ ಅಧಿಕಾರಿ ನಾರಾಯಣರೆಡ್ಡಿ, ಎಚ್.ಟಿ.ಗೋವಿಂದಪ್ಪ, ಎಚ್.ವಿ.ಭಾಸ್ಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.