ಚಿಕ್ಕಬಳ್ಳಾಪುರ: ‘ಜಿಲ್ಲಾಡಳಿತ ಮತ್ತು ಈ ಕ್ಷೇತ್ರದ ಜನಪ್ರತಿನಿಧಿ ಹಣಕ್ಕೆ ಮಾರಿಕೊಂಡಿದ್ದಾರೆ. ಆದ್ದರಿಂದಲೇ ಇಂತಹ ಶೂಟೌಟ್ ನಡೆದಿವೆ’ ಎಂದು ಸಂಸದ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನಗಾನಕೊಪ್ಪದಲ್ಲಿ ನಡೆದಿರುವ ರೈತರ ಮೇಲೆ ಗುಂಡಿನ ದಾಳಿ ಖಂಡಿಸಿ ವಿಡಿಯೊ ಬಿಡುಗಡೆ ಮಾಡಿರುವ ಅವರು, ‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಿಣಕನಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಗಾನಕೊಪ್ಪದಲ್ಲಿ ಗಣಿಗಾರಿಕೆ ವಿರೋಧಿಸಿ ಜನರು, ಯುವ ಸಮುದಾಯ ಹೋರಾಟ ನಡೆಸಿತ್ತು. 10 ವರ್ಷದಿಂದ ನಾನು ಇಲ್ಲಿ ಗಣಿಗಾರಿಕೆ ನಡೆಸಲು ಬಿಟ್ಟಿರಲಿಲ್ಲ. ಇದರಿಂದ ನನಗೆ ರಾಜಕೀಯವಾಗಿ ನಷ್ಟವೂ ಆಯಿತು ಎಂದಿದ್ದಾರೆ.

ರಾಜಕೀಯವಾಗಿ ನಷ್ಟವಾದರೂ ಜನರ ಪರವಾಗಿ ಇದ್ದೆ. ಹೋರಾಟಕ್ಕೆ ಸ್ಪಂದಿಸಿದ್ದೆ. ಆದರೆ ಈಗಿರುವ ವ್ಯಕ್ತಿ (ಶಾಸಕ) ಆ ಗ್ರಾಮಕ್ಕೆ ಭೇಟಿ ನೀಡಿ ಸಿನಿಮಾ ಡೈಲಾಗ್ ಹೊಡೆದಿದ್ದರು. ಯಾವುದೇ ಕಾರಣಕ್ಕೂ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದಿದ್ದರು. ಆದರೆ ಈಗ ಎಷ್ಟು ಹಣಕ್ಕೆ ಮಾರಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಹಣ ಕೊಟ್ಟರೆ ಜಿಲ್ಲಾಧಿಕಾರಿ ಯಾವುದಕ್ಕೆ ಬೇಕಾದರೂ ಸಹಿ ಮಾಡುವರು. ಪೊಲೀಸರು ಸತ್ತು ಹೋಗಿದ್ದಾರೆ. ಜಿಲ್ಲಾಡಳಿತ ಮತ್ತು ಇಲ್ಲಿನ ಜನಪ್ರತಿನಿಧಿ ಹಣಕ್ಕೆ ಮಾರಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ನನಗೆ ಈಗ 50 ವರ್ಷ. ನಾನು ಕಂಡಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎಂದಿಗೂ ಇಂತಹ ಶೂಟೌಟ್ ನಡೆದಿರಲಿಲ್ಲ. ಕಾನೂನಿನ ಮೇಲೆ ಹಿಡಿತವೇ ಇಲ್ಲ. ಇದಕ್ಕೆಲ್ಲ ಜನರೇ ಬುದ್ದಿ ಕಲಿಸುವ ದಿನ ದೂರವಿಲ್ಲ. ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ಆಗಬೇಕು ಎಂದಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ದೇಶದಲ್ಲಿಯೇ ಹೆಸರು ತರಬೇಕು ಎಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಆದರೆ ಈಗ ಶೂಟೌಟ್ ಮಟ್ಟಕ್ಕೆ ತಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.