ಚಿಕ್ಕಬಳ್ಳಾಪುರ: ದಲಿತ ನಾಯಕ ಹಾಗೂ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ನಿಮ್ಮ (ಪ್ರದೀಪ್ ಈಶ್ವರ್) ಕಾಟ ತಾಳದೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಅವರು ದಲಿತರು ಎನ್ನುವ ಪರಿಜ್ಞಾನ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಇರಲಿಲ್ಲವೇ ಎಂದು ಮಹಾನಾಯಕ ಅಂಬೇಡ್ಕರ್ ಸೇನೆ ಅಧ್ಯಕ್ಷ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ದಲಿತರ ಪರ ಎಂದು ಅಂಬೇಡ್ಕರ್ ಭಾವಚಿತ್ರ ಹಿಡಿದು ಶಾಸಕರು ಮೆರವಣಿಗೆ ನಡೆಸುವರು. ಆದರೆ ಒಳಗೊಂದು ಹೊರಗೊಂದು ಎನ್ನುವಂತೆ ಇದ್ದಾರೆ. ನೀವು ಕಾಂಗ್ರೆಸ್ಗೆ ಬಂದು ಎಷ್ಟು ವರ್ಷವಾಯಿತು? ಕಾಂಗ್ರೆಸ್ ಯುವ ಘಟಕದ ರಾಜ್ಯ ಪದಾಧಿಕಾರಿಯಾಗಿದ್ದ ಮುನಿಯಪ್ಪ ಅವರ ಪುತ್ರ, ಎಸ್.ಎಂ.ಜಗದೀಶ್ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದಿರಿ ಎಂದರು.

ನಾವು ಕಾಂಗ್ರೆಸ್ ಅಥವಾ ಬಿಜೆಪಿ ಪರವಲ್ಲ. ಸಮುದಾಯಕ್ಕಾಗಿ ಹೋರಾಟ ನಡೆಸುವವರು. ಜಗದೀಶ್ ಪರವಾಗಿ ನಾವು ಹೋರಾಟ ನಡೆಸಿದಾಗ ದಲಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿರಿ. ಪರಿಶಿಷ್ಟರನ್ನು ಪರಿಶಿಷ್ಟರ ವಿರುದ್ಧವೇ ಎತ್ತಿಕಟ್ಟುವಿರಿ. ನೀವು ದಲಿತರ ಪರವೇ’ ಎಂದು ಪ್ರಶ್ನಿಸಿದರು.

ನಿಮ್ಮಾಕಲಕುಂಟೆಯಲ್ಲಿ ಎಸ್ಟಿ ಸಮುದಾಯದ ವ್ಯಕ್ತಿಯೊಬ್ಬರ 400 ಗಿಡಗಳನ್ನು ನಿಮ್ಮ ಹಿಂಬಾಲಕರು ಕಿತ್ತು ಹಾಕಿದರು. ಆಗ ದಲಿತರು ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ವಿಚಾರವಾಗಿ ಶಾಸಕರ ಮನೆ ಎದುರು ತಮಟೆ ಚಳವಳಿ ಮಾಡಿ ಮನವಿ ಸಲ್ಲಿಸಿದೆವು. ಸಿ.ಎಂ ಅವರ ಜೊತೆ ಮಾತನಾಡಿ ಎಂದು ಕೋರಿದೆವು. ಆದರೆ ನೀವು ಆ ಕೆಲಸ ಮಾಡಲಿಲ್ಲ ಎಂದರು.

ಮೃತ ಚಾಲಕ ಬಾಬು ಅವರ ಕುಟುಂಬಕ್ಕೆ ನ್ಯಾಯ ಕೊಡಿಸೋಣ. ಅದನ್ನು ಬಿಟ್ಟು ದಲಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಹರೀಶ್ ರೆಡ್ಡಿ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

‘ಕಾಂಗ್ರೆಸ್ ನಾಯಕರೇ ಮೂಲೆಗುಂಪು’

ಪ್ರದೀಪ್ ಈಶ್ವರ್ ಅವರನ್ನು ಗೆಲ್ಲಿಸಲು ಹೋರಾಟ ನಡೆಸಿದವರು ಈಗ ಅವರ ಜೊತೆಯಲ್ಲಿ ಯಾರೂ ಇಲ್ಲ. ಕಾಂಗ್ರೆಸ್ನ ಹಿರಿಯರು ಮತ್ತು ಮೂಲ ಕಾಂಗ್ರೆಸ್ ನಾಯಕರು ಮೂಲೆಗುಂಪಾಗಿದ್ದಾರೆ ಎಂದು ನಾರಾಯಣಸ್ವಾಮಿ ತಿಳಿಸಿದರು. ಕೆಲವೇ ಮಂದಿ ಮಾತ್ರ ನಿಮ್ಮ ಜೊತೆ ಇದ್ದಾರೆ. ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ಮೂಲೆಗುಂಪಾಗಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.