ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹಂಚಿಕೊಂಡು ಸಡಗರದಿಂದ ಸಂಭ್ರಮಿಸುತ್ತಾರೆ. ಪ್ರೇಮಿಗಳು ಪ್ರೀತಿಯ ಸಂಕೇತವಾದ ಗುಲಾಬಿ ಹೂ, ಚಾಕೋಲೇಟ್ ನೀಡಿ ಪರಸ್ಪರ ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಚಿತ್ರ
ADVERTISEMENT
ವ್ಯಾಲೆಂಟೈನ್ಸ್ ಡೇ ಸಂಭ್ರಮಕ್ಕೆ ನಂದಿಬೆಟ್ಟದತ್ತ ಜೋಡಿಗಳ ಪ್ರಯಾಣ
ಈ ದಿನ ಯುವಕ-ಯುವತಿಯರು ಪ್ರವಾಸಿತಾಣಗಳಿಗೆ ಭೇಟಿ ನೀಡಿ ಪ್ರಕೃತಿಯ ನಡುವೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇಚ್ಛಿಸುತ್ತಾರೆ. ಅನೇಕ ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ಹೋಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಬೇಕೆಂದು ಯೋಜಿಸುತ್ತಾರೆ.
ಪ್ರಜಾವಾಣಿ ಚಿತ್ರ
ಮಂಜು, ಮಬ್ಬುಗತ್ತಲಿನ ಇಬ್ಬನಿಯಿಂದ ಕೂಡಿರುವ ನಂದಿಬೆಟ್ಟವು ಅನೇಕ ಪ್ರೇಮಿಗಳ ನೆಚ್ಚಿನ ತಾಣವೂ ಆಗಿದೆ.
ಪ್ರಜಾವಾಣಿ ಚಿತ್ರ
ಪ್ರೇಮಿಗಳಿಗೆ ಈ ಬಾರಿ ನಂದಿ ಗಿರಿಧಾಮಕ್ಕೆ ಫೆ.14ಕ್ಕೆ (ಇಂದು) ಪ್ರವೇಶ ನಿರ್ಬಂಧಿಸಲಾಗಿದೆ.
ಪ್ರಜಾವಾಣಿ ಚಿತ್ರ
ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು, ಪ್ರವಾಸಿಗರು ನಂದಿ ಗಿರಿಧಾಮಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಂದಿ ಗಿರಿಧಾಮದ ಪ್ರವೇಶ ತಡೆಹಿಡಿಯಲಾಗಿದೆ.
ಪ್ರಜಾವಾಣಿ ಚಿತ್ರ
ನಂದಿ ಬೆಟ್ಟಕ್ಕೆ ಇಂದು(ಫೆ.14) ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.