ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ| ಉದ್ಯೋಗಾಧಾರಿತ ಹೊಸ ಕೋರ್ಸ್‌ ಆರಂಭ : ಸಚಿವ ಡಾ.ಎಂ.ಸಿ. ಸುಧಾಕರ್

Published 17 ಜುಲೈ 2023, 15:37 IST
Last Updated 17 ಜುಲೈ 2023, 15:37 IST
ಅಕ್ಷರ ಗಾತ್ರ

ಚಿಂತಾಮಣಿ: ‘ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2023-24ನೇ ಸಾಲಿನಿಂದ ಆಧುನಿಕ ಕಾಲಕ್ಕೆ ತಕ್ಕಂತೆ ನೂತನ ವಿಭಿನ್ನ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು. 

ಶನಿವಾರ ನಗರಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದ ಪ್ರಥಮ ದರ್ಜೆ ಕಾಲೇಜು ಮತ್ತು ಸ್ವಾತಕೋತ್ತರ ಕೇಂದ್ರಕ್ಕೆ ಬಿ.ಎ (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ)ಗೆ 100 ಸೀಟು, ಬಿ.ಕಾಂ (ಪ್ರವಾಸೋದ್ಯಮ ಮತ್ತು ಸಂಚಾರ ವ್ಯವಸ್ಥಾಪನೆ)ಗೆ 100 ಸೀಟು, ಬಿ.ಎ (ಸಾರ್ವಜನಿಕ ಆಡಳಿತ)ಗೆ 100, ಬಿಎಸ್‌ಡಬ್ಲ್ಯುಗೆ 100, ಬಿ.ಸಿ.ಎಗೆ 180, ಬಿ.ಕಾಂ(ಮಾರ್ಕೆಟಿಂಗ್ ಮತ್ತು ವ್ಯವಸ್ಥಾಪನೆ)ಗೆ 100, ಬಿ.ಕಾಂ(ಬಿಜಿನೆಸ್ ಅನಾಲಿಟಿಕ್ಸ್)75 ಸೇರಿದಂತೆ ಇನ್ನಿತರ ಕೋರ್ಸ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT