ಬುಧವಾರ, ಸೆಪ್ಟೆಂಬರ್ 30, 2020
20 °C

ಪೌಷ್ಟಿಕ ಆಹಾರದ ಕಿಟ್‌ಗಳ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ 120 ದಮನಿತ ಮಹಿಳೆಯರಿಗೆ ಹಾಗೂ ಸೋಂಕಿತರಿಗೆ ಮಂಗಳವಾರ ಚಿಕ್ಕಬಳ್ಳಾಪುರದ ಸೌಖ್ಯ ಸಂಜೀವಿನಿ ಸಂಸ್ಥೆ, ಬೆಂಗಳೂರಿನ ಸ್ವಸ್ತಿ ಸಂಸ್ಥೆ, ಗಿವ್ ಇಂಡಿಯಾ ಸಂಸ್ಥೆಗಳ ಸಹಯೋಗದಲ್ಲಿ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೌಖ್ಯ ಸಂಜೀವಿನಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಇಮ್ರಾನ್, ‘ಕಳೆದ 5 ತಿಂಗಳಿಂದ ವಿವಿಧ ಸಂಘ ಸಂಸ್ಥೆಗಳು, ದಾನಿಗಳು, ಹಾಗೂ ಸರ್ಕಾರದ ಸಹಕಾರದಿಂದ ದಿನಸಿ ಸಾಮಗ್ರಿಗಳು, ಔಷಧಿಗಳು, ಮಾಸ್ಕ್ ಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ, ಜಿಲ್ಲೆಯಾದ್ಯಂತ 823 ದಮನಿತ ಮಹಿಳೆಯರಿಗೆ ಹಾಗೂ ಸೋಂಕಿತರಿಗೆ ವಿತರಿಸಲಾಗಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷೆ ಲಕ್ಷ್ಮೀ, ಯೋಜನಾ ವ್ಯವಸ್ಥಾಪಕ ಸಂದೀಪ್, ಸಿಬ್ಬಂದಿಗಳಾದ ಸುಮ, ವರಲಕ್ಷ್ಮೀ, ಮಮತ, ಮಂಜುಳಾ, ಚೌಡಮ್ಮ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.